ಬಿಗ್ ಬಾಸ್ ಮನೆಯಿಂದ ರಾಜೀವ್ ಔಟ್ ಆದ್ರಾ? ಅಥವಾ ಸಿಕ್ರೇಟ್ ರೂಂ ನಲ್ಲಿದ್ದಾರಾ?

ಬಿಗ್ ಬಾಸ್ ಮನೆಯಲ್ಲಿ ನಿನ್ನೆ ನಾಮಿನೇಷನ್ ಆಗಿದ್ದವರಲ್ಲಿ ಯಾರು ಮನೆಯಿಂದ ಹೊರಹೋಗುತ್ತಾರೆ ಅನ್ನೋ ಲೆಕ್ಕಾಚಾರ ಉಲ್ಟಾ ಹೊಡೆದಿದೆ. ಹೀಗಾಗಿ ಮನೆಯಿಂದ ಔಟ್ ಆದ ರಾಜೀವ್ ನಿಜವಾಗಲೂ ಮನೆಯಿಂದ ಹೊರಬಂದಿದ್ದಾರಾ? ಅಥವಾ ಸಿಕ್ರೇಟ್ ರೂಂ ನಲ್ಲಿದ್ದಾರಾ? ಅನ್ನೋ ಅನುಮಾನ ಶುರುವಾಗಿದೆ.

ಹೌದು… ಬಿಗ್ ಬಾಸ್ ಮನೆಯಲ್ಲಿ ಪ್ರೇಕ್ಷರ ಮನ ಗೆದ್ದಿದ್ದ ಕೆಲ ಸ್ಪರ್ಧಿಗಳು ಈ ವಾರ ಮನೆಯಿಂದ ಹೊರಹೋಗದೇ ಉಳಿಯುತ್ತಾರೆ ಅನ್ನೋ ಅಂಬಿಕೆ ಅಪಾರವಾಗಿತ್ತು. ಆದರೆ ಈ ಬಾರಿ ಹಲವಾರು ಜನರ ನಂಬಿಕೆ ಹುಸಿಯಾಗಿದೆ.

ಈ ಬಾರಿ ಮಂಜು, ದಿವ್ಯಾ, ರಾಜೀವ್, ಸಂಬರಗಿ, ವೈಷ್ಣವಿ, ರಘು ಈ ಆರು ಮಂದಿ ಮನೆಯಿಂದ ಆಚೆಹೋಗಲು ನಾಮಿನೇಷನ್ ಆಗಿದ್ದರು. ರಘು ಮನೆಯಿಂದ ಆಚೆ ಹೋಗುತ್ತಾರೆ ಎಂದು ಕೊಳ್ಳುವಷ್ಟರಲ್ಲಿ  ಅವರು ಮನೆಯ ಕ್ಯಾಪ್ಟನ್ ಆಗುವ ಮೂಲಕವಾಗಿ ಸೇಫ್ ಜೋನ್ ನಲ್ಲಿದ್ದರು. ನಂತರ ಎಲ್ಲರ ದೃಷ್ಟಿ ಸಂಬರಗಿ ಮೇಲೆ ಇತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆದಿತ್ತು.

ಆದರೆ ವೀಕ್ಷಕರ ಊಹೆ ತಪ್ಪಾಗಿದೆ. ರಾಜೀವ್ ಮನೆಯಿಂದ ಹೊರನಡೆದಿದ್ದಾರೆ. ಅವರ ಗೋಲ್ಡನ್ ಪಾಸ್ ನ್ನು ಶುಭಾ ಅವರಿಗೆ ಕೊಟ್ಟಿದ್ದಾರೆ.

ಆದರೂ ನಿರೀಕ್ಷೆಗೆ ಮೀರಿ ರಾಜೀವ್ ಔಟ್ ಆಗಿದ್ದಾರೆ ಅಂದರೆ ಸಾಕಷ್ಟು ಅನುಮಾನಗಳಿವೆ. ರಾಜೀವ್ ಮನೆಯಿಂದ ಹೊರ ನಡೆದಿದ್ದಾರಾ? ಅಥವಾ ಮನೆಯಲ್ಲೇ ಸಿಕ್ರೇಟ್ ರೂಂ ನಲ್ಲಿದ್ದಾರಾ? ಅನ್ನೋ ಅನುಮಾನ ಶುರುವಾಗಿದೆ. ಇದಕ್ಕೆಲ್ಲಾ ುತ್ತರ ಮುಂದಿನ ಸಂಚಿಕೆಯಲ್ಲಿ ಸಿಗಲಿದೆ.

 

Spread the love

Leave a Reply

Your email address will not be published. Required fields are marked *