ಫ್ಯಾಕ್ಟ್‌ಚೆಕ್: ತೀಸ್ತಾ ಸೆಟಲ್ವಾಡ್ ಮುತ್ತಾತ ‘ಜನರಲ್ ಡಯರ್‌’ಗೆ ಕ್ಲೀನ್ ಚಿಟ್‌ ನೀಡಿದ್ದರು ಎಂಬುದು ಸುಳ್ಳು

2002ರ ಗುಜರಾತ್ ಗಲಭೆ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಕ್ಲೀನ್ ಚಿಟ್ ನೀಡಿದ್ದನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದ ಮರುದಿನವೇ ಗುಜರಾತ್ ಪೊಲೀಸರು, ಮಾಜಿ ಪೊಲೀಸ್ ಮಹಾ ನಿರ್ದೇಶಕ ಆರ್‌ಬಿ ಶ್ರೀಕುಮಾರ್ ಮತ್ತು ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಅವರನ್ನು ಮುಂಬಯಿಯಲ್ಲಿ ಬಂಧಿಸಲಾಗಿದೆ. ಅಮಾಯಕ ವ್ಯಕ್ತಿಗಳನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿದ ಸಂಚಿನಲ್ಲಿ ಈ ಬಂಧನ ಮಾಡಲಾಗಿದೆ ಎಂದು ಎಸ್‌ಐಟಿ ಹೇಳಿದೆ. ಈ ಸಂದರ್ಭದಲ್ಲಿ ತೀಸ್ತಾರವರ ಮುತ್ತಾತ ಚಿಮನ್‌ಲಾಲ್ ಹರಿಲಾಲ್ ಸೆಟಲ್ವಾಡ್ ಅವರು ಬ್ರಿಟಿಷ್ ಅಧಿಕಾರಿ ಜನರಲ್ ಡಯರ್‌ರನ್ನು ದೋಷಮುಕ್ತಗೊಳಿಸಿದ್ದರು ಎಂದು ಪ್ರತಿಪಾದಿಸಿ ಸಾಮಾಜಿಕ ಜಾಲತಾಣ ಬಳಕೆದಾರ ಕಾಂಚನ್‌ಗುಪ್ತಾ @KanchanGupta ಎಂಬುವರು ಟ್ವೀಟ್ ಮಾಡಿದ್ದಾರೆ. ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

https://twitter.com/KanchanGupta/status/1540935194835689472?ref_src=twsrc%5Etfw%7Ctwcamp%5Etweetembed%7Ctwterm%5E1540935194835689472%7Ctwgr%5E%7Ctwcon%5Es1_&ref_url=https%3A%2F%2Fwww.altnews.in%2Fdid-teesta-setalvads-great-grandfather-give-clean-chit-to-gen-dyer-for-jallianwala-massacre%2F

ಫ್ಯಾಕ್ಟ್‌ಚೆಕ್:

1919ರ ಏಪ್ರಿಲ್ 13ರಂದು ಜಲಿಯನ್‌ವಾಲಾಭಾಗ್‌ ಹತ್ಯಾಕಾಂಡಕ್ಕೆ ಡಯರ್ ಆದೇಶ ನೀಡಿದ್ದರು. ಈ ಘಟನೆಯ ತನಿಖೆ ನಡೆಸಿದ್ದ ಹಂಟರ್ ಆಯೋಗದ ಸದಸ್ಯರಾಗಿದ್ದ ಸೆಟಲ್‌ವಾಡ್ ಅವರು ಸಹಿ ಮಾಡಿದ್ದ ವರದಿಯಲ್ಲಿ ಡಯರ್‌ ತಪ್ಪಿತಸ್ಥ ಅಲ್ಲ ಎಂದು ಬರೆಯಲಾಗಿದೆ ಎಂದು ಟ್ವೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ತೀಸ್ತಾ ಅವರ ಮುತ್ತಾತ ಹಂಟರ್ ಆಯೋಗದ ಸದಸ್ಯರಾಗಿದ್ದುದು ಹಾಗೂ ವರದಿಗೆ ಸಹಿ ಮಾಡಿದ್ದುದು ನಿಜ.

ಆದರೆ ವರದಿಯು ಡಯರ್‌ರನ್ನು ದೋಷಮುಕ್ತಗೊಳಿಸಿದೆ ಎಂಬುದು ಸುಳ್ಳು ಎಂದು ‘ದಿ ಕ್ವಿಂಟ್ ವರದಿ’ ಮಾಡಿದೆ. ಮೆಜಾರಿಟಿ ಹಾಗೂ ಮೈನಾರಿಟಿ ಎಂಬ ಎರಡು ವರದಿಗಳು ಸಲ್ಲಿಕೆಯಾಗಿದ್ದವು. ಡಯರ್ ತಮ್ಮ ಕರ್ತವ್ಯ ನಿರ್ವಹಿಸಿದ್ದರೂ, ಅವರು ಮಾಡಿದ್ದು ತಪ್ಪು ಎಂದು ಬ್ರಿಟಿಷ್ ಸದಸ್ಯರು ಸಹಿ ಮಾಡಿದ್ದ ಮೆಜಾರಿಟಿ ವರದಿ ಉಲ್ಲೇಖಿಸಿದೆ. ಡಯರ್ ಮಾಡಿದ್ದು ತಪ್ಪು ಎಂದು ನೇರವಾಗಿ ಉಲ್ಲೇಖಿಸಿದೆ. ಎರಡೂ ವರದಿಯಲ್ಲಿ ಡಯರ್‌ ತಪ್ಪಿತಸ್ಥ ಎಂದೇ ಹೇಳಲಾಗಿದೆ.

ಮೇಲಾಗಿ ವಿ.ಎನ್.ರವರ ‘ಜಲಿಯನ್ ವಾಲಾ ಬಾಗ್: ಎ ಗ್ರೌಂಡ್ ಬ್ರೇಕಿಂಗ್ ಹಿಸ್ಟರಿ ಆಫ್ ದಿ 1919 ಮಾಸ್ಕೇರ್’ ಪುಸ್ತಕದಲ್ಲಿಯೂ ಸಹ ದತ್ತಾ, ಅಲ್ಪಸಂಖ್ಯಾತರ ವರದಿಯು ಡೈಯರ್ ಅವರ ಕ್ರಮವನ್ನು  ಬಲವಾಗಿ ಟೀಕಿಸಿದೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಗಮನಿಸಬೇಕಾದ ಅಂಶವೆಂದರೆ ವಿ.ಎನ್ ರವರು ಹತ್ಯಾಕಾಂಡದಲ್ಲಿ ಬದುಕುಳಿದವರ ಪ್ರಾಥಮಿಕ ಮೂಲಗಳು ಮತ್ತು ಮೌಖಿಕ ಸಾಕ್ಷ್ಯಗಳನ್ನು ಅನ್ವೇಷಿಸುವ ಮೂಲಕ ಪುಸ್ತಕ ರಚಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಹಂಟರ್ ಆಯೋಗದ ಭಾರತೀಯ ಸಮಿತಿಯು ಡೈಯರ್‌ಗೆ ‘ಕ್ಲೀನ್ ಚಿಟ್’ ನೀಡಲು ಒಪ್ಪಿದೆ ಎಂದು ಹೇಳುವುದು ನ್ಯಾಯಸಮ್ಮತವಲ್ಲ. ಭಾರತೀಯ ಸಮಿತಿಯು ಡೈಯರ್‌ಗೆ ಕಠಿಣ ಪ್ರಶ್ನೆಗಳನ್ನು ಹಾಕಿ ತಪ್ಪಿತಸ್ಥ ಎಂದಿತ್ತು ಜೊತೆಗೆ ಪಂಜಾಬ್‌ನ ಲೆಫ್ಟಿನೆಂಟ್ ಗವರ್ನರ್ ಮೈಕೆಲ್ ಒ’ಡಯರ್‌ನ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಿತ್ತು ಎಂದು ಹೇಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಪ್ರಧಾನಿ ಮೋದಿ ವಿಶ್ವನಾಯಕರ ಮಧ್ಯದಲ್ಲಿರುವಂತೆ ಎಡಿಟ್ ಫೋಟೊ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights