ಚೀನಾಗೆ ಯಾವಾಗ ತಿರುಗೇಟು ನೀಡಿತ್ತೀರಿ ಮೋದಿಜಿ; ಗಡಿ ಬಗ್ಗೆ ಮೌನವಾಗಿರುವ ಮೋದಿಗೆ ಕಾಂಗ್ರೆಸ್ ಪ್ರಶ್ನೆ!
ಕಳೆದ ಮೂರು ತಿಂಗಳಿಂದ ಪದೇ ಪದೇ ಗಡಿ ಭಾಗದಲ್ಲಿ ಖ್ಯಾತೆ ತೆಗೆಯುತ್ತಿರುವ ಚೀನಾಕ್ಕೆ ಯಾವಾಗ ತಕ್ಕ ತಿರುಗೇಟು ಕೊಡುತ್ತೀರಿ ಮೋದಿಯವರೇ ಎಂದು ಪ್ರಧಾನಿ ಮೋದಿಯವರನ್ನು ಕಾಂಗ್ರೆಸ್ ಪ್ರಶ್ನೆ ಮಾಡಿದೆ.
ಕಳೆದ ಶುಕ್ರವಾರ ರಾತ್ರಿ, ಮಾನಸ ಸರೋವರದ ಬಳಿ ಕ್ಷಿಪಣಿಗಳನ್ನು ನಿರ್ಮಿಸಿದ್ದ ಚೀನಾ ಸೇನೆ, ಪಾಂಗೋಂಗ್ ತ್ಸೋ ಸರೋವರದ ಬಳಿ ಗಡಿ ನಿಯಂತ್ರಣ ರೇಖೆಯನ್ನು ಅತಿಕ್ರಮಣ ಮಾಡಲು ಯತ್ನಿಸಿತ್ತು. ಈ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಅವರು, ಒಂದಲ್ಲ.. ಎರಡಲ್ಲ.. ಹಲವು ಬಾರಿ ಚೀನಾ ಸೈನಿಕರು ಎಲ್ಎಸಿ ಒಪ್ಪಂದ ಮುರಿದು ಭಾರತದ ಗಡಿ ಅತಿಕ್ರಮಣ ಮಾಡಿದ್ದಾರೆ. ಆದರೆ ಮೋದಿ ಸರ್ಕಾರ ತಿರುಗೇಟು ನೀಡುವುದಾಗಿ ಹೇಳಿ ಮೌನಕ್ಕೆ ಶರಣಾಗಿದೆ. ಚೀನಾಗೆ ಯಾವಾಗ ತಕ್ಕ ತಿರುಗೇಟು ನೀಡುತ್ತೀರಾ ಮೋದಿ ಜೀ ಎಂದು ಪ್ರಶ್ನಿಸಿದ್ದಾರೆ.
ನಮ್ಮ ದೇಶದ ಗಡಿಯಲ್ಲಿನ ಭೂ ಭಾಗವನ್ನು ಚೀನಾ ಅತಿಕ್ರಮಣ ಮಾಡುತ್ತಿದೆ. ಸೈನಿಕರ ವಿರುದ್ಧದ ಘರ್ಷಣೆಗಳು ನಡೆಯುತ್ತಲೇ ಇವೆ. ದೇಶದಲ್ಲಿ ಜಿಡಿಪಿ ಪಾತಾಳಕ್ಕೆ ಕುಸಿಯುತ್ತಿದೆ. ಸುಮಾರು 17 ಕೋಟಿ ಉದ್ಯೋಗ ನಷ್ಟವಾಗಿದೆ. ಬಿಜೆಪಿ ಮತ್ತು ಫೇಸ್ ಬುಕ್ ನೆಕ್ಸಸ್ ಅಪಹರಣ ಮಾಡಿವೆ. ಈ ಪ್ರಶ್ನೆಗಳಿಗೆ ಉತ್ತರ ನೀಡದ ಮೋದಿ ಸರ್ಕಾರವು ಕಾಂಗ್ರೆಸ್, ಸೋನಿಯಾ ಗಾಂಧಿ, ಹವಾಮಾನ ಮತ್ತು ದೇವರುಗಳ ಕುರಿತು ಮಾತನಾಡುತ್ತಿದೆ ಎಂದು ಸುರ್ಜೇವಾಲ್ ಟೀಕಿಸಿದ್ದಾರೆ.
आए दिन भारत की संप्रुभता पर हमला हो रहा है,
आए दिन हमारी सरज़मीं पर क़ब्ज़े का दुस्साहस,
आए दिन देश की धरती पर चीनी घुसपैठ,
मोदी जी, पर “लाल आँख” कहाँ हैं,
चीन से आँखों में आँखें डाल कब बात होगी,
पी.एम मौन क्यों हैं?#indiachinastandoff pic.twitter.com/r4zX9jYRRO
— Randeep Singh Surjewala (@rssurjewala) August 31, 2020
ಜೂನ್ 15ರಂದು ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಸೈನಿಕರೊಂದಿಗೆ ಘರ್ಷಣೆ ನಡೆಸಿದ್ದ ಚೀನಾ, ಗಡಿ ಭಾಗದಲ್ಲಿ ಹೆಚ್ಚಿನ ಸೈನ್ಯವನ್ನು ನಿಯೋಜಿಸಿತ್ತು. ಇದರಿಂದಾಗಿ ಗಡಿಭಾಗದಲ್ಲಿ ಉದ್ವಿಘ್ನತೆ ಹೆಚ್ಚಾಗಿತ್ತು. ಇದಾದ ನಂತರ, ಮತ್ತೆ ಆಗಸ್ಟ್ 29ರ ರಾತ್ರಿ ಪಾಂಗೋಂಗ್ ಟ್ಸೋ ಸರೋವರದ ದಕ್ಷಿಣ ಭಾಗದಲ್ಲಿ ಗಡಿ ನಿಯಂತ್ರಣ ರೇಖೆಯನ್ನು ಅತಿಕ್ರಮಣ ಮಾಡಿದೆ. ಅಲ್ಲದೆ, ಮಾನಸ ಸರೋವರದ ಬಳಿ ಕ್ಷಿಪಣಿಗಳನ್ನು ನಿರ್ಮಿಸಿದ್ದು, ಯುದ್ಧ ಎಲಿಕಾಪ್ಟರ್ಗಳನ್ನೂ ಇರಿಸಿದೆ.
ಇದನ್ನೂ ಓದಿ: ಮೂರು ತಿಂಗಳಲ್ಲಿ GDP ಶೇ.23.9 ಕುಸಿತ; ಗರಿಷ್ಟ ಇಳಿಕೆ ಕಂಡ ಭಾರತ!
ಚೀನಾದ ತಗಾದೆಯನ್ನು ಊಹಿಸಿದ್ದ ಭಾರತೀಯ ಸೇನೆ, ತಕ್ಷವೇ ಜಾಗೃತಗೊಂಡು ಚೀನಾ ಸೈನಿಕರನ್ನು ಹಿಮ್ಮೆಟ್ಟಿದ್ದಾರೆ. ಮಾತುಕತೆ ಮೂಲಕ ಶಾಂತಿ ಕಾಪಾಡಲು ಭಾರತದ ಸೇನೆ ಬದ್ಧವಾಗಿದೆ. ಆದರೆ, ತನ್ನ ಭೂಪ್ರದೇಶದ ರಕ್ಷಣೆಗೂ ಅಷ್ಟೇ ಕಟಿಬದ್ಧವಾಗಿದೆ. ಚುಶುಲ್ ಪ್ರದೇಶದಲ್ಲಿ ಎರಡೂ ದೇಶಗಳ ಸೇನಾಪಡೆಗಳ ಬ್ರಿಗೇಡ್ ಕಮಾಂಡರ್ ಮಟ್ಟದಲ್ಲಿ ಫ್ಲಾಗ್ ಮೀಟಿಂಗ್ ನಡೆಯುತ್ತಿದ್ದು, ಇದರಲ್ಲಿ ಈ ವಿಚಾರಗಳನ್ನ ಚರ್ಚಿಸಲಾಗುತ್ತಿದೆ” ಎಂದು ಸೇನಾ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಗಡಿಯಲ್ಲಿ ಮತ್ತೆ ಚೀನಾ ತಗಾದೆ; ಮಾನಸ ಸರೋವರದ ಬಳಿ ಕ್ಷಿಪಣಿ ನಿರ್ಮಾಣ!
ಇದನ್ನೂ ಓದಿ: ಮೋದಿ ಹೇಳಿಕೆ ಬಳಸಿಕೊಂಡು ಮೋದಿಗೇ ಆಪ್ ಇಟ್ಟ ಚೀನಾ:

