ದೇಶಾದ್ಯಂತ 24 ಗಂಟೆಗಳಲ್ಲಿ 30,000 ಕೊರೊನಾ ಕೇಸ್ : 385 ಸೋಂಕಿತರು ಬಲಿ!
ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 30,000 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, 385 ಸೋಂಕಿತರು ಮಹಾಮಾರಿಗೆ ಬಲಿಯಾಗಿದ್ದಾರೆ.
24 ಗಂಟೆಗಳಲ್ಲಿ 30,000 ಹೊಸ ಕೋವಿಡ್ -19 ಸೋಂಕುಗಳು ದಾಖಲಾಗಿದ್ದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಈವರೆಗೆ ಒಟ್ಟು 97,03,914 ಲಕ್ಷ ಕೊರೊನಾ ಪ್ರಕರಣಗಳು ದಾಟಿದೆ. ಸಾವಿನ ಸಂಖ್ಯೆ 1,40,958 ಕ್ಕೆ ಏರಿಕೆಯಾಗಿದ್ದು ಈವರೆಗೆ 91,78,269 ಜನ ಗುಣಮುಖರಾಗಿದ್ದಾರೆ.
ಭಾರತ 24 ಗಂಟೆಗಳ ಅವಧಿಯಲ್ಲಿ ದೈನಂದಿನ ಹೊಸ ಪ್ರಕರಣಗಳಿಗಿಂತ ಹೆಚ್ಚು ದೈನಂದಿನ ಚೇತರಿಕೆಗಳನ್ನು ವರದಿ ಮಾಡಿದೆ.
ಒಂದು ದಿನದಲ್ಲಿ ದೇಶದಲ್ಲಿ 30,000 ಕ್ಕಿಂತ ಕಡಿಮೆ ಹೊಸ ಸಕಾರಾತ್ಮಕ ಪ್ರಕರಣಗಳು ಕಂಡುಬಂದಿದ್ದರೆ, ಇದೇ ಅವಧಿಯಲ್ಲಿ 39,045 ಗುಣಮುಖ ಪ್ರಕರಣಗಳು ದಾಖಲಾಗಿವೆ. ಸೋಮವಾರದ ಹೊತ್ತಿಗೆ ಒಟ್ಟು ಸಕ್ರಿಯ ಪ್ರಕರಣಗಳು ಈಗ 3,83,866 ರಷ್ಟಿದೆ. ಸಾವಿನ ಸಂಖ್ಯೆ 1,40,958 ಕ್ಕೆ ಏರಿದ್ದು ದೇಶದಲ್ಲಿ ಭಾನುವಾರ ರಾತ್ರಿಯಿಂದ 385 ಹೊಸ ಸಾವುಗಳು ದಾಖಲಾಗಿದೆ.