ಡ್ರಗ್ಸ್ ಮಾಫಿಯಾ : ನಟಿ ಕಂಗನಾ ವಿರುದ್ಧ ಕಿಡಿಕಾರಿದ ರಾಖಿ ಸಾವಂತ್…!
ಸುಶಾಂತ್ ಸಾವಿನ ಪ್ರಕರಣ ಸಿಬಿಐ ತನಿಖೆಗೆ ಒಳಪಟ್ಟು ಮಾದಕ ಲೋಕಕ್ಕೆ ಕಾಲಿಟ್ಟಿದೆ. ಬಾಲಿವುಡ್ ನ ಹಲವಾರು ಸ್ಟಾರ್ ಗಳ ಹೆಸರುಗಳು ಮಾದಕ ಲೋಕದಲ್ಲಿ ತಳುಕು ಹಾಕಿಕೊಂಡಿದೆ. ಇದಕ್ಕೆ ಪುಷ್ಠಿ ನೀಡುವಂತೆ ನಟಿ ಕಂಗನಾ ರಣಾವತ್ ಬಾಲಿವುಡ್ ಬಗ್ಗಿ ಅಪಸ್ವರ ನುಡಿಸಿದ್ದರು. ಇದರ ವಿರುದ್ಧ ಧ್ವನಿ ಎತ್ತಿದ ರಾಖಿ ಸಾವಂತ್ ಕಂಗನಾ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಹೌದು… ಮಹಾರಾಷ್ಟ್ರ ಸರ್ಕಾರ ಹಾಗೂ ಸಿಎಂ ಯದ್ಧವ್ ಠಾಕ್ರೆ ಬಳಿ ಕಂಗನಾ ಕ್ಷಮೆ ಕೇಳಬೇಕು ಎಂದು ರಾಖಿ ವಿಡಿಯೋವೊಂದನ್ನ ಇನ್ ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ. ವೀಡಿಯೋದಲ್ಲಿ ಕಂಗನಾ ವಿರುದ್ಧ ಗುಡುಗಿದ ರಾಖಿ, ಕಂಗನಾ ಸುಳ್ಳು ಸಾಬೀತಾಗಿದೆ. ಸುಶಾಂತ್ ಸಾವಿನ ಪ್ರಕರಣಕ್ಕೆ ರಾಜಕೀಯ ಬಣ್ಣ ಕಟ್ಟಿದಕ್ಕೆ ನಾಚಿಕೆ ಆಗಬೇಕು ಎಂದಿದ್ದಾರೆ. ಆದ ಕಾರಣ ಕಂಗನಾ ಸುಶಾಂತ್ ಅಭಿಮಾನಿಗಳಿಗೆ, ಸಿಎಂ ಠಾಕ್ರೆ ಮತ್ತು ಪುತ್ರ ಆದಿತ್ಯ ಅವರಿಗೆ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ. ಬಾಲಿವುಡ್ ನಲ್ಲಿ ಅನ್ನ ತಿಂದು ಬಾಲಿವುಡ್ ಗೆ ಕಂಗನಾ ಕಂಳಕ ತಂದಿದ್ದಾಳೆ. ಬಾಲಿವುಡ್ ಸೆಲೆಬ್ರಿಟಿಗಳ ಬಳಿ ಕ್ಷೆಮೆಯಾಚನೆಗೆ ರಾಖಿ ಆಗ್ರಹಿಸಿದ್ದಾರೆ.
ರಾಜಕೀಯ ಲಾಭ ಪಡೆಯುವ ನಿನ್ನ ಕಾರ್ಯಗಳು ವಿಫಲವಾಗಿ ನೀನು ಸೋತಿದ್ದಿಯಾ. ನಿನ್ನ ಬಗ್ಗೆ ನನಗೆ ಅನುಕಂಪವಿದೆ.ಈ ಪ್ರಮಾಣದಲ್ಲಿ ಹೋರಾಟ ಇಷ್ಟ ಪಡುವ ನೀನು ದೇಶದ ಗಡಿಯಲ್ಲಿ ಸೇವೆ ಸಲ್ಲಿಸು. ಚೀನಾದ ವಿರುದ್ಧ ಹೋರಾಡು ಎಂದು ಕುಟುಕಿದ್ದಾರೆ.
ಬಾಲಿವುಡ್ ನಿರ್ದೇಶಕರು, ನಿರ್ಮಾಪಕರು ಕೆಟ್ಟವರು ಎಂದು ಹೇಳಿವ ನೀನು ಒಳ್ಳೆಯವಳಾ..? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಈ ಹಿಂದೆ ಕಂಗನಾ ವಿರುದ್ಧ ಕಿಡಿಕಾರಿದ ವಿಡಿಯೋ ಅಪ್ಲೋಡ್ ಮಾಡಿದ್ದ ರಾಖಿ ಅದರಲ್ಲಿ, ಕಂಗನಾಳನ್ನ ಮಾದಕದ ಬಗ್ಗೆ ಪರೀಕ್ಷೆಗೆ ಒಳಪಡಿಸಿ. 99.1% ಆಕೆಯ ಮಾದಕ ಸೇವನೆ ಬಗ್ಗೆ ಬಯಲಾಗುತ್ತದೆ ಎಂದು ಹೇಳಿದ್ದರು.