ಯುಪಿಎ ಚುಕ್ಕಾಣಿ ಶರದ್ ಪವಾರ್‌ ಕೈಗೆ ಎಂಬುದು ವದಂತಿ? ಸ್ಪಷ್ಟನೆ ನೀಡದ ಎನ್‌ಸಿಪಿ ವರಿಷ್ಠ!

ಯಪಿಎ ಮೈತ್ರಿಕೂಟದ ಅಧ್ಯಕ್ಷರಾಗಿರುವ ಸೋನಿಯಾ ಗಾಂಧಿಯವರ ಆರೋಗ್ಯ ಸಮಸ್ಯೆಯಿಂದಾಗಿ ಅವರು ಯುಪಿಎ ಅಧ್ಯಕ್ಷ ಸ್ಥಾನ ತೊರೆಯುವ ಸಾಧ್ಯತೆ ಇದ್ದು, ಆ ಸ್ಥಾನಕ್ಕೆ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪವಾರ್, ಅಂತಹ ಯಾವುದೇ ಬೆಳವಣಿಗೆಗಳು ನಡೆದಿಲ್ಲ. ನಾವು ಯುಪಿಎ ಮುನ್ನಡೆಸು ಚುಕ್ಕಾಣಿ ಹಿಡಿಯುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಯುಪಿಎ ಮೈತ್ರಿಕೂಟದ ಅಧ್ಯಕ್ಷ ಸ್ಥಾನದ ಬದಲಾವಣೆ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದ ಶಿವಸೇನೆಯ ಮುಖಂಡ ಸಂಜಯ್‌ ರಾವತ್‌ ಅವರು, ಶರದ್‌ ಪವಾರ್‌ ಅವರಿಗೆ ಯುಪಿಎ ಮುನ್ನಡೆಸುವ ಸಾಮರ್ಥ್ಯವಿದೆ. ಅವರು ಯುಪಿಎ ಅಧ್ಯಕ್ಷರಾಗುವುದು ಉತ್ತಮ ಎಂದು ಅಭಿಪ್ರಾಯ ಪಟ್ಟಿದ್ದರು.

ಅಲ್ಲದೆ, “ದೇಶದಲ್ಲಿ ಕಾಂಗ್ರೆಸ್‌ ದುರ್ಬಲವಾಗಿದೆ. ಎನ್‌ಸಿಪಿ ವರಿಷ್ಠ ಶರದ್‌ ಪವಾರ್‌ ಅವರು ಯುಪಿಎ ಮೈತ್ರಿಕೂಟದ ಅಧ್ಯಕ್ಷರಾದರೆ ಉತ್ತಮ.  ಮಹಾರಾಷ್ಟ್ರದಲ್ಲಿ ಪವಾರ್‌ ಅವರ ಮಾರ್ಗದರ್ಶನದಲ್ಲಿ ಮೈತ್ರಿಕೂಟ ಸರಕಾರ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದೆ. ಯುಪಿಎ ಮೈತ್ರಿಕೂಟ ಮುನ್ನಡೆಸಲು ಪವಾರ್‌ ಅವರೇ ಸಮರ್ಥರು” ಎಂದು ಸಂಜಯ್‌ ರಾವತ್‌ ಹೇಳಿದ್ದರು.

ಸಂಜಯ್‌ ರಾವತ್‌ ಹೇಳಿಕೆಯನ್ನು ಗಮನದಲ್ಲಿಟ್ಟುಕೊಂಡು ಮಾಧ್ಯಮಗಳು ಯುಪಿಎ ಮೈತ್ರಿಕೂಟದ ಅಧ್ಯಕ್ಷರು ಬದಲಾಗುವ ಸಾಧ್ಯತೆ ಇದೆ. ಆ ಸ್ಥಾನಕ್ಕೆ ಶರದ್ ಪವಾರ್ ನೇಮಕವಾಗಬಹುದು ಎಂದು ಸುದ್ದಿ ಮಾಡಿದ್ದವು.

ಈ ಬೆನ್ನಲ್ಲೇ ಶಿವಸೇನೆ ಮತ್ತು ಕಾಂಗ್ರೆಸ್‌ ನಡುವೆ ಮುಸುಕಿನ ತಿಕ್ಕಾಟ ಆರಂಭವಾಗಿತ್ತು.

ಬೆಳವಣಿಕೆಗಳನ್ನು ಗಮಸಿರುವ ಪವಾರ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, “ನಾನು ಯುಪಿಎಯನ್ನು ಮುನ್ನಡೆಸುತ್ತೇನೆ ಎಂಬುದು ನಿಜವಲ್ಲ. ಮಾಧ್ಯಮಗಳು ಸುಳ್ಳು ಸುದ್ದಿಗಳನ್ನು ಹರಡುತ್ತಿವೆ,” ಎಂದು ಶರದ್‌ ಪವಾರ್‌ ಸ್ಪಷ್ಟವಾಗಿ ಹೇಳಿದ್ದಾರೆ.

‘ಸೋನಿಯಾ ಗಾಂಧಿಯವರು ಈಗ ಯುಪಿಎ ಅಧ್ಯಕ್ಷರಾಗಿದ್ದಾರೆ. ಅವರೇ ಮುಂದುವರೆಯಲಿದ್ದಾರೆ. ಯುಪಿಎ ನಾಯಕತ್ವದ ಕುರಿತು ಹರಡಿರುವ ಸುದ್ದಿ ಸುಳ್ಳು. ಕಾಂಗ್ರೆಸ್‌ ವಿರುದ್ಧದ ಪಿತೂರಿ ಭಾಗವಾಗಿ ಇಂತಹ ವದಂತಿ ಹರಿಬಿಡಲಾಗಿದೆ” ಎಂದು ಕಾಂಗ್ರೆಸ್‌ ನಾಯಕ ಸಂಜಯ್‌ ನಿರುಪಮ್‌ ಆರೋಪಿಸಿದ್ದಾರೆ.


ಇದನ್ನೂ ಓದಿ: ರೈತ ಹೋರಾಟದ ವಿರುದ್ಧ ಆಂದೋಲನ; ದೇಶಾದ್ಯಂತ 100 ಪತ್ರಿಕಾಗೋಷ್ಟಿ, 700 ರೈತ ಸಭೆಗೆ ಮುಂದಾದ ಬಿಜೆಪಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights