ಕೊರೊನಾ 2ನೇ ಅಲೆ: ಆಕ್ಸಿಜನ್ ಕೊರೆತೆಯಿಂದ ಯಾವುದೇ ಸಾವುಗಳಾಗಿಲ್ಲ: ಉತ್ತರ ಪ್ರದೇಶ ಸರ್ಕಾರ

ಕೊರೊನಾ ಎರಡನೇ ಅಲೆಯ ವೇಳೆ ರಾಜ್ಯದಲ್ಲಿ ಆಮ್ಲಜನಕದ ಕೊರತೆಯಿಂದ ಯಾವುದೇ ಸಾವುಗಳಾಗಿಲ್ಲ ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿದೆ.

ಗುರುವಾರ ವಿಧಾನ ಪರಿಷತ್ತಿಗೆ ಉತ್ತರಿಸಿರುವ ಸರ್ಕಾರ ರಾಜ್ಯದಲ್ಲಿ ಆಮ್ಲಜನಕ ಕೊರತೆ ಇರಲಿಲ್ಲ. ಆಕ್ಸಿಜನ್ ಕೊರತೆಯಿಂದ ಯಾವುದೇ ಸಾವುಗಳಾಗಿಲ್ಲ ಎಂದು ಹೇಳಿದೆ. ಆದರೆ ಸರ್ಕಾರದ ಈ ಪ್ರತಿಪಾದನೆಯನ್ನು ಪ್ರತಿಪಕ್ಷಗಳು ತಿರಸ್ಕರಿಸಿವೆ.

ಸಾಂಕ್ರಾಮಿಕ ರೋಗದಿಂದ ಸಾವನ್ನಪ್ಪಿದ 22,915 ರೋಗಿಗಳಲ್ಲಿ ಯಾರೊಬ್ಬರಲ್ಲೂ ‘ಆಮ್ಲಜನಕದ ಕೊರತೆಯಿಂದಾದ ಸಾವು’ ಎಂದು ಮರಣ ಪ್ರಮಾಣಪತ್ರದಲ್ಲಿ ಯಾವುದೇ ಉಲ್ಲೇಖವಿಲ್ಲ ಎಂದು ಸರ್ಕಾರ ಹೇಳಿದೆ.

ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ದೀಪಕ್ ಸಿಂಗ್ ಅವರಿಗೆ ಉತ್ತರಿಸಿದ ಆರೋಗ್ಯ ಸಚಿವ ಜೈ ಪ್ರತಾಪ್ ಸಿಂಗ್, ‘ಎರಡನೇ ಅಲೆಯಲ್ಲಿ ಆಮ್ಲಜನಕದ ಕೊರತೆಯಿಂದಾಗಿ ರಾಜ್ಯದಲ್ಲಿ ಯಾವುದೇ ಸಾವು ಸಂಭವಿಸಿಲ್ಲ’ ಎಂದು ಹೇಳಿದ್ದಾರೆ.

ಪೂರಕ ಪ್ರಶ್ನೆಯನ್ನು ಎತ್ತಿರುವ ದೀಪಕ್, ತನ್ನದೇ ಮಂತ್ರಿಗಳು ಆರೋಪಿಸಿದ್ದ ಇದೇ ರೀತಿಯ ಪ್ರಕರಣಗಳ ಬಗ್ಗೆ ಸರ್ಕಾರದ ಬಳಿ ವಿವರಗಳಿವೆಯೇ ಎಂದು ಕೇಳಿದ್ದರು.

“ರಾಜ್ಯದಲ್ಲಿ ಆಮ್ಲಜನಕದ ಕೊರತೆಯಿಂದ ಸಾವುಗಳು ಸಂಭವಿಸುತ್ತಿವೆ ಎಂದು ಹಲವು ಸಚಿವರು ಪತ್ರ ಬರೆದಿದ್ದಾರೆ. ಇದಲ್ಲದೇ ಹಲವು ಸಂಸದರು ಕೂಡ ಇಂತಹ ದೂರುಗಳನ್ನು ನೀಡಿದ್ದರು. ಆಮ್ಲಜನಕದ ಕೊರತೆಯಿಂದ ಸಾವನ್ನಪ್ಪಿದ ಹಲವು ಘಟನೆಗಳು ಬೆಳಕಿಗೆ ಬಂದಿದ್ದವು. ಇಡೀ ರಾಜ್ಯದಲ್ಲಿ ಈ ಸಾವುಗಳ ಬಗ್ಗೆ ಸರ್ಕಾರದ ಬಳಿ ಏನಾದರೂ ಮಾಹಿತಿ ಇದೆಯೇ. ಗಂಗಾನದಿಯಲ್ಲಿ ಮೃತದೇಹಗಳು ಹರಿಯುತ್ತಿದ್ದು, ಆಮ್ಲಜನಕದ ಕೊರತೆಯಿಂದ ಜನರು ನರಳುತ್ತಿರುವುದನ್ನು ಸರ್ಕಾರ ನೋಡಿಲ್ಲವೇ?” ಎಂದು ಅವರು ಕೇಳಿದ್ದರು.

ಇದಕ್ಕೆ ಸ್ಪಷ್ಟನೆ ನೀಡಿದ ಆರೋಗ್ಯ ಸಚಿವ ಜೈ ಪ್ರತಾಪ್, “ಆಸ್ಪತ್ರೆಗೆ ದಾಖಲಾದ ರೋಗಿಯು ಮೃತಪಟ್ಟರೆ ವೈದ್ಯರು ಮರಣ ಪ್ರಮಾಣ ಪತ್ರ ನೀಡುತ್ತಾರೆ. ರಾಜ್ಯದಲ್ಲಿ ಕೊರೊನಾ ಸಂತ್ರಸ್ತರಿಗಾಗಿ ವೈದ್ಯರು ನೀಡಿರುವ 22,915 ಮರಣ ಪ್ರಮಾಣ ಪತ್ರಗಳಲ್ಲಿ ಎಲ್ಲಿಯೂ ‘ಆಮ್ಲಜನಕದ ಕೊರತೆಯಿಂದ ಆದ ಸಾವು’ ಎಂಬ ಉಲ್ಲೇಖವಿಲ್ಲ” ಎಂದು ಅವರು ಹೇಳಿದ್ದಾರೆ.

“ಸಾಂಕ್ರಾಮಿಕ ಸಮಯದಲ್ಲಿ ಹಲವಾರು ಸಾವುಗಳು ಹಲವಾರು ಇತರ ಕಾಯಿಲೆಗಳಿಂದ ಉಂಟಾಗಿವೆ. ಆಮ್ಲಜನಕ ಕೊರತೆಯಾದಾಗ ಸರ್ಕಾರವು ಇತರ ರಾಜ್ಯಗಳಿಂದ ಆಮ್ಲಜನಕವನ್ನು ವ್ಯವಸ್ಥೆ ಮಾಡಿದೆ” ಎಂದು ಸಚಿವರು ಹೇಳಿದ್ದಾರೆ.

ಇದನ್ನೂ ಓದಿ: ಲೈಂಗಿಕ ಶೋಷಣೆ ಆರೋಪ: ಗೋವಾ ಬಿಜೆಪಿ ಸಚಿವ ಮಿಲಿಂದ್ ನಾಯಕ್ ರಾಜೀನಾಮೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights