ಆರು ತಿಂಗಳ ಕಾಲ ಕೋಣೆಯಲ್ಲಿ ಬಂಧಿಯಾಗಿದ್ದ ಯುವತಿ ರಕ್ಷಣೆ ಬಳಿಕ ಸಾವು…!

ಆರು ತಿಂಗಳ ಕಾಲ ಕೋಣೆಯಲ್ಲಿ ಬಂಧಿಯಾಗಿದ್ದ 25 ಮಹಿಳೆ ರಕ್ಷಣೆ ಬಳಿಕ ಸಾವನ್ನಪ್ಪಿದ ಘಟನೆ ರಾಜ್‌ಕೋಟ್‌ನಲ್ಲಿ ನಡೆದಿದೆ.

ಮೃತಪಟ್ಟ ಯುವತಿಯನ್ನು ಆಲ್ಪಾ ಸೆಜ್ಪಾಲ್ ಎಂದು ಗುರುತಿಸಲಾಗಿದೆ. ಮೂಢ ನಂಬಿಕೆಗಳಿಗೆ ಮಾರು ಹೋದ ಕುಟುಂಬವೊಂದು 25 ವರ್ಷದ ಯುವತಿಯನ್ನು ಕಳೆದ 6 ತಿಂಗಳಿಗಿಂತಲೂ ಹೆಚ್ಚು ಕಾಲ ಕೋಣೆಯಲ್ಲಿ ಬಂಧಿಸಿಟ್ಟಿದೆ. ಗುಜರಾತ್ ರಾಜ್‌ಕೋಟ್‌ನ ಸಾಧುಸವಾಣಿ ರಸ್ತೆಯಲ್ಲಿರುವ ಮನೆಯಲ್ಲಿ ಯುವತಿಯನ್ನು ಬಂಧಿಸಿಡಲಾದ ವಿಚಾರ ತಿಳಿದ ಸಾಥಿ ಸೇವಾ ಗ್ರೂಪ್ ಎಂಬ ಎನ್‌ಜಿಒ ಆಕೆಯನ್ನು ರಕ್ಷಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದೆ. ಆದರೆ ಯುವತಿ ಚಿಕಿತ್ಸೆಯ ಸಮಯದಲ್ಲಿ ಮೃತಪಟ್ಟಿದ್ದಾಳೆ.

ಆಲ್ಪಾ ಸೆಜ್ಪಾಲ್ ಚಾರ್ಟರ್ಡ್ ಅಕೌಂಟನ್ಸಿ ವಿದ್ಯಾರ್ಥಿಯಾಗಿದ್ದು, ಕಳೆದ ಆರು ತಿಂಗಳಿನಿಂದ ಆಕೆಯನ್ನು ಕೋಣೆಯಲ್ಲಿರಿಸಿ ಬೀಗ ಹಾಕಲಾಗಿತ್ತು. ವರದಿಗಳ ಪ್ರಕಾರ, ಕಳೆದ ಎಂಟು ದಿನಗಳಿಂದ ಆಕೆಯ ಕುಟುಂಬವು ಆಕೆಗೆ ಆಹಾರ ಅಥವಾ ನೀರನ್ನು ನೀಡಲಾಗಿಲ್ಲ. ನಂತರ ಅವಳು ಕೋಮಾಗೆ ಹೋಗಿದ್ದಾಳೆ.

ಸ್ಥಳೀಯರು ಯುವತಿ ಮನೆಗೆ ಭೇಟಿ ನೀಡಿದಾಗ ಮೂತ್ರ ತುಂಬಿದ ಪ್ಲಾಸ್ಟಿಕ್ ಚೀಲವನ್ನೂ ಅವರು ಕಂಡುಕೊಂಡರು. ಈ ಬಗ್ಗೆ ನೆರೆಹೊರೆಯವರು ಎನ್‌ಜಿಒ ತಿಳಿದಾಗ ಅವರು ಬಂದು ಬಾಲಕಿ ಮನೆಗೆ ಬಂದಿದ್ದಾರೆ. ಈ ವೇಳೆ ಕುಟುಂಬ ಎನ್‌ಜಿಒ ತಂಡ ಮತ್ತು ಪೊಲೀಸರ ಪ್ರವೇಶವನ್ನು ನಿರಾಕರಿಸಿದೆ. ಎನ್ಜಿಒ ಮತ್ತು ಪೊಲೀಸರು ಕೋಣೆಗೆ ಪ್ರವೇಶಿಸುವ ಮೊದಲು ಕುಟುಂಬಸ್ಥರ ನಡುವೆ ಸಾಕಷ್ಟು ವಾದಗಳು ನಡೆದಿವೆ. ಕೊನೆಗೆ ಯುವತಿ ಕೋಣೆಗೆ ಪ್ರವೇಶಿಸಿದಾಗ ಪ್ರಜ್ಞಾಹೀನಳಾದ ಯುವತಿ ಬಾಯಿಯಲ್ಲಿ ನೊರೆ ಬರುವುದನ್ನ ಕಂಡು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆಲ್ಪಾ ಆಸ್ಪತ್ರೆಯಲ್ಲಿ ದಾಖಲಾಗಿದ್ದರೂ ಚಿಕಿತ್ಸೆಯ ಸಮಯದಲ್ಲಿ ಮೃತಪಟ್ಟಿದ್ದಾಳೆ. ಆಕೆಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಆಕೆಯ ಸಾವಿನ ಬಗ್ಗೆ ಪೋಷಕರ ಮೇಲೆ ಆರೋಪವಿದೆ. ಆಕೆಯ ತಾಯಿಯೂ ಘಟನೆಯಲ್ಲಿ ಪಾತ್ರವಿದೆ ಎಂಬ ಅನುಮಾನವಿದೆ. ತನಿಖೆಯ ಪ್ರಕಾರ ಯುವತಿಯ ಕುಟುಂಬ ಕೆಲವು ಅತೀಂದ್ರಿಯ ನಂಬಿಕೆಗಳಲ್ಲಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights