ಮದುವೆ ಸಮಯದಲ್ಲಿ ವಿಭಿನ್ನವಾಗಿ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ ವರ : ಉಘೇ ಉಘೇ ಎಂದ ನೆಟ್ಟಿಗರು…

ಪ್ರಸ್ತುತ ಕೃಷಿ ವಿರೊಧಿ ಕಾನೂನಿನ ವಿರುದ್ಧ ದೇಶಾದ್ಯಂತ ರೈತರ ಪ್ರತಿಭಟನೆ ನಡೆಯುತ್ತಿದೆ. ಕೇಂದ್ರ ಸರ್ಕಾರ ತಂದ ಮೂರು ಕೃಷಿ ಕಾನೂನುಗಳ ವಿರುದ್ಧ ಪಂಜಾಬ್ ಹರಿಯಾಣದ ರೈತರು ಬೀದಿಗಿಳಿದಿದ್ದಾರೆ. ಮೂರು ಕೃಷಿ ಕಾನೂನುಗಳನ್ನು ಸರ್ಕಾರ ಬೇಗನೆ ಹಿಂತೆಗೆದುಕೊಳ್ಳಬೇಕೆಂದು ರೈತರು ಒತ್ತಾಯಿಸುತ್ತಿದ್ದಾರೆ. ದಿನಗಳು ಉರುಳಿದಂತೆ ರೈತರು ಇತರ ಜನರೊಂದಿಗೆ ಬೆರೆಯುತ್ತಿದ್ದಾರೆ. ಅಂತಹ ಒಂದು ಘಟನೆ ಹರಿಯಾಣದಿಂದ ಹೊರಬಂದಿದೆ.

ವರನೊಬ್ಬ ತನ್ನ ಮದುವೆಯ ಸಮಯದಲ್ಲಿ ರೈತ ಚಳವಳಿಯನ್ನು ಬೆಂಬಲ ಸೂಚಿಸಿದ್ದಾನೆ. ವರನು ತನ್ನ ವಧುವನ್ನು ತೆಗೆದುಕೊಳ್ಳಲು ಮೆರವಣಿಗೆಯಲ್ಲಿ ಹೋಗಿ, ಅವನು ತನ್ನದೇ ಆದ ಶೈಲಿಯಲ್ಲಿ ಬೆಂಬಲ ಸೂಚಿಸಿದ್ದಾನೆ. ವರ ವಧುವನ್ನು ಕರೆ ತರಲು ಕಾರು ಬಳಸದೇ ಟ್ರ್ಯಾಕ್ಟರ್ ಬಳಸಿ ಭಾರೀ ಸುದ್ದಿ ಮಾಡಿದ್ದಾನೆ.

ವರನು ಮರ್ಸಿಡಿಸ್ ಕಾರಿನ ಬದಲು ಟ್ರ್ಯಾಕ್ಟರ್‌ನಲ್ಲಿ ಸವಾರಿ ಮಾಡಲು ಆದ್ಯತೆ ನೀಡಿದ್ದಾನೆ. ಈ ಮೂಲಕ ರೈತ ಆಂದೋಲನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾನೆ.  ಈ ವೇಳೆ ವರ ಹೇಳಿದ್ದು ಹೀಗೆ, “ರೈತರು ಈ ದೇಶದ ದೊಡ್ಡ ಸಂಪತ್ತು. ಸರ್ಕಾರ ರೈತರ ಮಾತನ್ನು ಕೇಳಬೇಕು. ನಾವು ನಗರದಲ್ಲಿ ವಾಸಿಸಲು ಹೋಗುತ್ತಿದ್ದರೂ, ನಮ್ಮ ಬೇರುಗಳು ಕೃಷಿಯಾಗಿದೆ. ಇದನ್ನು ಮಾಡುವ ಮೂಲಕ, ರೈತರಿಗೆ ಸಾರ್ವಜನಿಕರ ಬೆಂಬಲವಿದೆ ಎಂಬ ಸಂದೇಶವನ್ನು ನೀಡಲು ನಾವು ಬಯಸುತ್ತೇವೆ ‘ ಎಂದಿದ್ದಾರೆ.

ಸದ್ಯ ವರ ರೈತರಿಗೆ ಬೆಂಬಲ ನೀಡಿದ ರೀತಿ ಕಂಡು ಜನ ಖುಷ್ ಆಗಿದ್ದಾರೆ. ಮಾತ್ರವಲ್ಲದೇ ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು ನೆಟ್ಟಿಗರಿಂದ ಭಾರೀ ಮೆಚ್ಚುಗೆ ಪಡೆದಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights