ಮಾವೋವಾದಿಗಳಿಗಿಂತ ಬಿಜೆಪಿ ಹೆಚ್ಚು ಅಪಾಯಕಾರಿ – ಮಮತಾ ಬ್ಯಾನರ್ಜಿ

ಮಾವೋವಾದಿಗಳಿಗಿಂತ ಬಿಜೆಪಿ ಹೆಚ್ಚು ಅಪಾಯಕಾರಿ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟೀಕಿಸಿದ್ದಾರೆ.

ಮಂಗಳವಾರ ಪುರುಲಿಯಾದಲ್ಲಿ ನಡೆದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ ಕೆಲವು ಟಿಎಂಸಿ ನಾಯಕರ ಪಕ್ಷಾಂತರದ ಬಗ್ಗೆ ಕಿಡಿ ಕಾರಿದರು, “ಬಿಜೆಪಿ [ಭಾರತೀಯ ಜನತಾ ಪಕ್ಷ] ಗೆ ಸೇರಲು ಬಯಸುವವರು ಹೊರಹೋಗಬಹುದು, ಆದರೆ ನಾವು ಕೇಸರಿ ಪಕ್ಷದ ಮುಂದೆ ತಲೆ ಬಾಗುವುದಿಲ್ಲ. ಬಿಜೆಪಿ ಹೆಚ್ಚು ಅಪಾಯಕಾರಿ ಮಾವೋವಾದಿಗಳಿಗಿಂತ ಬಿಜೆಪಿ ಹೆಚ್ಚು ಅಪಾಯಕಾರಿ ” ಎಂದಿದ್ದಾರೆ.

“ರಾಜಕೀಯ ಗಂಭೀರವಾದ ಸಿದ್ಧಾಂತ, ತತ್ವಶಾಸ್ತ್ರವನ್ನು ಒಳಗೊಂಡಿದೆ. ಒಬ್ಬರು ಪ್ರತಿದಿನ ಬಟ್ಟೆಗಳನ್ನು ಬದಲಾಯಿಸಬಹುದು ಆದರೆ ಸಿದ್ಧಾಂತಗಳಲ್ಲ. ಲೋಕಸಭಾ ಚುನಾವಣೆಯಲ್ಲಿ ನೀವೆಲ್ಲರೂ ಬಿಜೆಪಿಗೆ ಮತ ಹಾಕಿದ್ದೀರಿ, ಆದರೆ ನಿಮ್ಮ ಸಂಸದರು ನಿಮ್ಮನ್ನು ಭೇಟಿ ಮಾಡುತ್ತಾರೆಯೇ? ಅವರು ನಿಮಗೆ ಏನಾದರೂ ನೀಡಿದ್ದಾರೆಯೇ? ಅವರು ಚುನಾವಣೆಗೆ ಮುಂಚಿತವಾಗಿ ಸುಳ್ಳು ಭರವಸೆಗಳನ್ನು ನೀಡುತ್ತಾರೆ ಮತ್ತು ಅದು ಮುಗಿದ ನಂತರ ಅವರು ಪಲಾಯನ ಮಾಡುತ್ತಾರೆ” ಎಂದು ಮಮತಾ ಬ್ಯಾನರ್ಜಿ ಗುಡುಗಿದ್ದಾರೆ.

ಬಂಗಾಳದಲ್ಲಿ ಬಿಜೆಪಿ ಮೈದಾನಕ್ಕಿಂತ ಮಾಧ್ಯಮಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ. ಪಕ್ಷವು ಪ್ರತಿಪಕ್ಷಗಳನ್ನು ಹೆದರಿಸಲು ಮತ್ತು ಬೆದರಿಸಲು ಐಟಿ ಬಳಸುತ್ತಿದೆ. ನಕಲಿ ಸುದ್ದಿಗಳನ್ನು ಹರಡಲು ಅವರು ವಾಟ್ಸಾಪ್ ಗುಂಪುಗಳನ್ನು ರಚಿಸಿದ್ದಾರೆ. ಹೀಗಾಗಿ ಮಾವೋವಾದಿಗಳಿಗಿಂತ ಬಿಜೆಪಿ ಹೆಚ್ಚು ಅಪಾಯಕಾರಿ ಎಂದು ಮಮತಾ ಬ್ಯಾನರ್ಜಿ ಬಿಜೆಪಿಯಲ್ಲಿ ತೀವ್ರ ವಾಗ್ದಾಳಿ ಮಾಡಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights