ಬಾಲಿವುಡ್​ ನಟ ಇರ್ಫಾನ್ ಖಾನ್ ನಿಧನ! : ಸಂತಾಪ ಸೂಚಿಸಿದ ಗಣ್ಯರು…

ಕೊಲೊನ್ ಇನ್‍ಫೆಕ್ಷನ್‍ನಿಂದಾಗಿ ಆಧುನಿಕ ಬಾಲಿವುಡ್​ನ ಕಿಂಗ್ ನಟ ಇರ್ಫಾನ್ ಖಾನ್ ಇಂದು ನಿಧನರಾಗಿದ್ದಾರೆ.

ಮುಂಬೈನ ಕೋಕಿಲಾಬೆನ್ ಧೀರೂಭಾಯ್ ಅಂಬಾನಿ ಅಸ್ಪತ್ರೆಯ ಐಸಿಯುನಲ್ಲಿ ಇರ್ಫಾನ್ ಖಾನ್ ಚಿಕಿತ್ಸೆ ಪಡೆಯುತ್ತಿದ್ದರು. ಕೊಲೊನ್ ಇನ್‍ಫೆಕ್ಷನ್‍ನಿಂದಾಗಿ ಇರ್ಫಾನ್ ಅವರನ್ನು ಅಬ್ಸರ್ವೇಶನ್‍ನಲ್ಲಿ ಇಡಲಾಗಿತ್ತು. ಆದರೆ ಇಂದು ಅವರು ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಆಧುನಿಕ ಬಾಲಿವುಡ್​ನ ಕಿಂಗ್ ಎಂದೇ ಕರೆಯಲಾಗುವ ನಟ ಇರ್ಫಾನ್ ಖಾನ್ 54ರ ಹರೆಯದಲ್ಲಿ ಇಹಲೋಕ ತ್ಯಜಿಸಿದ್ಧಾರೆ. ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಸೋಲಪ್ಪಿ ಕಣ್ಮರೆಯಾಗಿದ್ದಾರೆ. ಅವರ ನಿಧನಕ್ಕೆ ಬಾಲಿವುಡ್ ಜಗತ್ತು ಮತ್ತು ರಾಜಕೀಯ ಕ್ಷೇತ್ರ ಆಘಾತ ವ್ಯಕ್ತಪಡಿಸಿದೆ.

ಇರ್ಫಾನ್ ಅವರಿಗೆ ನ್ಯೂರೋಎಂಡೋಕ್ರೈನ್ ಗಡ್ಡೆ ಇರುವುದು 2018ರಲ್ಲೇ ತಿಳಿದಿತ್ತು. ಇದಕ್ಕಾಗಿ ಅವರು ವಿದೇಶದಲ್ಲಿ ಚಿಕಿತ್ಸೆಯನ್ನೂ ಪಡೆದಿದ್ದರು. ಶನಿವಾರ ಅವರ ತಾಯಿ ಸಾಯಿಬಾ ಬೇಗಂ ಅವರನ್ನು ಕಳೆದುಕೊಂಡಿದ್ದ ಅವರು ವಿಡಿಯೋ ಕಾಲ್ ಮೂಲಕ ಅವರಿಗೆ ಅಂತಿಮ ನಮನ ಸಲ್ಲಿಸಿದ್ದರು.

ಇರ್ಫಾನ್ ಖಾನ್ ಜಾಗತಿಕ ಸಿನಿಮಾ ಮತ್ತು ಕಿರುತೆರೆಗೆ ಭಾರತೀಯ ಬ್ರ್ಯಾಂಡ್ ಅಂಬಾಸಡರ್​ನಂತಿದ್ದರು. ಅವರನ್ನು ಕಳೆದುಕೊಂಡಿರುವುದು ತುಂಬಲಾರದ ನಷ್ಟವಾಗಿದೆ ಎಂದು ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಂತಾಪ ಸೂಚಿಸಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟ್ ರ ಮೂಲಕ ಇರ್ಫಾನ್ ಖಾನ್ ಅಸಾಧಾರಣ ನಟ. ಅವರು ಮಾಡಿದ ಕೆಲಸಗಳು ಚಿರ ಹಸಿರಾಗಿಯೇ ಇರುತ್ತವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬರೆದುಕೊಂಡಿದ್ದಾರೆ.

ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಮತ್ತು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಕೂಡ ಇರ್ಫಾನ್ ಖಾನ್ ನಿಧನಕ್ಕೆ ಆಘಾತ ವ್ಯಕ್ತಪಡಿಸಿದ್ದಾರೆ.

ಬಾಲಿವುಡ್ ಸೆಲಬ್ರಿಟಿಗಳಂತೂ ಇರ್ಫಾನ್ ನಿಧನಕ್ಕೆ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಹಿರಿಯ ನಟ ಅಮಿತಾಬ್ ಬಚ್ಚನ್ ಅವರು ವಿಶ್ವ ಸಿನಿಮಾರಂಗಕ್ಕೆ ಇರ್ಫಾನ್ ಕೊಡುಗೆಯನ್ನು ಸ್ಮರಿಸಿಕೊಂಡು ದುಃಖಿತರಾಗಿದ್ಧಾರೆ.

https://twitter.com/SrBachchan/status/1255387239330263041

ನಟ ಅಕ್ಷಯ್ ಕುಮಾರ್, ಲಾರಾ ದತ್ತ ಮೊದಲಾದವರೂ ಕೂಡ ಸಂತಾಪ ವ್ಯಕ್ತಪಡಿಸಿದ್ದಾರೆ.

https://twitter.com/LaraDutta/status/1255386606418243586

 

https://twitter.com/akshaykumar/status/1255394274822230017

 

 

 

 

 

 

 

 

 

 

 

 

 

 

 

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights