ರಷ್ಯಾ ಪರೇಡ್‌ನಲ್ಲಿ ಭಾರತ-ಚೀನಾ ನಾಯಕರು ಭಾಗಿ; ಗಡಿ ಸಂಘರ್ಷಕ್ಕೆ ಬ್ರೇಕ್‌ ಹಾಕುತ್ತಾ ಈ ಭೇಟಿ!

ಜೂನ್ 23 ರಂದು ರಷ್ಯಾ-ಭಾರತ-ಚೀನಾ ತ್ರಿಪಕ್ಷೀಯ ವಿದೇಶಾಂಗ ಮಂತ್ರಿಗಳ ಸಭೆಯನ್ನು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಮಾಸ್ಕೋದಲ್ಲಿ ಆಯೋಜಿಸಿದ್ದಾರೆ.

ಜೂನ್ 24 ರಂದು ರಷ್ಯಾದ ಮಾಸ್ಕೋದಲ್ಲಿ ನಡೆಯುವ ವಿಜಯ ದಿನದ ಮೆರವಣಿಗೆಯಲ್ಲಿ ಭಾರತದ ರಕ್ಷಣಾ ಸಚಿವ ರಾಜ್‌ನಾಥ್‌ ಸಿಂಗ್‌ ಹಾಗೂ ಚೀನಾದ ಮಂತ್ರಿಗಳೂ ಪಾಲ್ಗೊಳ್ಳಲಿದ್ದು, ನವದೆಹಲಿ ಮತ್ತು ಬೀಜಿಂಗ್ (ಭಾರತ ಮತ್ತು ಚೀನಾ) ನಡುವಿನ ಉದ್ವಿಗ್ನತೆಯ ನಡುವೆ ಮಾಸ್ಕೋ ಕೀ ಪ್ಲಯರ್‌ ಆಗಿರಲಿದೆ.

ರಷ್ಯಾದ ಭಾರತೀಯ ರಾಯಭಾರಿ ಡಿ ಬಾಲಾ ವೆಂಕಟೇಶ್ ವರ್ಮಾ ಮತ್ತು ಉಪ ವಿದೇಶಾಂಗ ಸಚಿವ ಇಗೊರ್ ಮೊರ್ಗುಲೋವ್ ನಡುವೆ ದೂರವಾಣಿ ಕರೆ ನಡೆದಿದ್ದು, “ಹಿಮಾಲಯದಲ್ಲಿ ಭಾರತ ಮತ್ತು ಚೀನಾ ನಡುವಿನ ಗಡಿಯಲ್ಲಿ ವಾಸ್ತವಿಕ ನಿಯಂತ್ರಣ ರೇಖೆಯ ಬೆಳವಣಿಗೆಗಳು ಸೇರಿದಂತೆ ಪ್ರಾದೇಶಿಕ ಭದ್ರತೆಯ ಬಗ್ಗೆ ಅಧಿಕಾರಿಗಳು ಚರ್ಚಿಸಿದ್ದಾರೆ” ಎಂದು ರಷ್ಯಾದ ವಿದೇಶಾಂಗ ಸಚಿವಾಲಯದ ಸಂಕ್ಷಿಪ್ತ ಹೇಳಿಕೆ ತಿಳಿಸಿದೆ.

ಜೂನ್ 6 ರ ಭಾರತ ಮತ್ತು ಚೀನಾ ನಡುವಿನ ಲೆಫ್ಟಿನೆಂಟ್ ಜನರಲ್ ಮಟ್ಟದ ಮಾತುಕತೆಗೆ ಮುಂಚಿತವಾಗಿ, ವಿದೇಶಾಂಗ ಕಾರ್ಯದರ್ಶಿ ಹರ್ಷ್ ವರ್ಧನ್ ಶ್ರೀಂಗ್ಲಾ ಅವರು ರಷ್ಯಾ ರಾಯಭಾರಿ ನಿಕೋಲಾಯ್ ಕುಡಾಶೇವ್ ಅವರಿಗೆ ಎಲ್ಎಸಿಯ ಉದ್ದಕ್ಕೂ ಪರಿಸ್ಥಿತಿ ಹಾಗೂ “ಇತ್ತೀಚಿನ ಬೆಳವಣಿಗೆಗಳು” ಕುರಿತು ಮಾಹಿತಿ ನೀಡಿದ್ದಾರೆ.

ಇತ್ತೀಚಿನ ತಿಂಗಳುಗಳಲ್ಲಿ ಯುಎಸ್ ಚೀನಾದೊಂದಿಗೆ ಭಿನ್ನಾಭಿಪ್ರಾಯದಲ್ಲಿದ್ದಾಗ ಮಾಸ್ಕೋ-ಬೀಜಿಂಗ್ ಸಾಮಿಪ್ಯವು ಗಮನಾರ್ಹವಾಗಿದೆ.

ಮಂಗಳವಾರ ನಡೆದ ಆರ್‌ಐಸಿ (ರಷ್ಯಾ-ಭಾರತ-ಚೀನಾ) ಸಭೆಯಲ್ಲಿ ವಿದೇಶಾಂಗ ಮಂತ್ರಿಗಳ ಸಭೆಯಲ್ಲಿ ವಿದೇಶಾಂಗ ಸಚಿವ ಎಸ್.ಜೈಶಂಕರ್ ಮತ್ತು ಚೀನಾದ ರಾಜ್ಯ ಕೌನ್ಸಿಲರ್ ಮತ್ತು ವಿದೇಶಾಂಗ ಮಂತ್ರಿ ವಾಂಗ್ ಯಿ ಭಾಗಿಯಾಗಿದ್ದರು.

“ಎರಡು ರಾಷ್ಟ್ರಗಳ ವಿದೇಶಾಂಗ ಸಚಿವರ ಮಾತುಕತೆಯನ್ನು ಸ್ವಾಗತಿಸುತ್ತೇವೆ. ಉಭಯ ರಾಷ್ಟ್ರಗಳ ನಡುವಿನ ಉದ್ವಿಗ್ನತೆಯನ್ನು ಶಮನಮಾಡುವ ಪ್ರಯತ್ನಕ್ಕೆ ಬೆಂಬಲಿಸುವ ಆಶಾವಾಗಿಯಾಗಿರುತ್ತೇವೆ” ಎಂದು  ಎಫ್‌ಎಂಗಳ ನಡುವಿನ ಸಂಭಾಷಣೆ ಸೇರಿದಂತೆ ಎಲ್‌ಎಸಿಯಲ್ಲಿ ಉಲ್ಬಣಗೊಳ್ಳುವ ಗುರಿಯನ್ನು ನಾವು ಸ್ವಾಗತಿಸುತ್ತೇವೆ ಮತ್ತು ಆಶಾವಾದಿಯಾಗಿರುತ್ತೇವೆ” ಎಂದು ರಷ್ಯಾದ ರಾಯಭಾರಿ ಕುಡಾಶೇವ್ ಟ್ವೀಟ್ ಮಾಡಿದ್ದಾರೆ.

ರಷ್ಯಾದ ಸುದ್ದಿ ಸಂಸ್ಥೆ ಟಾಸ್ ಪ್ರಕಾರ, ರಷ್ಯಾ ಅಧ್ಯಕ್ಷೀಯ ವಕ್ತಾರ ಡಿಮಿಟ್ರಿ ಪೆಸ್ಕೋವ್, “ಚೀನಾ ಮತ್ತು ಭಾರತದ ಗಡಿಯಲ್ಲಿ ಮಿಲಿಟರಿ ನಡುವಿನ ಘರ್ಷಣೆಯ ಬಗ್ಗೆ ಕ್ರೆಮ್ಲಿನ್ ಕಳವಳ ವ್ಯಕ್ತಪಡಿಸಿದೆ. ಆದರೆ, ಉಭಯ ದೇಶಗಳು ಈ ಸಂಘರ್ಷವನ್ನು ತಾವಾಗಿಯೇ ಪರಿಹರಿಸಬಹುದೆಂದು ನಾವು ನಂಬಿದ್ದೇವೆ” ಎಂದು ಹೇಳಿದ್ದಾರೆ.

“ಚೀನೀ-ಭಾರತೀಯ ಗಡಿಯಲ್ಲಿ ಏನು ನಡೆಯುತ್ತಿದೆ ಎಂಬುದನ್ನು ನಾವು ಗಮನಿಸುತ್ತಿದ್ದೇವೆ. ಇದು ಆತಂಕಕಾರಿಯಾಗಿದೆ. ಆದರೆ, ಭವಿಷ್ಯದಲ್ಲಿ ಇಂತಹ ಸನ್ನಿವೇಶಗಳನ್ನು ನಿರ್ಮಾಣವಾಗದಂತೆ, ಗಡಿಯಲ್ಲಿ ಶಾಂತಿ ಮತ್ತು ಸ್ಥಿರತೆ ನೆಲೆಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಉಭಯ ರಾಷ್ಟ್ರಗಳು ಸಮರ್ಥವಾಗಿವೆ ಎಂದು ನಾವು ಪರಿಗಣಿಸುತ್ತೇವೆ” ಎಂದು ಪೆಸ್ಕೋವ್‌ ಹೇಳಿದ್ದಾರೆ.

“ಚೀನಾ ಮತ್ತು ಭಾರತವು ರಷ್ಯಾದ ನಿಕಟ ಪಾಲುದಾರರು ಮತ್ತು ಮಿತ್ರರಾಷ್ಟ್ರಗಳಾಗಿವೆ. ಪರಸ್ಪರ ಗೌರವದ ಮೇಲೆ ನಿರ್ಮಿಸಲಾದ ಮತ್ತು ಪರಸ್ಪರ ಲಾಭದಾಯಕ ಸಂಬಂಧಗಳನ್ನು ಹೊಂದಿವೆ” ಎಂದು ಅವರು ಒತ್ತಿ ಹೇಳಿದ್ದಾರೆ.

ಮೇ 09 ನಿಗದಿಯಾಗಿದ್ದ ವಿಜಯೋತ್ಸವ ಮೆರವಣಿಗೆಗೆ ಭಾರತ ಪ್ರಧಾನಿ ಮೋದಿ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಆಹ್ವಾನಿಸಲಾಗಿತ್ತು, ಆದರೆ, ಕೊರೊನಾ ಕಾರಣಕ್ಕೆ ಮುಂದೂಡಲ್ಪಡ ಮೆರವಣಿಗೆಗೆ ಈಗ ಬೀಜಿಂಗ್‌ನ ರಕ್ಷಣಾ ಸಚಿವ ಮಟ್ಟದ ಹಿರಿಯ ಪ್ರತಿನಿಧಿ ಹಾಗೂ ಭಾರತದ ರಕ್ಷಣಾ ಸಚಿವ ರಾಜ್‌ನಾಥ್‌ಸಿಂಗ್‌ ಹಾಜರಾಗುವ ಸಾಧ್ಯತೆಯಿದೆ. ಆದ್ದರಿಂದ ಇದು ಸಂಘರ್ಷ ತಡೆಯಲು ಎರಡು ಕಡೆಯವರಿಗೆ ಅವಕಾಶದ ಕಿಟಕಿಯನ್ನು ನೀಡಬಹುದು.

ರಷ್ಯಾದ ವಿಕ್ಟರಿ ಪೆರೇಡ್‌ನಲ್ಲಿ ಭಾರತ ಮತ್ತು ಚೀನಾದ ಸೈನಿಕರು ಭಾಗವಹಿಸಲಿವೆ. 75 ಸದಸ್ಯರ ಭಾರತೀಯ ಮಿಲಿಟರಿ ತಂಡವು ಈಗಾಗಲೇ ಮಾಸ್ಕೋವನ್ನು ತಲುಪಿದೆ. ಇದರ ನೇತೃತ್ವವನ್ನು ಸಿಖ್ ಲೈಟ್ ಕಾಲಾಳುಪಡೆ ರೆಜಿಮೆಂಟ್‌ನ ಪ್ರಮುಖ ಶ್ರೇಣಿಯ ಅಧಿಕಾರಿ ವಹಿಸಿದ್ದಾರೆ.

ರಷ್ಯಾದ ಮಾಸ್ಕೋದಲ್ಲಿ ನಡೆಯುವ ವಿಜಯ ಮೆರವಣಿಗೆಗೆ ಎರಡೂ ರಾಷ್ಟ್ರಗಳ ನಾಯಕರು ಬಾಗಿಯಾಗಲಿದ್ದು, ಭಾರತ-ಚೀನಾ ಗಡಿ ಉದ್ವಿಗ್ನತೆಯ ನಿಯಂತ್ರಣದ ಬಗ್ಗೆ ಮಾತುಕತೆ ನಡೆಯಬಹುದಾದ ಸಾಧ್ಯತೆಯನ್ನು ಎದುರು  ನೋಡಲಾಗುತ್ತಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights