ರೈತರ ಆತ್ಮಹತ್ಯೆ ಕುರಿತು ಹಲವು ರಾಜ್ಯಗಳು ಮಾಹಿತಿಯನ್ನೇ ನೀಡಿಲ್ಲ: ಕೇಂದ್ರ ಸರ್ಕಾರ

ದೇಶದ ಹಲವು ರಾಜ್ಯಗಳು ಮತ್ತು ರೈತ ಆತ್ಮಹತ್ಯೆಗಳ ವಿವರಗಳನ್ನು ನೀಡಿಲ್ಲ. ಹೀಗಾಗಿ ರೈತರ ಆತ್ಮಹತ್ಯೆ ಯ ಕಾರಣಗಳ ಕುರಿತ ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆ (ಎನ್‌ಸಿಆರ್‌ಬಿ) ಮಾಹಿತಿಯನ್ನು ಪ್ರಕಟಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸೋಮವಾರ ಹೇಳಿದೆ.

ದೇಶದಲ್ಲಿ 10,281 ರೈತರು ಅಸಹಜ ಸಾವುಗಳು ಮತ್ತು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ. 2018ರಲ್ಲಿ 10,357 ರೈತರು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದರು. 2018ಕ್ಕೆ ಹೋಲಿಸಿದರೆ, 2019ರಲ್ಲಿ ಸಾವಿನ ಪ್ರಮಾಣ ಕಡಿಮೆಯಾಗಿದೆ. ದೇಶದಲ್ಲಿ ಕೃಷಿ ಕ್ಷೇತ್ರದಲ್ಲಿನ ಆತ್ಮಹತ್ಯೆ ಪ್ರಮಾಣವು ಶೇಕಡಾ 7.4 ರಷ್ಟಿದೆ (5,957 ರೈತರು ಮತ್ತು 4,324 ಕೃಷಿ ಕಾರ್ಮಿಕರು) ಎಂದು ಇತ್ತೀಚಿನ ಎನ್‌ಸಿಆರ್‌ಬಿ ಅಂಕಿಅಂಶಗಳಲ್ಲಿ ಹೇಳಲಾಗಿತ್ತು.

ಎನ್‌ಸಿಆರ್‌ಬಿ ತಿಳಿಸಿದಂತೆ ಪರಿಶೀಲನೆಗಳ ನಂತರವೂ ಹಲವು ರಾಜ್ಯಗಳು ರೈತರ ಆತ್ಮಹತ್ಯೆ ಕುರಿತಂತೆ ವರದಿಯನ್ನೆ ನೀಡಿಲ್ಲ. ಈ ಮಿತಿಯಿಂದಾಗಿ, ರೈತರ ಆತ್ಮಹತ್ಯೆಯ ಕಾರಣಗಳ ಕುರಿತ ರಾಷ್ಟ್ರೀಯ ಮಾಹಿತಿಯು ಒಪ್ಪಿತವಾಗಿಲ್ಲ ಮತ್ತು ಪ್ರಕಟಿಸಲಾಗಿಲ್ಲ,’ ಎಂದು ಅವರು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿ. ಕಿಶನ್ ರೆಡ್ಡಿ ತಿಳಿಸಿದ್ದಾರೆ.


ಇದನ್ನೂ ಓದಿ: ರೈತ ವಿರೋಧಿ ಮಸೂದೆಗಳನ್ನು ಹಿಂಪಡೆಯದಿದ್ದರೆ, ಯಡಿಯೂರಪ್ಪ ಕುರ್ಚಿ ಉಳಿಯುವುದಿಲ್ಲ: ಬಡಗಲಪುರ ನಾಗೇಂದ್ರ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights