SSLC : ತಡವಾಗಿಯಾದರೂ ಪರೀಕ್ಷೆ ನಡೆಸಿ ರದ್ದು ಮಾಡಬೇಡಿ – ವಿದ್ಯಾರ್ಥಿಗಳು ಕೊರಿಕೆ…

ಯಾವುದೇ ಕಾರಣಕ್ಕೂ ಮುಂದೂಡಿಕೆಯಾಗಿರುವ ಪರೀಕ್ಷೆಯನ್ನು ರದ್ದು ಮಾಡದೇ ನಡೆಸಿ ಎಂದು SSLC ದ್ಯಾರ್ಥಿಗಳು ಶಿಕ್ಷಣ ಸಚಿವರಿಗೆ ಮನವಿ ಮಾಡಿಕೊಂಡಿದ್ದಾರೆ. ಎಸ್ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ಮೂಡಿಸಲು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ  ಎಸ್. ಸುರೇಶ್ ಕುಮಾರ್ ಅವರು ಕೈಗೊಂಡಿರುವ ಮಕ್ಕಳಿಗ ತಾವೇ ನೇರವಾಗಿ ಫೋನ್ ಮಾಡಿ ಮಾತನಾಡುವ ಕಾರ್‍ಯಕ್ರಮದಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದೆ.

ಮೈಸೂರು, ಹಾಸನ, ಚಾಮರಾಜನಗರ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಸುಮಾರು ಹಲವಾರು ವಿದ್ಯಾರ್ಥಿಗಳಿಗೆ ಕರೆ ಮಾಡಿ ಪರೀಕ್ಷೆಗೆ ಹೇಗೆ ಸಿದ್ಧತೆ ನಡೆಸಿದ್ದೀರಿ, ಪರೀಕ್ಷೆ ಮಾಡಬೇಕೆ ಎಂದು ಸಚಿವರು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಲ್ಲ ಮಕ್ಕಳು, ತಡವಾದ್ರೂ ಪರವಾಯಿಲ್ಲ ಪರೀಕ್ಷೆ ಮಾಡಲೇ ಬೇಕು ಎಂದರು.

ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಪರೀಕ್ಷೆಗಳು ಮುಂದಕ್ಕೆ ಹೋಗಿದ್ದು, ಅಭ್ಯಾಸಕ್ಕೆ ಹೆಚ್ಚಿನ ಸಮಯ ದೊರೆತಿರುವುದು ಅನುಕೂಲವೇ ಆಗಿದೆ. ನಾವು ಪರೀಕ್ಷೆಗೆ ತಯಾರಾಗಿದ್ದೇವೆ ಎಂದು ಮಕ್ಕಳು ಶಿಕ್ಷಣ ಸಚಿವರಿಗೆ ಉತ್ತರಿಸಿದರು. ಮಕ್ಕಳ ತಂದೆ ತಾಯಿಯರೊಂದಿಗೂ ಮಾತನಾಡಿದ ಸಚಿವ ಸುರೇಶ್ ಕುಮಾರ್‍, ಮಕ್ಕಳಿಗೆ ಧೈರ್ಯ ಹೇಳಿ, ಲಾಕ್ ಡೌನ್ ಮುಗಿದ ತಕ್ಷಣವೇ ಪರೀಕ್ಷೆ ಮಾಡುತ್ತೇವೆ ಎಂದರು.

ದೂರದರ್ಶನ ಚಾನಲ್ ನಲ್ಲಿ ಎಸ್ ಎಸ್ ಎಲ್ ಸಿ ಪಠ್ಯದ ಪುನರಾವರ್ತನಾ ತರಗತಿಗಳು ನಡೆಯಲಿದ್ದು, ಅವುಗಳನ್ನು ಮಕ್ಕಳು ನೋಡಬೇಕೆಂದು ಸಚಿವರು ತಿಳಿಸಿದರು. ಚೆನ್ನಾಗಿ ಓದಿ ತಂದೆ ತಾಯಿಗಳಿಗೆ ಒಳ್ಳೆಯ ಹೆಸರು ತರಬೇಕೆಂದರು.

ಇದಲ್ಲದೇ ಬಾಗಲಕೋಟೆಯ ಇಳಕಲ್ ಕಂದಗಲ್ನಲಿನ ಇಬ್ಬರು, ಹೊನ್ನಾಳಿ ತಾಲೂಕು ಬೆನಕನಹಳ್ಳಿಯ ಮಕ್ಕಳೊಂದಿಗೂ ಸಚಿವರು ಮಾತನಾಡಿ ಧೈರ್ಯ ತುಂಬಿದರು. ಸಾರ್ ಕೊರೋನಾ ಸಾಧ್ಯವಾದಷ್ಟು ಬೇಗನೇ ಹೊರಟು ಹೋಗಲಿ ಎಂದು ನಾವೆಲ್ಲ ದಿನಂಪ್ರತಿ ಬೇಡಿಕೊಳ್ಳೋಣ ಎಂದು ವಿದ್ಯಾರ್ಥಿನಿಯೊಬ್ಬಳು ಸಚಿವರಿಗೆ ತಿಳಿಸಿದ್ದು ವಿಶೇಷವಾಗಿತ್ತು.

ಕಳದೆ ತಿಂಗಳ 27ರಿಂದ ಆರಮಭವಾಗಬೇಕಿದ್ದ SSLC ಪರೀಕ್ಷೆಗಳನ್ನು ದೇಶಾದ್ಯಂತ ಲಾಕ್‌ಡೌನ್ ಹೇರಿದ ಹಿನ್ನೆಲೆಯಲ್ಲಿ ಮುಂದೂಡಿಕೆ ಮಾಡಲಾಗಿತ್ತು. ಸದ್ಯ ಮೇ 4ರವರೆಗೆ ಲಾಕ್‌ಡೌನ್ ಇದ್ದು ಆ ಬಳಿಕವಷ್ಟೇ ಪರೀಕ್ಷೆ ನಡೆಸುವ ಬಗ್ಗೆ ಸರಕಾರ ತೀರ್ಮಾನ ಕೈಗೊಳ್ಳಬಹುದಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights