ಬೌದ್ಧ ಸನ್ಯಾಸಿ ಮಠದಲ್ಲಿ ಹಾವುಗಳಿಗೆ ಆಶ್ರಯ : ಫೋಟೋಗಳು ಫುಲ್ ವೈರಲ್!

ಸಾಮಾನ್ಯವಾಗಿ ಹಾವುಗಳನ್ನು ಕಂಡರೆ ಕಿಲೋ ಮೀಟರ್ ದೂರ ಓಡುವ ಜನ ಇದ್ದಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಸಿಕ್ಕ ಹಾವುಗಳಿಗೆ ಆಶ್ರಯ ನೀಡುತ್ತಾನೆ ಅಂದರೆ ಹೇಗಾಗುತ್ತೆ..? ನಂಬಲು ಸಾಧ್ಯವಾಗದೇ ಇದ್ರು ಇದು ಸತ್ಯ.

ಚೀನಾದ ಬೌದ್ಧ ಸನ್ಯಾಸಿ ವಿಲಥಾ ಮ್ಯಾನ್ಮಾರ್‌ನ ಯಾಂಗೊನ್‌ನ ಸೀಕ್ತಾ ತುಖಾ ಟೆಟೂ ಮಠದಲ್ಲಿ ಹೆಬ್ಬಾವು, ವೈಪರ್ ಸೇರಿದಂತೆ ನಾಗರ  ಹಾವುಗಳಿಗೆ ಆಶ್ರಯ ನೀಡಿದ್ದಾರೆ. 69 ವರ್ಷದ ಸನ್ಯಾಸಿ ಹಾವುಗಳನ್ನು ರಕ್ಷಿಸಲು ನಿರ್ಧರಿಸಿದ್ದು ಎಲ್ಲರಿಗೂ ಆಶ್ಚರ್ಯ ಮೂಡಿಸಿದೆ.

ಸ್ನೇಕ್ ರಿಫ್ಯೂಜ್ ಯಾವಾಗ ಪ್ರಾರಂಭವಾಯಿತು?

ಈ ಹಾವಿನ ಆಶ್ರಯವನ್ನು ಐದು ವರ್ಷಗಳ ಹಿಂದೆ ಪ್ರಾರಂಭಿಸಲಾಯಿತು. ಜನರಿಗೆ, ಸರ್ಕಾರಿ ಸಂಸ್ಥೆ ಅಧಿಕಾರಿಗಳು ಹೀಗೆ ಯಾರಿಗೇ ಹಾವು ಸಿಗಲಿ ಅದನ್ನು ಕೊಲ್ಲದೇ ಸೆರೆಹಿಡಿದು ಸನ್ಯಾಸಿಗೆ ನೀಡಲಾಗುತ್ತದೆ. ಈತ ಹಾವುಗಳ ಸ್ಥಿತಿ ಗತಿ ನೋಡಿಕೊಂಡು ಅವುಗಳು ಆರೋಗ್ಯವಾಗಿದ್ದರೆ ಕಾಡಿಗೆ ಬಿಡಲು ಮುಂದಾಗುತ್ತಾನೆ. ಇಲ್ಲವಾದರೆ ಅವುಗಳಿಗೆ ಆಶ್ರಯ ನೀಡಿ ನೋಡಿಕೊಳ್ಳುತ್ತಾನೆ. ತನ್ನ ಕೇಸರಿ ನಿಲುವಂಗಿಯನ್ನು ಬಳಸಿ ಹಾವುಗಳನ್ನು ಸ್ವಚ್ಚಗೊಳಿಸುವ ವಿಲಥಾ ನೈಸರ್ಗಿಕ ಪರಿಸರ ಚಕ್ರವನ್ನು ರಕ್ಷಿಸುತ್ತಿದ್ದೇನೆ ಎಂದು ಹೇಳುತ್ತಾರೆ.

ಸನ್ಯಾಸಿ ಹಾವುಗಳಿಗೆ ಆಹಾರವನ್ನು ನೀಡಲು ಸರಿಸುಮಾರು 300 ಡಾಲರ್ ದೇಣಿಗೆಗಳನ್ನು ಅವಲಂಬಿಸಲಾಗಿದೆ. ಹಾವುಗಳನ್ನು ಮತ್ತೆ ಕಾಡಿಗೆ ಹೋಗಲು ಸಿದ್ಧ ಎಂದು ಭಾವಿಸುವವರೆಗೂ ವಿಲಥಾ ಹಾವುಗಳನ್ನು ಆಶ್ರಯದಲ್ಲಿರಿಸುತ್ತಾರೆ.

ಇತ್ತೀಚೆಗೆ, ವಿಲಥಾ ಹಲವಾರು ಹಾವುಗಳನ್ನು ಹ್ಲಾವ್ಗಾ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡುಗಡೆ ಮಾಡಿದರು. ಅವರು ಸ್ವಾತಂತ್ರ್ಯವಾಘಿ ಇಳಿಯುವುದನ್ನು ನೋಡಿ ಸಂತೋಷವಾಗಿದೆ. ಆದರೆ ಮತ್ತೆ ಸಿಕ್ಕಿಬಿದ್ದರೆ ಆತಂಕವಾಗುತ್ತದೆ ಎಂದು ಅವರು ಹೇಳುತ್ತಾರೆ. “ಹಾಔಉಗಳು ಕೆಟ್ಟ ಜನರಿಂದ ಸಿಕ್ಕಿಬಿದ್ದರೆ ಅವುಗಳನ್ನು ಕಪ್ಪು ಮಾರುಕಟ್ಟೆಗೆ ಮಾರಾಟ ಮಾಡಲಾಗುತ್ತದೆ ಅಥವಾ ಅವುಗಳನ್ನು ಸಾಯಿಸಲಾಗುತ್ತದೆ” ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.

ಆದರೆ ವನ್ಯಜೀವಿ ಸಂರಕ್ಷಣಾ ಸೊಸೈಟಿಯ ಸದಸ್ಯ ಕಲ್ಯಾರ್ ಪ್ಲಾಟ್ ಈ ಬಗ್ಗೆ ಪ್ರತಿಕ್ರಿಯಿಸಿ, “ಸಾಮಾನ್ಯವಾಗಿ ಜನರಿಗೆ ಹತ್ತಿರದಲ್ಲಿ ವಾಸಿಸುವುದು ಹಾವುಗಳಲ್ಲಿ ಒತ್ತಡವನ್ನು ಉಂಟುಮಾಡುತ್ತದೆ” ಹೀಗಾಗಿ ನಿರ್ದಿಷ್ಟ ಸಮಯದ ನಂತರ ಹಾವುಗಳನ್ನು ಕಾಡುಗಳಿಗೆ ಬಿಡುವುದು ಉತ್ತಮ ಎಂದಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights