ಅನೇಕಲ್ ಬಳಿ ಚಿನ್ನದ ಮಳೆ : ನಾಣ್ಯಗಳನ್ನು ಸಂಗ್ರಹಿಸಲು ಮುಗಿ ಬಿದ್ದ ಜನ!

ಅನೇಕಲ್ ಗ್ರಾಮದಲ್ಲಿ ಜನರನ್ನು ಆಶ್ಚರ್ಯಗೊಳಿಸುವ ಮಳೆ ಸುರಿದೆ. ಮಳೆಯಲ್ಲಿ ಉರ್ದು ಭಾಷೆ ಮುದ್ರಿಸಿದ ಕೆಲ ನಾಣ್ಯಗಳು ಸಿಕ್ಕಿವೆ. ಆಮ್ಲ ಮಳೆ ಮೀನುಗಳ ಮಳೆ ನೋಡಿದ ಜನರಿಗೆ ಈ ಸುದ್ದಿ ನಿಜಕ್ಕೂ ಆಶ್ಚರ್ಯವನ್ನುಂಟುಮಾಡಿದೆ.

ತಮಿಳುನಾಡಿಗೆ ಸೇರಿರುವ ಬಾಗಲೂರು ಬಳಿ ನಿನ್ನೆ ಸಂಜೆ ಸುರಿದ ಮಳೆಯಲ್ಲಿ ನಾಣ್ಯಗಳು ಬಿದ್ದಿವೆ. ಅಚ್ಚರಿಗೊಂಡ ಜನ ಅವುಗಳನ್ನು ಸಂಗ್ರಹಿಸಲು ಮುಂದಾಗಿದ್ದಾರೆ. ಮಾತ್ರವಲ್ಲಿ ಈ ನಾಣ್ಯಗಳ ಜೊತೆಗೆ ಚಿನ್ನದ ನಾಣ್ಯಗಳು ಕೂಡ ಬಿದ್ದಿವೆ ಎನ್ನಲಾಗುತ್ತಿದೆ. ಒಂದು ಗ್ರಾಮ್ ತೂಕದ ಉರ್ದು ಭಾಷೆ ಮುದ್ರಿತ ನಾಣ್ಯಗಳು ಜನ ಸಂಗ್ರಹಿಸಿದ್ದಾರೆ. ಚಿನ್ನದ ನಾಣ್ಯ ಬಿದ್ದಿರುವ ಸುದ್ದಿ ಕೇಳಿದ ಜನ ಮಳೆಯನ್ನೂ ಲೆಕ್ಕಿಸದೇ ನಾಣ್ಯಗಳನ್ನು ಸಂಗ್ರಹಿಸಿದ್ದಾರೆ. ಇನ್ನೂ ಅಕ್ಕ-ಪಕ್ಕದ ಜನ ಕೂಡ ನಾಣ್ಯಗಳ ಹುಡುಕಾಟ ನಡೆಸಿದ್ದಾರೆ.

ಈ ನಾಣ್ಯಗಳ ಅಸಲಿಯತ್ತು ತಿಳಿಯಲು ಧರ್ಮಪುರಿ ಜಿಲ್ಲಾಡಳಿತ ಸ್ಥಲೀಯರಿಂದ ನಾಣ್ಯಗಳನ್ನು ಸಂಗ್ರಹಿಸಿ ಜಿಲ್ಲಾ ಕೇಂದ್ರದ ಪ್ರಯೋಗಾಲಯಕ್ಕೆ ಕಳುಹಿಸಿದೆ. ಇವುಗಳನ್ನು ಸ್ಥಳಿಯ ಅಕ್ಕಸಾಲಿಗರ ಬಳಿ ಪರಿಶೀಲನೆಗೆ ನೀಡಿದ ಪೊಲೀಸರಿಗೆ ಇವು ನಕಲಿ ನಾಣ್ಯಗಳು ಎಂದು ತಿಳಿದಿದೆ. ನಿಧಿ ದೊರೆತಿದೆ ಎಂದು ಹೇಳಿ ಮೋಸ ಮಾಡುವ ಜನರು ಹೆಚ್ಚಾಗಿರುವ ಆಂಧ್ರ ಮತ್ತು ತಮಿಳುನಾಡು ಗಡಿ ಭಾಗಗಳಲ್ಲಿ ನಕಲಿ ಚಿನ್ನದ ಮಾರಾಟ ಧಂಗೆಕೋರರು ಸಕ್ರಿಯವಾಗಿದ್ದಾರೆ, ಜನರನ್ನು ವಂಚಿಸಲು ಇಂತಹ ಕೃತ್ಯ ಎಸಗಿರಬಹುದು ಎಂದು ಹೇಳಲಾಗುತ್ತಿದೆ.

ಈ ನಾಣ್ಯ ಅಸಲಿಯತ್ತು ಇನ್ನೂ ಕೂಡ ಬಯಲಾಗಿಲ್ಲ. ಆದರೂ ಕೂಡ ಜನ ಇದನ್ನ ಸಂಗ್ರಹಿಸಲು ಮುಗಿಬಿದ್ದಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights