ರಮೇಶ್ ಜಾರಕಿಹೊಳಿ ವಿರುದ್ಧ ಸೆಕ್ಷನ್ 376 ಅಡಿ ಪ್ರಕರಣ ದಾಖಲಿಸಲು ಸಿದ್ದರಾಮಯ್ಯ ಒತ್ತಾಯ!

ರಮೇಶ್ ಜಾರಕಿಹೊಳಿ ಸಿಡಿ ವಿರುದ್ಧ ಸಿಡಿದೆದ್ದ ಕಾಂಗ್ರೆಸ್ ಸದನದಲ್ಲಿ ಸೋಮವಾರಕ್ಕಿಂತ ಮಂಗಳವಾರ ದುಪ್ಪಟ್ಟಾಗಿ ಮುಗಿಬಿದ್ದಿತ್ತು. ಸದನವನ್ನು ಮೂರು ಬಾರಿ ಮುಂದೂಡಿದರೂ ವಿಪಕ್ಷ ನಾಯಕ ಸಿದ್ದರಾಮಯ್ಯ ಸಿಡಿ ಪ್ರಕರಣದ ಮಾತಿನಿಂದ ಮಾತ್ರ ಹಿಂದೆ ಸರಿದಿಲ್ಲ. ಸದನದಲ್ಲಿ ತಲಾ ಒಂದೊಂದು ಸಿಡಿ ಹಿಡಿದು ಪ್ರತಿಭಟನೆ ಮಾಡಿದರು.

ಮಹಿಳೆಯರನ್ನು ಎಲ್ಲಿ ಪೂಜಿಸಲಾಗುತ್ತದೆಯೋ ಅಲ್ಲಿ ದೇವರು ಇರ್ತಾನೆ. ಮಹಿಳೆಗೆ ಗೌರವ ನೀಡದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ವಿರುದ್ಧ ದೂರು ದಾಖಲಾಗಬೇಕು. ಯುವತಿ ವೀಡಿಯೋದಲ್ಲಿ ” ನನ್ನನ್ನು ಬಳಸಿಕೊಂಡಿದ್ದಾಳೆ” ಎಂದು ಹೇಳಿದ್ದಾಳೆ. ‘ಬಳಸಿಕೊಂಡಿದ್ದಾರೆ ‘ ಅಂದರೆ ರಮೇಶ್ ವಿರುದ್ಧ ಸೆಕ್ಷನ್ 376 ಅಡಿ ಪ್ರಕರಣ ದಾಖಲಾಗಬೇಕು. ಇದು ರೇಪ್ ಕೇಸ್ ಆಗುತ್ತದೆ ಎಂದು ಸಿದ್ದರಾಮಯ್ಯ ವಾದ ಮಾಡುತ್ತಿದ್ದಾರೆ.

ಹೀಗಾಗಿ ನಿನ್ನೆ ಸದಸನದಲ್ಲಿ ಕೈ ಸದಸ್ಯರು ಸಿಡಿ ಹಿಡಿದು ಪ್ರತಿಭಟನೆ ಮಾಡಿದ್ದಾರೆ. ಕೈಯಲ್ಲಿ ಸಿಡಿ ಹಿಡಿದುಕೊಂಡು ಘೋಷಣೆ ಕೂಗಿದ್ದಾರೆ. ಯುವತಿಯನ್ನು ಪತ್ತೆ ಹಚ್ಚಬೇಕು. ಆಕೆಗೆ ನ್ಯಾಯ ಕೊಡಿಸಬೇಕು. ವೇಗವಾದ ತನಿಖೆಗೆ ಆಗ್ರಹಿಸಬೇಕು. ಘಟನೆ ನಡೆದು ಒಂದು ತಿಂಗಳಾಗುತ್ತಾ ಬಂದಿದೆ. ಆದರೆ ಇಲ್ಲಿಯವರೆಗೆ ಯುವತಿ ಎಲ್ಲಿದ್ದಾಳೆ ಎನ್ನುವ ಮಾಹಿತಿ ಮಾತ್ರ ಲಭ್ಯವಾಗಿಲ್ಲ. ಹೀಗಾಗಿ ಎಸ್ಐಟಿ ತನಿಖೆ ಅಸಹಯಕವಾಗಿದೆ ಎಂದು ಸಿದ್ದರಾಮಯ್ಯ ಗುಡುಗಿದ್ದಾರೆ.

ಆದರೆ ಆಡಳಿತ ಪಕ್ಷದ ಸದಸ್ಯರು ಮಾತ್ರ ಸಿದ್ದರಾಮಯ್ಯ ವಾದವನ್ನು ಅಲ್ಲಗಳಿದಿದ್ದಾರೆ. ಇದು ಹೇಗೆ ಒಪ್ಪಿಗೆ ಇಲ್ಲದ ಸಂಬಂಧ ಆಗುತ್ತದೆ? ಇದು ನಂಬಿಕೆ ಮೇಲೆ ಇರುವ ಸಂಬಂಧ. ಹೀಗಾಗಿ ಇದು ಅತ್ಯಾಚಾರ ಎಂದು ಹೇಳಲಾಗುವುದಿಲ್ಲ. ಇಲ್ಲಿ ದುರಪಯೋಗ ಆಗಿರಬಹುದು, ಆಗಿರದೇ ಇರಬಹುದು ಅದು ತನಿಖೆ ಬಳಿಕ ತಿಳಿಯುತ್ತದೆ. ಆದರೆ ಈ ವಿಚಾರವನ್ನು ಅತ್ಯಾಚಾರ ಎಂದು ಹೇಳಲಾಗುವುದಿಲ್ಲ. ಸಿಡಿ ವೀಡಿಯೋದಲ್ಲಿ ಅವರಿಬ್ಬರು ಸಂವಾದ ನೋಡಿದರೆ ಅಲ್ಲೆಲ್ಲೂ ಅತ್ಯಾಚಾರ ಅನ್ನೋ ಪದ ಬಳಕೆ ಮಾಡಬೇಕು ಅನ್ನಿಸುವುದಿಲ್ಲ. ಅವರಿಬ್ಬರು ಪರಸ್ಪರ ಒಪ್ಪಿಗೆಯಿಂದಿರುವಂತೆ ವೀಡಿಯೋದಲ್ಲಿ ಕಾಣಿಸುತ್ತದೆ. ಹೀಗಾಗಿ ಇದು ಸೂಕ್ತ ತನಿಖೆಯಾಗಬೇಕು ಎಂದು ಆಡಳಿತ ಪಕ್ಷದ ವಾದವಾಗಿದೆ.

ಒಟ್ಟಿನಲ್ಲಿ ವಾದ ಪ್ರತಿವಾದದ ನಡುವ ಈ ಪ್ರಕರಣ ಎಸ್ಐಟಿ ತನಿಖೆಯಲ್ಲೇ ಅಂತ್ಯಗೊಳ್ಳುತ್ತಾ? ಅಥವಾ ವಿಶೇಷ ತಂಡ ರಚನೆಯಾಗುತ್ತಾ? ಅಥವಾ ರಮೇಶ್ ವಿರುದ್ಧ ದೂರು ದಾಖಾಲಾಗುತ್ತಾ? ಕಾದು ನೋಡಬೇಕಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights