ದೇಶದಲ್ಲಿ ಕೊರೊನಾ ಹರಡಲು ಚುನಾವಣಾ ಆಯೋಗವೇ ಕಾರಣ; ಅಧಿಕಾರಿಗಳ ವಿರುದ್ಧ ಏಕೆ ಕೊಲೆ ಪ್ರಕರಣ ದಾಖಲಿಸಬಾರದು?: ಆಯೋಗದ ವಿರುದ್ಧ ಮದ್ರಾಸ್‌ ಹೈಕೋರ್ಟ್‌ ಗರಂ!

“ದೇಶದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡಲು ಚುನಾವಣಾ ಆಯೋಗವೇ ಕಾರಣ. ಸಂದಿಗ್ಧ ಸಂದರ್ಭದಲ್ಲಿ 5 ರಾಜ್ಯಗಳ ಚುನಾವಣೆಯಲ್ಲಿ ರ್ಯಾಲಿ ನಡೆಸಲು ಅನುಮತಿ ನೀಡುವ ಮೂಲಕ ಚುನಾವಣಾ ಆಯೋಗ ಸ್ವತಃ ಕೊರೊನಾ ಹರಡಿದೆ. ಹೀಗಾಗಿ ಚುನಾವಣಾ ಅಧಿಕಾರಿಗಳ ವಿರುದ್ಧ ಏಕೆ ಕೊಲೆ ಪ್ರಕರಣ ದಾಖಲಿಸಬಾರದು?” ಎಂದು ಚುನಾವಣಾ ಆಯೋಗದ ವಿರುದ್ಧ ಮದ್ರಾಸ್​ ಹೈಕೋರ್ಟ್ ಹರಿಹಾಯ್ದಿದೆ. ಅಲ್ಲದೆ, ಇತ್ತೀಚೆಗೆ ಮುಗಿದ ತಮಿಳುನಾಡು ವಿಧಾನಸಭಾ ಚುನಾವಣಾ ಮತ ಎಣಿಕೆಗೂ ತಡೆ ಒಡ್ಡುವ ಎಚ್ಚರಿಕೆ ನೀಡಿದೆ.

ಇಂದು ಚುನಾವಣಾ ಆಯೋಗದ ವಿರುದ್ಧ ಕಿಡಿಕಾರಿರುವ ಮದ್ರಾಸ್​ ಹೈಕೋರ್ಟ್​, “COVID-19 ರ ಎರಡನೇ ತರಂಗಕ್ಕೆ ಚುನಾವಣಾ ಆಯೋಗ ಏಕೈಕ ಕಾರಣವಾಗಿದೆ. ನಿಮ್ಮ ಅಧಿಕಾರಿಗಳ ಮೇಲೆ ಏಕೆ ಕೊಲೆ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಿಸಬಾರದು?. ನ್ಯಾಯಾಲಯದ ಆದೇಶದ ಹೊರತಾಗಿಯೂ ಪ್ರಚಾರದ ಸಮಯದಲ್ಲಿ ಮುಖವಾಡಗಳು, ಸ್ಯಾನಿಟೈಸರ್​ಗಳ ಬಳಕೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಎಲ್ಲಾ ಕೋವಿಡ್ ಸುರಕ್ಷತಾ ನಿಯಮಗಳನ್ನು ಜಾರಿಗೆ ತರವಲ್ಲಿ ಚುನಾವಣಾ ಸಂಸ್ಥೆ ವಿಫಲವಾಗಿದೆ” ಎಂದು ಹೈಕೋರ್ಟ್ ಹೇಳಿದೆ.

“ಚುನಾವಣಾ ರ್ಯಾಲಿಗಳು ನಡೆದಾಗ ನೀವು ಇನ್ನೊಂದು ಗ್ರಹದಲ್ಲಿ ಇದ್ದಿರೇ?” ಎಂದು ಮುಖ್ಯ ನ್ಯಾಯಮೂರ್ತಿ ಸಂಜೀಬ್ ಬ್ಯಾನರ್ಜಿ ಪ್ರಶ್ನಿಸಿದ್ದಾರೆ.

Read Also: ಕೇರಳ: ಚುನಾವಣಾ ಆಯೋಗದ ನಿರ್ದೇಶನಕ್ಕೆ ತಡೆ; ವಿಶೇಷ ಅಕ್ಕಿ ವಿತರಣೆಗೆ ಹೈಕೋರ್ಟ್‌ ಅನುಮತಿ!

ಮೇ.2 ರಂದು ತಮಿಳುನಾಡಿನಲ್ಲಿ ಮತ ಎಣಿಕೆ ಆರಂಭವಾಗಲಿದೆ. ಆದರೆ, ಶುಕ್ರವಾರದೊಳಗೆ ಕೋವಿಡ್ ನಿಯಮಗಳನ್ನು ಜಾರಿಗೊಳಿಸುವ ಯೋಜನೆಯನ್ನು ಚುನಾವಣಾ ಆಯೋಗದ ಬಳಿ ಹೈಕೋರ್ಟ್ ಕೇಳಿದೆ. ಒಂದು ವೇಳೆ ಚುನಾವಣಾ ಆಯೋಗ ಈ ನೀಲನಕ್ಷೆಯನ್ನು ನೀಡದಿದ್ದರೆ ಮತ ಎಣಿಕೆಯನ್ನೇ ನಿಲ್ಲಿಸುವುದಾಗಿಯೂ ಎಚ್ಚರಿಸಿದೆ.

“ಸಾರ್ವಜನಿಕ ಆರೋಗ್ಯವು ಅತ್ಯುನ್ನತವಾದುದು. ಸಾಂವಿಧಾನಿಕ ಅಧಿಕಾರಿಗಳನ್ನು ನೆನಪಿಸಬೇಕಾಗಿರುವುದು ದುಃಖಕರವಾಗಿದೆ. ನಾಗರಿಕನು ಬದುಕುಳಿದಾಗ ಮಾತ್ರ ಅವನು ಪ್ರಜಾಪ್ರಭುತ್ವ ಗಣರಾಜ್ಯವು ಖಾತರಿಪಡಿಸುವ ಹಕ್ಕುಗಳನ್ನು ಆನಂದಿಸಲು ಸಾಧ್ಯವಾಗುತ್ತದೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಕರೂರ್ ಕ್ಷೇತ್ರದ ಎಣಿಕೆ ಸಭಾಂಗಣಗಳಲ್ಲಿ ಕೋವಿಡ್ ಅನುಸರಣೆ ಕೋರಿ ತಮಿಳುನಾಡು ಸಾರಿಗೆ ಸಚಿವ ಎಂ.ಆರ್.ವಿಜಯಬಾಸ್ಕರ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಚುನಾವಣಾ ಆಯೋಗಕ್ಕೆ ಹೀಗೊಂದು ಎಚ್ಚರಿಕೆ ನೀಡಿದೆ.

ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪುದುಚೇರಿಯಲ್ಲಿ ನಡೆದ ಚುನಾವಣೆಗಳ ನಂತರ ದೇಶದಲ್ಲಿ ಕೋವಿಡ್ ಪ್ರಕರಣಗಳು ಸ್ಫೋಟಗೊಂಡಿವೆ. ಪ್ರಸ್ತುತ ಭಾರತದಲ್ಲಿ ದಿನವೊಂದಕ್ಕೆ 3.52 ಲಕ್ಷ ಪ್ರಕರಣಗಳು ಮತ್ತು 2,812 ಸಾವುಗಳು ವರದಿಯಾಗಿದೆ.

Read Also: ರ್‍ಯಾಲಿಗೆ ಹೋಗಲ್ಲ ಎಂದ ಮೋದಿ; ಚುನಾವಣಾ ರ್‍ಯಾಲಿಯನ್ನು 500 ಜನರಿಗೆ ಸೀಮಿತಗೊಳಿಸಿದ ಚು. ಆಯೋಗ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights