ಮೂರು ತಿಂಗಳಲ್ಲಿ GDP ಶೇ.23.9 ಕುಸಿತ; ಗರಿಷ್ಟ ಇಳಿಕೆ ಕಂಡ ಭಾರತ!

ಕೊರೊನಾ ನಿಯಂತ್ರಣಕ್ಕಾಗಿ ದೇಶಾದ್ಯಂತ ಹೇರಲಾಗಿದ್ದ ಲಾಕ್‌ಡೌನ್‌ನಿಂದಾಗಿ, ಪ್ರಮುಖ ಕೈಗಾರಿಕೆಗಳನ್ನು ಸ್ಥಗಿತಗೊಳಿಸಿದ್ದರ ಪರಿಣಾಮ ಲಕ್ಷಾಂತರ ಜನರು ಉದ್ಯೋಗ ಕಳೆಕೊಳ್ಳುವುದರ ಜೊತೆಗೆ ಆರ್ಥಿಕ ವರ್ಷದ ಮೊದಲ ಮೂರು ತಿಂಗಳಲ್ಲಿ ಒಟ್ಟು ದೇಶೀಯ ಉತ್ಪನ್ನ (GDP) ಶೇ.23.9 ರಷ್ಟು ಕುಸಿದಿದೆ.

ಭಾರತವು ತ್ರೈಮಾಸಿಕ ಅಂಕಿ ಅಂಶಗಳನ್ನು ಪ್ರಕಟಿಸಲು ಪ್ರಾರಂಭಿಸಿದ 1996 ರಿಂದೀಚೆಗೆ ಇದೇ ಮೊದಲ ಭಾರಿಗೆ ಆರ್ಥಿಕತೆ ಈ ಪ್ರಮಾಣದ ಇಳಿಕೆ ದಾಖಲಾಗಿದೆ. ಅಷ್ಟೇ ಅಲ್ಲದೆ ಏಷ್ಯಾದ ಪ್ರಮುಖ ಆರ್ಥಿಕತೆಯಲ್ಲಿ ಇದು ಅತ್ಯಂತ ಕೆಟ್ಟದಾದ ಆರ್ಥಿಕ ಕುಸಿತವಾಗಿದೆ.

2019–20 ರ ಇದೇ ಅವಧಿಯಲ್ಲಿ ದೇಶದ ಜಿಡಿಪಿ ಶೇ 5.2 ರಷ್ಟು ಬೆಳವಣಿಗೆ ಕಂಡಿತ್ತು ಎಂದು ಎನ್‌ಎಸ್‌ಒ ಅಂಕಿ ಅಂಶ ಹೇಳಿದೆ.

ಬ್ಲೂಂಬರ್ಗ್‌ ಆರ್ಥಿಕ ತಜ್ಞರ ಲೆಕ್ಕಚಾರದ ಪ್ರಕಾರ ಭಾರತದ ಆರ್ಥಿಕತೆ ಶೇ. 15 ರಿಂದ ಶೇ. 25.9 ರ ನಡುವೆ ಕುಸಿಯಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಪ್ರಸ್ತುತ ಆರ್ಥಿಕ ಕುಸಿತವು ಎರಡನೇ ತ್ರೈಮಾಸಿಕದಲ್ಲೂ ಮುಂದುವರಿಯಲಿದೆ ಎಂದು ಅಂದಾಜಿಸಲಾಗಿದೆ.

2019–2020 ನೇ ಆರ್ಥಿಕ ವರ್ಷದ 1 ನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಬೆಳವಣಿಗೆ 5.2% ದಾಖಲಾಗಿತ್ತು. 2ನೇ ತ್ರೈಮಾಸಿಕದಲ್ಲಿ 4.4 % ದಾಖಲಾದರೆ, 3ನೇ ತ್ರೈಮಾಸಿಕದಲ್ಲಿ 4.1% ದಾಖಲಾಗಿ, 4ನೇ ತ್ರೈಮಾಸಿಕದ ಹೊತ್ತಿದೆ 3.1% ಬೆಳವಣಿಗೆ ದಾಖಲಾಗಿತ್ತು.

ಆದರೆ 2020–21 ನೇ ಆರ್ಥಿಕ ವರ್ಷದ 1 ನೇ ತ್ರೈಮಾಸಿಕದಲ್ಲೇ 23.9% ದಷ್ಟು ಇಳಿಯಾಗಿದೆ. ಈ ಇಳಿಕೆ ಎರಡನೆ ತ್ರೈಮಾಸಿಕದಲ್ಲೂ ಮುಂದುವೆರೆಯಲಿದೆ ಎನ್ನಲಾಗಿದೆ.

ಮೇ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಜಿಡಿಪಿಯ ಶೇಕಡಾ 10 ಕ್ಕೆ ಸಮನಾದ ಪ್ರಚೋದಕ ಪ್ಯಾಕೇಜ್ ಅನ್ನು ಘೋಷಿಸಿದ ಹೊರತಾಗಿಯು ಬೇಡಿಕೆ ಮತ್ತು ಉತ್ಪಾದನೆ ಇನ್ನೂ ಚೇತರಿಸಿಕೊಂಡಿಲ್ಲ.

ದೇಶದಲ್ಲಿ ಕೊರೊನಾ ಪ್ರಾರಂಭವಾಗುವುದಕ್ಕೆ ಮುಂಚೆ, ಆರ್ಥಿಕತೆಯು ನಿಧಾನಗತಿಯ ಬೆಳವಣಿಗೆ ಮತ್ತು ಕಡಿಮೆ ಬೇಡಿಕೆಯ ಹೊರತಾಗಿಯೂ, ಆರ್ಥಿಕತೆಯನ್ನು ಅಂದಾಜು 2.8 ಟ್ರಿಲಿಯನ್ ಡಾಲರ್‌‌ನಿಂದ 2024 ರವೇಳೆಗೆ 5 ಟ್ರಿಲಿಯನ್‌ ಡಾಲರ್‌ ಪರಿವರ್ತಿಸುವ ಗುರಿಯನ್ನು ಹೊಂದಿದೆ ಎಂದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹೇಳಿತ್ತು.

ಕಳೆದವಾರ ಕೇಂದ್ರ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮ್, ‘ಕೊರೊನಾ ಸಾಂಕ್ರಾಮಿಕವು ದೇವರ ಕಾರ್ಯ. ಹಾಗಾಗಿಯೇ ಜಿಎಸ್‌ಟಿ ಸಂಗ್ರಹದಲ್ಲಿ ಕುಸಿತವಾಗಿದೆ’ ಎಂದು ಜಿಎಸ್‌ಟಿ ಕುಸಿತದ ಬಗ್ಗೆ ಹೇಳಿದ್ದರು.


ಇದನ್ನೂ ಓದಿ:  ಗಡಿಯಲ್ಲಿ ಮತ್ತೆ ಚೀನಾ ತಗಾದೆ; ಮಾನಸ ಸರೋವರದ ಬಳಿ ಕ್ಷಿಪಣಿ ನಿರ್ಮಾಣ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights