ನಾಯಿ ಕಾಟ ತಪ್ಪಿಸಲು ಚಲಿಸುವ ಕಾರಿಗೆ ಕಟ್ಟಿ ಎಳೆದೊಯ್ದ ವ್ಯಕ್ತಿ : ಓಡಿ ಓಡಿ ಸುಸ್ತಾಯ್ತು ಮುಗ್ದ ಜೀವ!

ಚಲಿಸುವ ಕಾರಿಗೆ ನಾಯಿಯನ್ನು ಕಟ್ಟಿ ಎಳೆದೊಯ್ಯುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಕೇರಳದ ಎರ್ನಾಕುಲಂನಲ್ಲಿ 62 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ.

ಪೊಲೀಸರ ಪ್ರಕಾರ, ಬಂಧಿತ ವ್ಯಕ್ತಿ ಯೂಸುಫ್ ಎಂಬಾತ ಕಾರಿನ ಮಾಲೀಕನಾಗಿದ್ದು ನಾಯಿಯನ್ನು ಕಾರಿಗೆ ಕಟ್ಟಿ ಹಾಕಿ ಆತನೇ ಕಾರನ್ನು ಓಡಿಸುತ್ತಿದ್ದನು. “ಯೂಸುಫ್ ತನ್ನ ಮನೆಯ ಸುತ್ತಲೂ ನಾಯಿ ಕಾಟವನ್ನು ತಪ್ಪಿಸಲು ಬಯಸುತ್ತಿದ್ದ. ಹೀಗಾಗಿ ನಾಯಿಯನ್ನು ಕಾರಿನ ಹಿಂದೆ ಕಟ್ಟಿಕೊಮಡು ಬೇರೆ ಸ್ಥಳಕ್ಕೆ ಕರೆದೊಯ್ಯುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು” ಎಂದು ಚೆಂಗಮಂಡ್ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವೀಡಿಯೊದ ಆರಂಭದಲ್ಲಿ ನಾಯಿಯನ್ನು ಕಾರಿಗೆ ಕಟ್ಟಿಹಾಕಲಾಗಿದೆ. ನಂತರ ನಾಯಿ ಕಾರಿನ ಹಿಂದೆ ಓಡುತ್ತಿದೆ ಎಂದು ತೋರಿಸುತ್ತದೆ. ನಂತರ ನಾಯಿಯನ್ನು ರಸ್ತೆಯ ಮೇಲೆ ಎಳೆಯಲಾಗುತ್ತದೆ.

ಈ ಘಟನೆ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ನಡೆದಿದೆ. ಆಸ್ಪತ್ರೆಯಿಂದ ಹಿಂತಿರುಗುವಾಗ ಅಖಿಲ್ ಎಂಬ ಬೈಕರ್ ವಿಡಿಯೋವನ್ನು ಚಿತ್ರೀಕರಿಸಿದ್ದಾನೆ. ದೂರದಿಂದ ನೋಡಿದಾಗ ನಾಯಿ ಕಾರನ್ನು ಬೆನ್ನಟ್ಟಿದಂತೆ ಕಾಣುತ್ತದೆ. ಆದರೆ ಹತ್ತಿರ ತಲುಪಿದಾಗ ಅದನ್ನು ಕಾರಿಗೆ ಕಟ್ಟಲಾಗಿದೆ.

ಕೇರಳ ಪೊಲೀಸರು ಈ ವಿಷಯವನ್ನು ಸ್ವತ: ಕೈಗೆತ್ತಿಕೊಂಡಿದ್ದಾರೆ. ಭಾರತೀಯ ದಂಡ ಸಂಹಿತೆಯಡಿ ಪ್ರಕರಣವನ್ನು ದಾಖಲಿಸಿದ್ದಾರೆ. ಇದರಲ್ಲಿ ಪ್ರಾಣಿಗಳನ್ನು ಕೊಲ್ಲುವುದು, ವಿಷಪ್ರಾಶನ ಮಾಡುವುದು, ದುರುಪಯೋಗಪಡಿಸಿಕೊಳ್ಳುವುದು ಅಥವಾ ಪ್ರಾಣಿಗಳನ್ನು ನಿಷ್ಪ್ರಯೋಜಕಗೊಳಿಸುವುದು ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವಿಕೆಯ ಕಾಯ್ದೆಯ ವಿವಿಧ ವಿಭಾಗಗಳು ಸೇರಿವೆ. ಆರೋಪಿಗಳನ್ನು ಬಂಧಿಸಲಾಗಿದ್ದು, ಜಾಮೀನಿನ ಮೇಲೆ ಹೊರಬಂದಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights