ಶಾಸಕ ಸತೀಶ್ ರೆಡ್ಡಿ ಮನೆ ಮುಂದೆ ನಿಲ್ಲಿಸಿದ್ದ ಕಾರಿಗೆ ಬೆಂಕಿ : ಸುಟ್ಟು ಕರಕಲಾದ ಐಷಾರಾಮಿ ಕಾರು!
ಶಾಸಕ ಸತೀಶ್ ರೆಡ್ಡಿ ಮನೆ ಮುಂದೆ ಸಿಲ್ಲಿಸಿದ್ದ ಕಾರುಗಳಿಗೆ ರಾತ್ರೋರಾತ್ರಿ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ.
ಬೆಂಗಳೂರಿನ ಬೊಮ್ಮಸಂದ್ರದ ಹೊಂಗಸಂದ್ರದಲ್ಲಿರುವ ಸತೀಶ್ ರೆಡ್ಡಿ ಮನೆ ಮುಂದೆ ನಿಲ್ಲಿಸಿದ್ದ ಕಾರುಗಳಿಗೆ ಬೆಂಕಿ ಹಚ್ಚಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಶಾಸಕರ ಮನೆಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಭೇಟಿ ನೀಡಿದ್ದಾರೆ. ಸಿಸಿ ಕ್ಯಾಮರಾ ಇರುವ ಕಡೆ ಸುಳಿಯದ ದುಷ್ಕರ್ಮಿಗಳು ಎಲ್ಲಿ ಸಿಸಿ ಕ್ಯಾಮರಾ ಇದಿಯೋ ಆಕಡೆಗೆ ಸುಳಿದಿಲ್ಲ. ಹೀಗಾಗಿ 2 ಐಷಾರಾಮಿ ಕಾರುಗಳು ಸೇಫ್ ಆಗಿವೆ. ಆದರೆ ಮನೆ ಮುಂದೆ ನಿಲ್ಲಿಸಿದ್ದ ಎರಡು ಐಷಾರಾಮಿ ಕಾರುಗಳಿಗೆ ಬೆಂಕಿ ಹಚ್ಚಲಾಗಿದೆ.
ತಡರಾತ್ರಿ 1.30ರ ವೇಳೆಗೆ ನಾಲ್ವರು ಕಿಡಿಗೇಡಿಗಳು ಈ ಕೃತ್ಯವೆಸಗಿದ್ದಾರೆ. ಕಾರಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ ಎಂದು ಶಾಸಕ ಸತೀಶ್ ರೆಡ್ಡಿ ಮಾಹಿತಿ ನೀಡಿದ್ದಾರೆ.
ಬೆಂಕಿ ಹಚ್ಚಿದವರು ಯಾರು ಎನ್ನುವ ಬಗ್ಗೆ ಇಲ್ಲಿಯ ತನಕ ಸುಳಿವು ಸಿಕ್ಕಿಲ್ಲ. ರಾಜಕೀಯ ದ್ವೇಷಕ್ಕಾಗಿ ಬೆಂಕಿ ಹಚ್ಚಲಾಗಿದೆಯಾ? ವೈಯಕ್ತಿಕ ಕಾರಣಗಳೇನಾದರೂ ಇವೆಯಾ? ಎನ್ನುವುದು ತನಿಖೆಯಿಂದ ಗೊತ್ತಾಗಬೇಕಿದೆ. ಘಟನೆಯ ನಂತರ ಪೊಲೀಸರಿಗೆ ಸತೀಶ್ ರೆಡ್ಡಿ ಮಾಹಿತಿ ನೀಡಿದ್ದು, ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೂರು ಪೊಲೀಸ್ ಠಾಣೆಯ ಇನ್ಸೆಕ್ಟರ್ ಗಳ ತಂಡ ತನಿಖೆ ಮಾಡಲು ಮುಂದಾಗಿದೆ.