RCB ಸೋಲಿನ ಬೆನ್ನಲ್ಲೇ ಮತ್ತೊಂದು ಶಾಕ್‌; ತಂಡದಿಂದ ಹೊರ ನಡೆದ ಇಬ್ಬರು ಆಟಗಾರರು!

2021ರ ಐಪಿಎಲ್‌ ಟೂರ್ನಿಯಲ್ಲಿ ಸತತವಾಗಿ ನಾಲ್ಕು ಮ್ಯಾಚ್‌ಗಳನ್ನು ಗೆದ್ದಿದ್ದ ಆರ್‌ಸಿಬಿ, ಭಾನುವಾರ ಸಿಎಸ್‌ಕೆ ವಿರುದ್ಧ ನಡೆದ ಮ್ಯಾಚ್‌ನಲ್ಲಿ ಸೋಲುಂಡಿದೆ. ಆರ್‌ಸಿಬಿ ವಿಜಯಗಳಿಂದ ಬೀಗುತ್ತಿದ್ದ ಅಭಿಮಾನಿಗಳಿಗೆ ಈ ಸೋಲು ಕೊಂಚ ಅಸಮಾಧಾನವನ್ನು ತಂದೊಡ್ಡಿತ್ತು. ಸೋಲಿನ ಶಾಕ್‌ನಲ್ಲಿದ್ದ ಅಭಿಮಾನಿಗಳಿಗೆ ತಂಡ ಮತ್ತೊಂದು ಶಾಕ್‌ ನೀಡಿದ್ದು, ತಂಡದಲ್ಲಿದ್ದ ಆಸ್ಪ್ರೇಲಿಯಾದ ಇಬ್ಬರು ಆಟಗಾರರು ತಮ್ಮ ದೇಶಕ್ಕೆ ಹಿಂದಿರುಗುತ್ತಿರುವುದಾಗಿ ತಂಡ ತಿಳಿಸಿದೆ.

ಆರ್​ಸಿಬಿ ತಂಡದಲ್ಲಿ ಆಸ್ಟ್ರೇಇಲಿಯಾದ ಕೇನ್​ ರಿಚರ್ಡ್​ಸನ್ ಹಾಗೂ ಆಡಮ್​ ಜಂಪಾ ಐಪಿಎಲ್​ 2021ರ ಆಟವನ್ನು ಅರ್ಧದಲ್ಲೇ ಬಿಟ್ಟು ತಮ್ಮ ದೇಶಕ್ಕೆ ಮರಳಲಿದ್ದಾರೆ. ಭಾರತದಂತೆಯೇ ಆಸ್ಟ್ರೇಲಿಯಾದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಆ ಹಿನ್ನೆಲೆಯಲ್ಲಿ ಖಾಸಗಿ ಕಾರಣಗಳಿಂದ ಈ ಇಬ್ಬರು ಆಟಗಾರರು ಮರಳುತ್ತಿದ್ದಾರೆ ಎಂದು ತಂಡ ಟ್ವೀಟ್‌ ಮಾಡಿದೆ.

ಅಂದ ಹಾಗೆ ಈ ಇಬ್ಬರೂ ಆಟಗಾರರು ಸಲದ ಐಪಿಎಲ್​ನಲ್ಲಿ ಆರ್​ಸಿಬಿ ಪರ ರಿಚರ್ಡ್​ಸನ್​ ಒಂದು ಮ್ಯಾಚ್​ ಆಡಿದ್ದರು. ಜಂಫಾ ಫೀಲ್ಡಿಗೆ ಇಳಿದೇ ಇರಲಿಲ್ಲ.

ರಾಜಸ್ಥಾನ ರಾಯಲ್ಸ್ ತಂಡದಲ್ಲಿದ್ದಆಂಡ್ರ್ಯೂ ಟೈ ಕೂಡ ಭಾನುವಾರ ಅವರ ದೇಶಕ್ಕೆ ಹಿಂದಿರುಗಿದ್ದಾರೆ.

ಇದನ್ನೂ ಓದಿ: ಸಚಿನ್ ತೆಂಡೂಲ್ಕರ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ : ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ!

Spread the love

Leave a Reply

Your email address will not be published. Required fields are marked *