Fact check: ಉತ್ತರಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಫೋನ್ ಕರೆಗೆ ಅಧಿಕಾರಿಗಳು ಮಾನ್ಯತೆ ನೀಡುತ್ತಿಲ್ಲ ಎಂಬ ಸುದ್ದಿ ನಿಜವೆ?

ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯ ಅಂತಿಮ ಹಂತದ ಮತದಾನ (ನಿನ್ನೆ) ಮುಕ್ತಾಯವಾಗಿದೆ. ಚುನಾವಣೆ ಮುಗಿದ ಬೆನ್ನಲ್ಲೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಸಂಬಂಧಿಸಿದ ಕೆಲವು ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವೈರಲ್ ವಿಡಿಯೋದಲ್ಲಿ ಯೋಗಿ ಆದಿತ್ಯನಾಥ್ ಹಿಂದಿಯಲ್ಲಿ ಮಾತನಾಡುತ್ತ “ಇದು ತಪ್ಪು.  ಯಾರಾದರೂ ಕರೆ ಮಾಡಿದರೆ ಅದಕ್ಕೆ ಪ್ರತಿಕ್ರಿಯೆ ನೀಡುವುದು ಸೌಜನ್ಯ,  ಕೆಲಸದಲ್ಲಿ ತಲ್ಲಿನರಾಗಿದ್ದರೆ ನಂತರ ಕರೆ ಮಾಡಿ ವಿಚಾರಿಸುವುದನ್ನು ತಿಳಿದುಕೊಳ್ಳಿ” ಎಂದು ಹೇಳುವ ವಿಡಿಯೊ ಹರಿದಾಡುತ್ತಿದೆ.

ಉತ್ತರ ಪ್ರದೇಶ ಚುನಾವಣಾ ಫಲಿತಾಂಶಗಳು ಪ್ರಕಟವಾಗುವ ಮುನ್ನ, ಮುಖ್ಯಮಂತ್ರಿ ಕಚೇರಿಯ ಅಧಿಕಾರಿಗಳು ಆದಿತ್ಯನಾಥ್ ಅವರ ಕರೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಪ್ರತಿಪಾದಿಸಿ  ಹಲವು ಸೋಶಿಯಲ್ ಮೀಡಿಯಾ ಬಳಕೆದಾರರು ಹಂಚಿಕೊಂಡಿದ್ದಾರೆ.

“ಅಧಿಕಾರಿಗಳು ಮುಖ್ಯಮಂತ್ರಿಯ ಕರೆಗಳನ್ನು ಸ್ವೀಕರಿಸುತ್ತಿಲ್ಲ” ಎಂದು ಹಿಂದಿಯಲ್ಲಿ ಇರುವ ಹೇಳಿಕೆಯೊಂದಿಗೆ ವಿಡಿಯೊವನ್ನು ವೈರಲ್ ಮಾಡಲಾಗಿದೆ. ಈ ವೀಡಿಯೊವನ್ನು ಇನ್ನು ಕೆಲವರು ಉತ್ತರ ಪ್ರದೇಶದಲ್ಲಿ ಆಡಳಿತ ಬದಲಾವಣೆಯ ಮುನ್ಸೂಚನೆ ಎಂದು ಕಮೆಂಟ್ ಮಾಡಿದ್ದಾರೆ. ಹಾಗಿದ್ದರೆ ಯೋಗಿ ಆದಿತ್ಯನಾಥ್ ಅವರ ಕರೆಯನ್ನು ಸ್ವೀಕರಿಸದೆ ಅಧಿಕಾರಿಗಳು ಉದ್ದಟತನ ಪ್ರದರ್ಶನ ಮಾಡಿದ್ದಾರಾ? ಯೋಗಿ ಕರೆಗೆ ಮಾನ್ಯತೆ  ಅಧಿಕಾರಿಗಳು ಮಾನ್ಯತೆ ನೀಡುತ್ತಿಲ್ಲವಾ? ಅದಕ್ಕೆ ಯೋಗಿ ಆದಿತ್ಯನಾಥ್ ಅವರು ಅಧಿಕಾರಿಗಳಿಗೆ ಕಿವಿ ಮಾತು ಹೇಳಿದ್ದಾರಾ? ಎಂಬುದರ ಕುರಿತು ಸತ್ಯಾಸತ್ಯತೆಗಳನ್ನ ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

R9 ನ್ಯೂಸ್ ಚಾನೆಲ್‌ನ ಲೋಗೊವನ್ನು ವಿಡಿಯೋದಲ್ಲಿ ಕಾಣಬಹುದು, ಲೋಗೋದ ಕೀ ವರ್ಡ್ ಬಳಸಿಕೊಂಡು ಗೂಗಲ್ ಸರ್ಚ್ ಮಾಡಿದಾಗ ಅದರ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ್ದ ವಿಡಿಯೊ ಲಭ್ಯವಾಗಿದೆ. ಸೆಪ್ಟೆಂಬರ್ 26, 2020 ರಂದು R9 News YouTube ಚಾನಲ್‌  ವಿಡಿಯೊವನ್ನು ಅಪ್‌ಲೋಡ್ ಮಾಡಿರುವುದನ್ನು ಇಲ್ಲಿ ಗಮನಿಸಬಹುದು.

ಮೂಲ ವಿಡಿಯೊದಲ್ಲಿ ಯೋಗಿ ಆದಿತ್ಯನಾಥ್ ಅವರು ಅಧಿಕಾರಿಗಳ ವರ್ತನೆ ಬಗ್ಗೆ ಮಾತನಾಡಿರುವುದನ್ನು ಗಮನಿಸಬಹುದು. ಜನಸಾಮಾನ್ಯರ ಕರೆಗಳಿಗೆ ಅಧಿಕಾರಿಗಳು ಸ್ಪಂದಿಸದಿದ್ದ ಕಾರಣಕ್ಕೆ ಯೋಗಿ ಆದಿತ್ಯನಾಥ್ ಅವರು ಅಧಿಕಾರಿಗಳ ಬಗ್ಗೆ ಅತೃಪ್ತಿ ಹೊಂದಿದ್ದಾರೆ ಎಂದು ಆಂಕರ್ ಹೇಳುತ್ತಾರೆ. 38 ಸೆಕೆಂಡ್‌ನಲ್ಲಿ ಆದಿತ್ಯನಾಥ್ ಮಾತನಾಡಿ “ಇದು ಗಂಭೀರ ಸಮಸ್ಯೆ. ಸಂಸದರು ಮತ್ತು ಶಾಸಕರ ಕರೆಗಳಿಗೆ ಸಿಎಂಒ ಉತ್ತರಿಸುತ್ತಿಲ್ಲ ಎಂದು ಕಾನ್ಪುರ ಮತ್ತು ಇತರ ಕೆಲವು ಸ್ಥಳಗಳಿಂದ ದೂರುಗಳು ಬಂದಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದು ಮಾತನಾಡಿದ್ದಾರೆ.

ಕರೆಗೆ ಸ್ಪಂದಿಸದ ಅಧಿಕಾರಿಗಳು ಜನರ  ಕ್ಷಮೆಯಾಚಿಸುವಂತೆಯೂ ಯುಪಿ ಸಿಎಂ ತಮ್ಮ ಅಧಿಕಾರಿಗಳಿಗೆ ಸೂಚಿಸಿವ ವಿಡಿಯೊವನ್ನು . 1-ನಿಮಿಷ 14-ಸೆಕೆಂಡ್ ಅವಧಿಯ ವಿಡಿಯೊದಲ್ಲಿ  ನೋಡಬಹುದು.

ಕಾನ್ಪುರ ಜಿಲ್ಲೆಯ ಪರಿಶೀಲನಾ ಸಭೆಯಲ್ಲಿ ಆದಿತ್ಯನಾಥ್ ಅವರು ಈ ಹೇಳಿಕೆಗಳನ್ನು ನೀಡಿದ್ದಾರೆ ಮತ್ತು ಇಬ್ಬರು  BJP ಶಾಸಕರಾದ ಅಭಿಜೀತ್ ಸಿಂಗ್ ಸಂಗ ಮತ್ತು ಅರುಣ್ ಪಾಠಕ್ ಅವರಿಂದ ದೂರು ಸ್ವೀಕರಿಸಿದ ನಂತರ ಸಿಎಂ ಅಸಮಾಧಾನಗೊಂಡಿದ್ದಾರೆ ಎಂದು ವಾಹಿನಿಯಲ್ಲಿ ವರದಿಯಾಗಿದೆ.

ಸಭೆಯ ದಿನಾಂಕವನ್ನು R9 ನ್ಯೂಸ್ ಕ್ಲಿಪ್‌ನಲ್ಲಿ ನೋಡಬಹುದಾಗಿದೆ. ಸೆಪ್ಟೆಂಬರ್ 25, 2020 ರಲ್ಲಿ “ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಕಾನ್ಪುರ ಜಿಲ್ಲೆಯ ಅಭಿವೃದ್ಧಿ ಯೋಜನೆಗಳ ಪರಿಶೀಲನಾ ಸಭೆಯನ್ನು ನಡೆಸಿದರು ” ಎಂದು ವಿಡಿಯೋದಲ್ಲಿ ಉಲ್ಲೇಖಿಸಲಾಗಿದೆ.

ಯೋಗಿ ಆದಿತ್ಯನಾಥ್ 25 ಸೆಪ್ಟಂಬರ್ 2020 ರಂದು ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಹಳೆಯ ವಿಡಿಯೊವನ್ನು (ನೆನ್ನೆ) ಮಾರ್ಚ್ 7 ರಂದು ನಡೆದ ಉತ್ತರಪ್ರದೇಶದ ಚುನಾವಣಾ ನಂತರದಲ್ಲಿ ಮಾತನಾಡಿರುವ ವಿಡಿಯೊ ಎಂಬಂತೆ ಬಿಂಬಿಸಲಾಗಿದ್ದು, ಚುನಾವಣಾ ಫಲಿತಾಂಶದ ಮುನ್ಸೂಚನೆ ಎಂಬಂತೆ ತಪ್ಪು ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ.

ಕೃಪೆ :ಇಂಡಿಯಾ ಟುಡೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಉತ್ತರಪ್ರದೇಶದ 7ನೇ ಹಂತದ ಚುನಾವಣೆ ವೇಳೆ BJP ಪಕ್ಷದಿಂದ ನಕಲಿ ಮತದಾನ ನಡೆದಿರುವುದು ನಿಜವಲ್ಲ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights