ಮಂಗಳವಾರ ಸಂಜೆಯಿಂದ ರಾಜ್ಯದಲ್ಲಿ 14 ದಿನ ಲಾಕ್ ಡೌನ್..!
ಕೊರೊನಾ ಉಲ್ಬಣದಿಂದಾಗಿ ರಾಜ್ಯದಲ್ಲಿ 14 ದಿನ ಲಾಕ್ ಡೌನ್ ಜಾರಿಗೊಳಿಸಿರುವುದಾಗಿ ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ.
ಇಂದು ವಿಧಾನಸೌಧದಲ್ಲಿ ಮಾತಾಡಿದ ಮುಖ್ಯಮಂತ್ರಿ, ರಾಜ್ಯದಾದ್ಯಂತ ಮಂಗಳವಾರ ರಾತ್ರಿಯಿಂದ ಮೇ 10ರ ವರೆಗೆ ಸಂಪೂರ್ಣ ಲಾಕ್‌ಡೌನ್ ಮಾಡುತ್ತಿರುವುದಾಗಿ ಹೇಳಿದ್ದಾರೆ. ಬಿಗಿಯಾದ ಕ್ರಮಗಳು ಹೇರಲಾಗಿದ್ದು, ಲಾಕ್‌ಡೌನ್ ಸಮಯದಲ್ಲಿ ಬೆಳಿಗ್ಗೆ 6 ರಿಂದ 10 ಗಂಟೆಗಳ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ.
ಗಾರ್ಮೆಂಟ್ ಬಿಟ್ಟು ಉಳಿದ ಎಲ್ಲಾ ಕೈಗಾರಿಗಕೆಗಳಿಗೆ ಅವಕಾಶ ನೀಡಲಾಗಿದೆ. ಜನರ ಓಡಾಟಕ್ಕೆ ನಿರ್ಬಂಧ ಹೇರಲಾಗಿದೆ. ಆದರೆ ಬೆಳಿಗ್ಗೆ 6 ರಿಂದ 10 ಗಂಟೆಗಳ ವರೆಗೆ ಮದ್ಯದ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದ್ದು, ಪಾರ್ಸೆಲ್‌ಗೆ ಅವಕಾಶವಿದೆ.
ಮುಂದಿನ ಹದಿನಾಲ್ಕು ದಿನಗಳ ಕಾಲ ಸಾರ್ವಜನಿಕ ಸಾರಿಗೆಯನ್ನು ಕೂಡ ಬಂದ್ ಮಾಡಲಾಗುತ್ತದೆ, ಮೆಟ್ರೋ ಓಡಾಟ ಕೂಡಾ ಇರುವುದಿಲ್ಲ. ಕಟ್ಟಡ ನಿರ್ಮಾಣ ಕಾಮಗಾರಿಗಳು ಯಾವುದೆ ಅಡ್ಡಿಯಿಲ್ಲದೆ ಮುಂದುವರೆಯಬಹುದು ಎಂದು ರಾಜ್ಯ ಸರ್ಕಾರ ಹೇಳಿದೆ.
ಅಂತರಾಜ್ಯ ವಾಹನ ಓಡಾಟಕ್ಕೆ ನಿರ್ಬಂಧ ಹೇರಲಾಗಿದೆ. ಕೃಷಿ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆ.
“ಲಾಕ್‌ಡೌನ್ ದಿನಗಳಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರದಿದ್ದರೆ, ಇನ್ನೂ ಒಂದು ವಾರ ಮುಂದುವರೆಯುತ್ತದೆ” ಎಂದು ಮುಖ್ಯಮಂತ್ರಿ ಲಾಕ್‌ಡೌನ್ ಮುಂದುವರಿಕೆಯ ಸೂಚನೆ ಕೂಡಾ ನೀಡಿದ್ದಾರೆ.
ಮುಂದಿನ ಕೆಲವೇ ಗಂಟೆಗಳಲ್ಲಿ ವಿಸ್ತೃತ ಮಾಹಿತಿಯನ್ನು ಸರ್ಕಾರವು ಹೊರಡಿಸಲಿದೆ.