ನೀವು ರೈತರನ್ನು ನೋಡಿ, ಕ್ರಿಕೆಟನ್ನು ರಿಷಬ್ ಪಂತ್ ನೋಡಿಕೊಂಡಿದ್ದಾರೆ: ನರೇಂದ್ರ ಮೋದಿಗೆ ಛೀಮಾರಿ

ಬ್ರಿಸ್ಬೇನ್‌‌ನಲ್ಲಿ ನಡೆದ ಆಸ್ಟ್ರೇಲಿಯಾ-ಭಾರತ ನಡುವಿನ ಬಾರ್ಡರ್ ಗವಾಸ್ಕರ್ ಸರಣಿಯ ನಾಲ್ಕನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ಭಾರತ ರೋಚಕ ಜಯಗಳಿಸಿ, 2-1 ಅಂತರದಿಂದ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಶುಭ್‌ಮನ್ ಗಿಲ್ ಮತ್ತು ರಿಷಬ್ ಪಂತ್‌ರವರ ಅದ್ಭುತ ಬ್ಯಾಂಟಿಂಗ್‌ನಿಂದ ಭಾರತ ಮೂರು ವಿಕೆಟ್‌ಗಳ ಜಯ ಪಡೆಯಿತು. ಈ ಐತಿಹಾಸಿಕ ಗೆಲುವಿಗೆ ಭಾರತೀಯ ಕ್ರಿಕೆಟ್ ತಂಡವನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿಯ ವಿರುದ್ದ ಟ್ವಿಟ್ಟರಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರತ ಕ್ರಿಕೆಟ್ ತಂಡಕ್ಕೆ ಅಭಿನಂದನೆ ಸಲ್ಲಿಸಿ ಟ್ವೀಟ್ ಮಾಡಿರುವ ನರೇಂದ್ರ ಮೋದಿ, “ಆಸ್ಟ್ರೇಲಿಯಾದಲ್ಲಿ ನಡೆದ ಭಾರತೀಯ ಕ್ರಿಕೆಟ್ ತಂಡದ ಯಶಸ್ಸಿನಿಂದ ನಾವೆಲ್ಲರೂ ಸಂತೋಷಗೊಂಡಿದ್ದೇವೆ. ಅವರ ಗಮನಾರ್ಹ ಶಕ್ತಿ ಮತ್ತು ಉತ್ಸಾಹವು ಪಂದ್ಯದ ಉದ್ದಕ್ಕೂ ಗೋಚರಿಸಿತು. ತಂಡಕ್ಕೆ ಅಭಿನಂದನೆಗಳು! ನಿಮ್ಮ ಮುಂದಿನ ಪ್ರಯತ್ನಗಳಿಗೆ ಶುಭಾಶಯಗಳು” ಎಂದು ಬರೆದಿದ್ದಾರೆ.

ಟ್ವಿಟ್ಟರ್‌ನಲ್ಲಿ ಸಕ್ರಿಯವಾಗಿರುವ ಹಲವಾರು ಜನರು ಮೋದಿಯ ಟ್ವೀಟ್‌ಗೆ ಆಕ್ರೋಶ ವ್ಯಕ್ತಪಡಿಸಿ, ರೈತ ಹೋರಾಟ ಮತ್ತು ಅರುಣಾಚಲ ಪ್ರದೇಶದಲ್ಲಿ ಚೀನಾ ಕಟ್ಟಿರುವ ಹಳ್ಳಿಯ ಬಗ್ಗೆ ಗಮನ ಹರಿಸುವಂತೆ ಹೇಳಿದ್ದಾರೆ.

ಪ್ರಶಾಂತ್ ಪಾಲ್ ಅವರು, “ಅಣ್ಣಾ ನೀವು ಮೊದಲು ರೈತರನ್ನು ನೋಡಿ, ಪಂದ್ಯಾಟವನ್ನು ರಿಷಬ್ ಪಂತ್ ನೋಡಿದ್ದಾರೆ” ಎಂದು ಆ‌ಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್‌‌ಕುಮಾರ್‌ ಮೀನಾ ಅವರು, ” ಚೀನಾ ಅರುಣಾಚಲ ಪ್ರದೇಶದಲ್ಲಿ ಗ್ರಾಮವನ್ನು ನಿರ್ಮಿಸಿದೆ. ನಮ್ಮ ಮಾತೃಭೂಮಿಯನ್ನು ರಕ್ಷಣೆ ಮಾಡಲು ಬಿಜೆಪಿ ಸರ್ಕಾರ ಏನು ಮಾಡುತ್ತಿದೆ ಎಂದು ವಿವರಿಸಬಹುದೆ” ಎಂದು ಪ್ರಶ್ನಿಸಿದ್ದಾರೆ.

ಟಿಆರ್‌‌ಎಸ್ ಥೋಪು ಎಂಬ ಟ್ವಿಟ್ಟರ್‌ ಹ್ಯಾಂಡಲ್, “ಅರುಣಾಚಲ್ ಪ್ರದೇಶದಲ್ಲಿ ಆಗುತ್ತಿರುವ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಭಿವೃದ್ದಿ ಕೆಲಸಗಳ ಬಗ್ಗೆ ಕೂಡಾ ಖುಷಿ ಪಡಿ” ಎಂದು ಹೇಳಿದ್ದಾರೆ.

https://twitter.com/TRS_thopu/status/1351484918283476992

ರವಿ ಕುಮಾರ್‌ ಅವರು, ಕೇವಲ ಕ್ರಿಕೆಟ್ ನೋಡುವುದಲ್ಲ, ಇದನ್ನು ಕೂಡಾ ನೋಡಿ ಎಂದು ಅರುಣಾಚಲ ಪ್ರದೇಶದಲ್ಲಿ ಚೀನಾ ಕಟ್ಟುತ್ತಿರುವ ಮನೆಗಳ ಫೋಟೋ ಹಾಕಿದ್ದಾರೆ.

ತಮಿಳನ್ ಸತ್ಯಾ ಟ್ವಿಟ್ಟರ್‌ ಹ್ಯಾಂಡಲ್, “4.5 ಕಿಲೋ ಮೀಟರ್‌ ಭಾರತದ ಭೂಪ್ರದೇಶದ ಒಳಗಡೆ ಚೀನಾ ಮನೆಗಳನ್ನು ಕಟ್ಟಿದೆ. ಕಳೆದ 60 ದಿನಗಳಿಂದ ರೈತರು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಎರಡು ದೊಡ್ಡ ಸಮಸ್ಯೆಗಳ ಬಗ್ಗೆ ಯಾವುದೆ ಕ್ರಮ ತೆಗೆದುಕೊಂಡಿಲ್ಲ. ಆದರೆ ಕ್ರಿಕೆಟ್‌ಗೆ ಅಭಿನಂದಿಸುತ್ತಾರೆ. ನೀವು ಭಾರತದ ಪ್ರಧಾನಿಯಾಗಲು ಅರ್ಹತೆ ಇಲ್ಲದವರು” ಎಂದು ಹೇಳಿದ್ದಾರೆ.

https://twitter.com/tamilansathya16/status/1351450977623134209

https://twitter.com/fira__ali/status/1351436588249542657

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights