ಗಡಿಯಲ್ಲಿ ಮತ್ತೆ ಚೀನಾ ತಗಾದೆ; ಮಾನಸ ಸರೋವರದ ಬಳಿ ಕ್ಷಿಪಣಿ ನಿರ್ಮಾಣ!

ಭಾರತ ಮತ್ತು ಚೀನಾ ಗಡಿಯಲ್ಲಿ ಮತ್ತೆ ಚೀನಾ ಖ್ಯಾತೆ ತೆಗೆದಿದೆ ಎಂದು ಹೇಳಲಾಗುತ್ತಿದ್ದು, ಮಾನಸ ಸರೋವರದ ಬಳಿ ಕ್ಷಿಒಪಣಿ ತಯಾರಿಸಿದೆ ಎಂದು ವರದಿಯಾಗಿದೆ.

ಜೂನ್‌ ತಿಂಗಳಿಂದ ಪದೇ ಪದೇ ಗಡಿಯಲ್ಲಿ ಘರ್ಷಣೆ ಮಾಡುತ್ತಿರುವ ಚೀನಾ, ಚೀನಾ ಮಾನಸ ಸರೋವರದ ಬಳಿ ಭೂಮಿಯಿಂದ ಬಾನಿಗೆ ಚಿಮ್ಮುವ ಕ್ಷಿಪಣಿಯನ್ನು ನಿರ್ಮಸಿದೆ ಎಂದು ಇಪೋಕ್ ಟೈಮ್ಸ್ ವರದಿ ಮಾಡಿದೆ.

ಅಲ್ಲದೆ, ಇದೇ ಸಂದರ್ಭದಲ್ಲಿ ಪಾಂಗೋಂಗ್‌ ಸರೋವರದ ಬಳಿ ಗಡಿ ಉಲ್ಲಂಘನೆಗೆ ಚೀನಿ ಪಡೆಗಳು ಯತ್ನಿಸಿದ್ದು, ಭಾರತವೂ ಸರಿಯಾದ ರೀತಿಯಲ್ಲಿ ಪ್ರತ್ಯುತ್ತರ ನೀಡಿದೆ ಎನ್ನಲಾಗಿದೆ.

ಶನಿವಾರ ರಾತ್ರಿ ಪಾಂಗೋಂಗ್‌ ಸರೋವರದ ಪ್ರದೇಶದಲ್ಲಿ ಭಾರೀ ಸಂಖ್ಯೆಯಲ್ಲಿ ಚೀನಿ ಸೈನಿಕರ ಜಮಾವಣೆ ಮಾಡಲಾಗಿತ್ತಲ್ಲದೇ ಯುದ್ಧ ಹೆಲಿಕಾಪ್ಟರುಗಳನ್ನು ಸಹ ನಿಯೋಜಿಸಲಾಗಿತ್ತು. ಹಾಗಾಗಿ ಡಿ ಉಲ್ಲಂಘನೆಗೆ ಚೀನಿ ಪಡೆಗಳು ಯತ್ನಿಸಿದ್ದವು. ಈ ನಡುವೆ, ಭಾರತೀಯ ಯೋಧರ ಸಮಯಪ್ರಜ್ಞೆಯಿಂದಾಗಿ ಯಾವುದೇ ಸಂಘರ್ಷಕ್ಕೆ ಆಸ್ಪದ ನೀಡಿಲ್ಲ. ಅಲ್ಲದೆ, ಚೀನಿ ಪಡೆಗಳು ಗಡಿಯೊಳಗೆ ನುಸುಳಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ.

ಈ ಹಿಂದೆ, ಲಾಡಾಖ್‌ ಗಡಿ ಭಾಗದಲ್ಲಿ ಚೀನಾ ಸೈನ್ಯವು ಭಾರತೀಯ ಸೈನ್ಯದೊಂದಿಗೆ ಜೂನ್‌ 15 ರಂದು ಸಂಘರ್ಷ ನಡೆಸಿತ್ತು. ಇದರಿಂದಾಗಿ ಭಾರತದ 20ಕ್ಕೂ ಹೆಚ್ಚು ಯೋಧರು ಸಾವನ್ನಪ್ಪಿದ್ದರು. ಇದಾದ ನಂತರ ತಿಂಗಳುಗಳ ಕಾಲ ಗಡಿಯಲ್ಲಿ ಉದ್ವಿಘ್ನತೆ ಕಾವು ಪಡೆದುಕೊಂಡಿತ್ತು. ಹಲವಾರು ಸುತ್ತಿನ ಮಾತುಕತೆಗಳ ನಂತರ ಚೀನಾ ಸೈನ್ಯವು ಗಡಿ ಭಾಗದಿಂದ ಹಿಂದೆ ಸರಿದಿತ್ತು. ಈ ಬೆನ್ನಲ್ಲೇ ಭಾರತವು ಚೀನಾದ 59 ಮೊಬೈಲ್‌ ಆಪ್‌ಗಳನ್ನು ನಿಷೇಧಿಸಿದೆ.


Read Also: 1962ರಲ್ಲಿ ಭಾರತ-ಚೀನಾ ಯುದ್ದ ನಡೆದಾಗಿನಿಂದಲೂ ಲಡಾಖ್ ಪರಿಸ್ಥಿತಿ ಗಂಭೀರವಾಗಿದೆ: ಎಸ್.ಜೈಶಂಕರ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights