2 ಸಾವಿರ ಲಂಚ ಸ್ವೀಕರಿಸೊ ವೇಳೆ ಎಸಿಬಿ ಬಲೆಗೆ ಬಿದ್ದ ಅಧಿಕಾರಿ…..!
2 ಸಾವಿರ ಲಂಚ ಸ್ವೀಕರಿಸೊ ವೇಳೆ ಅಧಿಕಾರಿಯೊಬ್ಬ ಎಸಿಬಿ ಬಲೆಗೆ ಬಿದ್ದಿದ್ದಾನೆ. ಕೋಲಾರ ನಗರಸಭೆ ಹಂಗಾಮಿ ಪೌರಾಯುಕ್ತ ಎಸಿಬಿ ಬಲೆಗೆ ಬಿದ್ದ ಅಧಿಕಾರಿ.
ರವಿಕುಮಾರ್ ಎನ್ನುವರಿಂದ ಭ್ರಷ್ಟ ಅಧಿಕಾರಿ ಸುಧಾಕರ್ ಶೆಟ್ಟಿ 2 ಸಾವಿರ ಲಂಚ ಸ್ವೀಕರಿಸೊ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾನೆ. ನಗರಸಭೆ ಕಚೇರಿಯಲ್ಲಿ ಲಂಚ ಸ್ವೀಕರಿಸೋ ವೇಳೆ ಎಸಿಬಿ ಸರ್ಕಲ್ ಇನ್ಸ್ ಪೆಕ್ಟರ್ ವೆಂಕಟಾಚಲಪತಿ ನೇತೃತ್ವದಲ್ಲಿ ದಾಳಿ ಮಾಡಲಾಗಿದ್ದು, ಹಂಗಾಮಿ ಪೌರಾಯುಕ್ತ ಸುಧಾಕರ್ ಶೆಟ್ಟಿ ಬಂದಿಸಿ ವಿಚಾರಣೆ ನಡೆಸುತ್ತಿದ್ದಾರೆ ಅಧಿಕಾರಿಗಳು.

