ಉತ್ತರ ಪ್ರದೇಶದಲ್ಲಿ ಎಸ್ಮಾ ಜಾರಿ: ಆರು ತಿಂಗಳುಗಳ ಕಾಲ ಪ್ರತಿಭಟನೆ ನಡೆಸದಂತೆ ನಿರ್ಬಂಧ!

ಉತ್ತರ ಪ್ರದೇಶದಲ್ಲಿ ಇನ್ನು ಕೆಲವೇ ತಿಂಗಳುಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಎಲ್ಲಾ ಪಕ್ಷಗಳು ಚುನಾವಣಾ ತಯಾರಿಯಲ್ಲಿವೆ. ಇದೇ ಸಂದರ್ಭದಲ್ಲಿ ಸರ್ಕಾರಿ ನೌಕರರು ಯಾವುದೇ ರೀತಿಯ ಪ್ರತಿಭಟನೆಗೆ ಇಳಿಯದಂತೆ ನಿಯಂತ್ರಿಸಲು ಅಲ್ಲಿನ ಸರ್ಕಾರ ರಾಜ್ಯದಲ್ಲಿ ಎಸ್ಮಾ ಜಾರಿಗೆ ತಂದಿದೆ.

ಉತ್ತರ ಪ್ರದೇಶದಲ್ಲಿ ಆರು ತಿಂಗಳುಗಳ ಕಾಲ ಸರ್ಕಾರಿ ನೌಕಕರು ಯಾವುದೇ ಪ್ರತಿಭಟನೆಯನ್ನು ಮಾಡುವಂತಿಲ್ಲ ಎಂದು ಹೇಳಲಾಗಿದೆ. ಈ ಆದೇಶದನ್ವಯ ಯಾವುದೇ ಸರ್ಕಾರಿ ಸೇವೆ, ನಿಗಮಗಳು ಮತ್ತು ಸ್ಥಳೀಯ ಸಂಸ್ಥೆಗಳ ಸಿಬ್ಬಂದಿ ಪ್ರತಿಭಟನೆ/ಮುಷ್ಕರಗಳನ್ನು ನಡೆಸುವಂತಿಲ್ಲ ಎಂದು ನಿರ್ಬಂಧ ಹೇರಲಾಗಿದ್ದು, ಉಲ್ಲಂಘಿಸಿದರೆ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಹೇಳಿದೆ.

ಪ್ರತಿಭಟನೆಗಿಳಿದು, ಸಾಮಾನ್ಯ ಜನಜೀವನ ನಿರ್ವಹಿಸಲು ಅಗತ್ಯವಾದ ಸೇವೆಗಳನ್ನು ನಿರಾಕರಿಸುವ ಸಿಬ್ಬಂದಿ ವಿರುದ್ಧ ಎಸ್ಮಾ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. ಎಸ್ಮಾ ಕಾಯ್ದೆ ಅಡಿಯಲ್ಲಿ ಪೊಲೀಸರು ಯಾವುದೇ ಸಂದರ್ಭದಲ್ಲಿ, ವಾರೆಂಟ್‌ ಇಲ್ಲದೇ ಬಂದಿಸಬುದು. ಆರೋಪಿಗಳಿಗೆ ಒಂದು ವರ್ಷದವರೆಗೆ ಜೈಲು ಅಥವಾ 1000 ರೂಪಾಯಿ ದಂಡ, ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ.

ಉತ್ತರ ಪ್ರದೇಶದ ರಾಜ್ಯ ವ್ಯವಹಾರಗಳಿಗೆ ಸಂಬಂಧಿಸಿದಂತೆ ಯಾವುದೇ ಸಾರ್ವಜನಿಕ ಸೇವೆ, ನಿಗಮಗಳು ಮತ್ತು ಸ್ಥಳೀಯ ಪ್ರಾಧಿಕಾರಗಳಲ್ಲಿ ಮುಷ್ಕರವನ್ನು ನಿಷೇಧಿಸಲಾಗಿದೆ ಎಂದು ಈ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಇದಾದ ನಂತರವೂ ಮುಷ್ಕರ ನಡೆಸುವವರ ವಿರುದ್ಧ ಕಾನೂನು ವ್ಯವಸ್ಥೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಹೇಳಿದೆ.

ಈ ಹಿಂದೆ, ಕೊರೊನಾ ಮೊದಲ ಅಲೆಯ ಭೀಕರತೆ ಇದ್ದ ಸಂದರ್ಭದಲ್ಲಿಯೂ ಯುಪಿ ಸರ್ಕಾರ 2020ರ ಮೇ ತಿಂಗಳಲ್ಲಿ ಎಸ್ಮಾವನ್ನು ಜಾರಿಗೊಳಿಸಿ, ಮುಷ್ಕರಗಳನ್ನು ನಡೆಸದಂತೆ ನಿರ್ಬಂಧ ಹೇರಿತ್ತು. ಆ ಸಮಯದಲ್ಲಿ, 2020ರ ಮೇ ತಿಂಗಳಿಂದ ನವೆಂಬರ್‌ ತಿಂಗಳವರೆಗೆ ಎಷ್ಮಾ ಜಾರಿಯಲ್ಲಿತ್ತು.

ಎಸ್ಮಾ ಕಾಯ್ದೆಯನ್ನು 1966ರ ಅಡಿಯಲ್ಲಿ ಯುಪಿ ಸರ್ಕಾರವು ಜಾರಿಗೆ ತಂದಿತ್ತು. ಕಾಯ್ದೆಯು ರಾಜ್ಯಪಾಲರಿಂದ ಅನುಮೋದನೆಯೊಂದಿಗೆ ಜಾರಿಗೆ ಬಂದಿತ್ತು.

ಇದನ್ನೂ ಓದಿ: ಹೆಣ್ಣಿಗೆ ತಾಯಿಯ ಗರ್ಭ – ಸಮಾಧಿ ಬಿಟ್ಟರೆ ಬೇರೆ ಯಾವುದೇ ಸುರಕ್ಷಿತ ಸ್ಥಳವಿಲ್ಲ: ಡೆತ್‌ನೋಟ್ ಬರೆದಿಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights