ರಾಜ್ಯದಲ್ಲಿ ಮತ್ತೆ ಸಿಎಂ ಬದಲಾವಣೆ?: ಯಾವ ಅಧಿಕಾರವೂ ಶಾಶ್ವತವಲ್ಲ ಎಂದು ಬೊಮ್ಮಾಯಿ!

ರಾಜ್ಯದಲ್ಲಿ ಮತ್ತೆ ಮುಖ್ಯಮಂತ್ರಿ ಬದಲಾವಣೆಯಾಗಲಿದೆ ಎಂಬ ಚರ್ಚೆ, ವದಂತಿ ಮುನ್ನೆಲೆಗೆ ಬಂದಿದೆ. ಇದಕ್ಕೆ ಪುಷ್ಠಿ ನೀಡುವಂತೆ ಮಾತನಾಡಿರುವ ಸಿಎಂ ಬಸವರಾಜ ಬೊಮ್ಮಾಯಿಯವರು ‘ಯಾವುದೇ ಅಧಿಕಾರವೂ ಶಾಶ್ವತವಲ್ಲ’ ಎಂದು ಹೇಳಿದ್ದಾರೆ. ಅವರ ಈ ಹೇಳಿಕೆಯಿಂದ ಸಿಎಂ ಬದಲಾವಣೆ ಖಚಿತವೆಂಬ ಅಭಿಪ್ರಾಯಗಳೂ ವ್ಯಕ್ತವಾಗುತ್ತಿವೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ತವರು ಕ್ಷೇತ್ರವಾದ ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ಭಾನುವಾರ ಮಾತಾಡುತ್ತಾ ಭಾವುಕರಾಗಿದ್ದಾರೆ. ಅಧಿಕಾರದ ಎಲ್ಲಾ ಸ್ಥಾನಗಳು ತಾತ್ಕಾಲಿಕ, ಯಾವುದು ಶಾಶ್ವತವಲ್ಲ ಎಂದಿದ್ದಾರೆ.

“ಯಾವುದೂ ಶಾಶ್ವತವಲ್ಲ, ಈ ಜೀವನ ಶಾಶ್ವತವಲ್ಲ, ನಾವು ಎಷ್ಟು ದಿನ ಬದುಕುತ್ತೇವೆ ಎಂಬುದು ನಮಗೆ ತಿಳಿದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅಧಿಕಾರದ ಎಲ್ಲಾ ಹುದ್ದೆಗಳೂ ಶಾಶ್ವತವಲ್ಲ. ಈ ಬಗ್ಗೆ ನಾವು ನಿರಂತರವಾಗಿ ಜಾಗೃತರಾಗಿರಬೇಕು. ಕ್ಷೇತ್ರದ ಹೊರಗಡೆ ಮಾತ್ರ ನಾನು ಸಿಎಂ, ಇಲ್ಲಿ ಬಂದಾಗ ಕೇವಲ ಬಸವರಾಜ ಬೊಮ್ಮಾಯಿ” ಎಂದು ಲಿಂಗಾಯತ ಪಂಚಮಸಾಲಿ ಸಮುದಾಯ ಭವನದ ಕಾಮಗಾರಿಗೆ ಅಡಿಗಲ್ಲು ಮತ್ತು ಕಿತ್ತೂರು ರಾಣಿ ಚನ್ನಮ್ಮ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಕೃಷಿ ಕಾಯ್ದೆಗಳ ವಾಪಸಾತಿ ಕುರಿತು ರೈತರೊಂದಿಗೆ ಮಾತುಕತೆಗೆ ಸಿದ್ದ – ಬಸವರಾಜ ಬೊಮ್ಮಾಯಿ
“ನಿಮ್ಮೆಲ್ಲರ ಆಶೀರ್ವಾದ ಮತ್ತು ಸಹಕಾರದಿಂದಲೇ ನಾನು ರಾಜ್ಯದ ಸಿಎಂ ಆಗಿದ್ದೇನೆ. ನಾನು ಯಾವಾಗಲೂ ಹೇಳುವ ಒಂದು ವಿಷಯವೆಂದರೆ, ನಾನು ಈ ಕ್ಷೇತ್ರದಿಂದ ಹೊರಗಿರುವಾಗ ನಾನು ಗೃಹ ಸಚಿವ, ಜಲಸಂಪನ್ಮೂಲ ಸಚಿವನಾಗಿರಬಹುದು. ಆದರೆ, ನಾನು ಇಲ್ಲಿಗೆ ಹಿಂತಿರುಗಿದಾಗಲೆಲ್ಲಾ ನಾನು ಬಸವರಾಜ ಬೊಮ್ಮಾಯಿ ಮಾತ್ರ” ಎಂದಿದ್ದಾರೆ.

“ನಿಮ್ಮ ಮನೆಗೆ ಬಂದಾಗ ನೀವು ನನಗೆ ರೊಟ್ಟಿ ತಿನ್ನಿಸಿದ್ದೀರಿ, ಅದನ್ನು ಎಂದಿಗೂ ಮರೆಯುವುದಿಲ್ಲ. ನಾನು ಯಾವುದೇ ಕೆಲಸ ಮಾಡಿದರೂ ನಿಮಗೆ ಸದಾ ಋಣಿಯಾಗಿರುತ್ತೇನೆ. ನನಗೆ ಯಾವುದೇ ದೊಡ್ಡ ಆಸೆಗಳಿಲ್ಲ. ಆದರೆ ನನ್ನ ಕ್ಷೇತ್ರದ ಜನರ ಪ್ರೀತಿಗೆ ಸದಾ ಪಾತ್ರನಾಗಬೇಕು ಎಂದು ಬಯಸುತ್ತೇನೆ” ಎಂದಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ ಈ ವರ್ಷದ ಜುಲೈನಲ್ಲಿ ಅಧಿಕಾರ ಸ್ವೀಕರಿಸಿದ್ದರು. ಬೊಮ್ಮಾಯಿ ಅವರ ಈ ಹೇಳಿಕೆ ರಾಜ್ಯದಲ್ಲಿ ಬಿಜೆಪಿ ಅಧಿಕಾರವಾಧಿಯಿರುವ ಸುಮಾರು 16 ತಿಂಗಳಲ್ಲಿ ಮತ್ತೊಂದು ನಾಯಕತ್ವ ಬದಲಾವಣೆಗೆ ಸಾಕ್ಷಿಯಾಗಲಿದೆ ಎನ್ನಲಾಗಿದೆ.

ಒಟ್ಟಾರೆ 5 ತಿಂಗಳ ಕಾಲ ಅಧಿಕಾರ ನಡೆಸಿರುವ ಸಿಎಂ ಬಸವರಾಜ ಬೊಮ್ಮಾಯಿ ಇಷ್ಟರಲ್ಲೇ ಅಧಿಕಾರ ಶಾಶ್ವತವಲ್ಲ ಎಂಬ ಮಾತುಗಳನ್ನಾಡುತ್ತಿರುವುದು ಹೈಕಮಾಂಡ್‌ನಿಂದ ಯಾವುದಾದರೂ ಸೂಚನೆ ಬಂದಿರಬಹುದು ಎಂಬ ಅನುಮಾನಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಹೆಣ್ಣಿಗೆ ತಾಯಿಯ ಗರ್ಭ – ಸಮಾಧಿ ಬಿಟ್ಟರೆ ಬೇರೆ ಯಾವುದೇ ಸುರಕ್ಷಿತ ಸ್ಥಳವಿಲ್ಲ: ಡೆತ್‌ನೋಟ್ ಬರೆದಿಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights