Fact check: ಉಕ್ರೇನ್‌ನಲ್ಲಿ ನಕಲಿ ಮೃತದೇಹಗಳನ್ನು ಇಟ್ಟು ಮಾಧ್ಯಮಗಳು ಸುದ್ದಿ ಮಾಡಿದ್ದವೆ?

ರಷ್ಯಾ ಉಕ್ರೇನ್ ಮೇಲೆ ನಡೆಸುತ್ತಿದ್ದ ಯುದ್ಧಕ್ಕೆ ಬ್ರೇಕ್ ಬಿದ್ದಿದ್ದು ಉಭಯ ನಾಯಕರು ಪರಸ್ಪರ ಮಾತುಕತೆಗೆ ಮುಂದಾಗಿದ್ದಾರೆ. ಆದರೆ ಮಳೆ ನಿಂತರೂ ಮಳೆಹನಿ ನಿಲ್ಲದು ಎಂಬ ಮಾತಿನಂತೆ ಯುದ್ದ ತಾತ್ಕಾಲಿಕವಾಗಿ ನಿಂತಿದ್ದರು ಮಾಧ್ಯಮಗಳಲ್ಲಿ ಉಕ್ರೇನ್‌ಗೆ ಸಂಬಂಧಿಸಿದ ಯುದ್ಧಧ ಭೀಕರ  ವರದಿ ಮಾತ್ರ ನಿಂತಿಲ್ಲ. ಈ  ಮಧ್ಯೆ  ಪಾಶ್ಚಿಮಾತ್ಯ ಮಾಧ್ಯಮಗಳು ಉಕ್ರೇನಿಯನ್ ನಾಗರಿಕರ ನಕಲಿ ಮೃತದೇಹಗಳನ್ನು ತೋರಿಸುತ್ತಿವೆ ಎಂದು ಹೇಳುವ ಪೋಸ್ಟ್ ಮೂಲಕ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯ ಸತ್ಯಾಸತ್ಯತೆಗಳನ್ನು ಪರಿಶೀಲಿಸೋಣ.

 

 

ಫ್ಯಾಕ್ಟ್‌ಚೆಕ್:

ವೀಡಿಯೊದ ಸ್ಕ್ರೀನ್‌ಶಾಟ್‌ಅನ್ನು ರಿವರ್ಸ್ ಇಮೇಜ್ ಸರ್ಚ್ ಮಾಡಲಾಗಿದ್ದು, ಆಸ್ಟ್ರಿಯನ್ ಸುದ್ದಿ ವೆಬ್‌ಸೈಟ್‌ನಲ್ಲಿ ಇದೇ ರೀತಿಯ ದೃಶ್ಯಗಳೊಂದಿಗೆ ಪೂರ್ಣ ವೀಡಿಯೊ ಲಭ್ಯವಾಗಿದೆ. 04 ಫೆಬ್ರವರಿ 2022 ರಂದು ಅಪ್‌ಲೋಡ್ ಮಾಡಲಾದ ಪೂರ್ಣ ವೀಡಿಯೊವು ವಿಯೆನ್ನಾದಲ್ಲಿ ನಡೆದ ಪ್ರದರ್ಶನದ ದೃಶ್ಯಗಳು ಎಂದು ಹೇಳುತ್ತದೆ. OE24.TV ಯ ಅಧಿಕೃತ ಚಾನೆಲ್‌ನಿಂದ ಅದೇ ವೀಡಿಯೊವನ್ನು YouTube ನಲ್ಲಿ ಅಪ್‌ಲೋಡ್ ಮಾಡಲಾಗಿದೆ.

‘WIEN: DEMO GEGEN KLIMAPOLITIK’  (‘ವಿಯೆನ್ನಾ: ಹವಾಮಾನ ನೀತಿ ವಿರುದ್ಧ ಡೆಮೊ’) ವೀಡಿಯೊದಲ್ಲಿ ಜನರು ಬ್ಯಾನರ್‌ಗಳನ್ನು ಹಿಡಿದಿರುವುದನ್ನು ನೋಡಬಹುದು. ಅದರಲ್ಲಿ ‘ಹವಾಮಾನ ಸಂರಕ್ಷಣಾ ಕಾಯ್ದೆ ಜೀವಗಳನ್ನು ಉಳಿಸುತ್ತದೆ’ ಮತ್ತು ‘ಪ್ರಸ್ತುತ ಜಾರಿ ಮಾಡಲು ಹೊರಟಿರುವ ಹವಾಮಾನ ನೀತಿಗೆ ದಿಕ್ಕಾರ’ ಎಂದು ಬರೆಯಲಾಗಿದೆ. ಈ ಹೋರಾಟದಲ್ಲಿ ಭಾಗವಹಿಸಿದ ಕಾರ್ಯಕರ್ತರ ಸಂದರ್ಶನವನ್ನು ಅದೇ ದಿನ ಅಪ್‌ಲೋಡ್ ಮಾಡಿದ್ದು ಅದೇ ವೆಬ್‌ಸೈಟ್‌ನಲ್ಲಿ ನೋಡಬಹುದು.

ವಿಯೆನ್ನಾದಲ್ಲಿ ನಡೆದ ಘಟನೆಯನ್ನು ವರದಿ ಮಾಡಿದ ವ್ಯಕ್ತಿ OE24.TV ಯ ವರದಿಗಾರ, ‘ಮಾರ್ವಿನ್ ಬರ್ಗೌರ್’ ಎಂದು ಗುರುತಿಸಲಾಗಿದ್ದು. ತನ್ನ ಫೇಸ್‌ಬುಕ್ ಪುಟದಲ್ಲಿ ಮಾರ್ವಿನ್ ಬರ್ಗೌರ್ ವಿಯೆನ್ನಾದಲ್ಲಿ ‘ಫ್ರೈಡೇಸ್ ಫಾರ್ ಫ್ಯೂಚರ್’ ಎಂಬ ಹವಾಮಾನ ವೈಪರಿತ್ಯಕ್ಕೆ ಸಂಬಂಧಿಸಿದ ಪ್ರತಿಭಟನೆಯ ವೀಡಿಯೊ ಎಂದು ಸ್ಪಷ್ಟಪಡಿಸಿದ್ದಾರೆ. ಆಸ್ಟ್ರಿಯಾದಲ್ಲಿ ಹವಾಮಾನ ಬದಲಾವಣೆಯಿಂದಾಗಿ ಪ್ರತಿದಿನ 49 ಸಾವುಗಳು ಸಂಭವಿಸಬಹುದು ಎಂದು ಹೇಳುವ ಹೊಸ ಅಧ್ಯಯನದ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ ಜೀವಂತ ಮನುಷ್ಯರನ್ನು ಶವಗಳಂತೆ ಮಲಗಿಸಿ ವರದಿ ಮಾಡಲಾಗಿದೆ.

ಹಿಂದೆ ಇದೇ ರೀತಿಯ ವಿಡಿಯೋಗೆ ಕೋವಿಡ್ ಸಮಯದಲ್ಲಿ ಸಂಭವಿಸಿದ ಸಾವುಗಳಿಗೆ ಲಿಂಕ್ ಮಾಡುವ ಮೂಲಕ ವೈರಲ್ ಮಾಡಲಾಗಿತ್ತು. ಅದರ ಹೇಳಿಕೆಯನ್ನು ಇಲ್ಲಿ ನೋಡಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ವಿಯೆನ್ನಾದಲ್ಲಿ ಹವಾಮಾನ ಬದಲಾವಣೆಯ ಪ್ರತಿಭಟನೆಯ ಕುರಿತಾದ ವೀಡಿಯೊ ವರದಿಯನ್ನು ಪಾಶ್ಚಿಮಾತ್ಯ ಮಾಧ್ಯಮಗಳು ಉಕ್ರೇನಿಯನ್ ನಾಗರಿಕರ ನಕಲಿ ಮೃತ ದೇಹಗಳನ್ನು ಎಂದು ತಪ್ಪಾಗಿ ಹಂಚಿಕೊಳ್ಳುವ ಮೂಲಕ ಜನರಿಗೆ ತಪ್ಪು ಮಾಹಿತಿಯನ್ನು ನೀಡುತ್ತಿವೆ.

ಕೃಪೆ : ಫ್ಯಾಕ್ಟ್ಲಿ


ಇದನ್ನು ಓದಿರಿ: Fact check: ಉತ್ತರಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಫೋನ್ ಕರೆಗೆ ಅಧಿಕಾರಿಗಳು ಮಾನ್ಯತೆ ನೀಡುತ್ತಿಲ್ಲ ಎಂಬ ಸುದ್ದಿ ನಿಜವೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights