ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳ : ಇಂದಿನ ಬೆಲೆ ಮಾಹಿತಿ ಇಲ್ಲಿದೆ…
ಕೊರೊನಾ ಬಂದು ದೇಶದ ಜನರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಮೂರು ನಾಲ್ಕು ವರ್ಷವೇ ಬೇಕಾಗಬಹುದು. ಹೀಗಿರುವಾಗ ಬೆಲೆ ಏರಿಕೆ ಬಿಸಿ ಜನರ ಮೇಲೆ ಗಾಯದ ಮೇಲೆ ಬರೆ ಎಳೆದಂತಾಗುತ್ತಿದೆ.
ಹೌದು… ಈ ವರ್ಷ ಎರಡನೇ ಬಾರಿಗೆ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸಿವೆ. ಇದರೊಂದಿಗೆ ಪೆಟ್ರೋಲ್ ಬೆಲೆಯು ಸಾರ್ವಕಾಲಿಕ ಗರಿಷ್ಠ ಮಟ್ಟದ ಸನಿಹಕ್ಕೆ ತಲುಪಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 26 ಪೈಸೆಯಷ್ಟು ಏರಿಕೆಯಾಗಿದ್ದರೇ, ಡೀಸೆಲ್ ಬೆಲೆ 25 ಪೈಸೆಯಷ್ಟು ಹೆಚ್ಚಳ ಆಗಿದೆ.ಇದರೊಂದಿಗೆ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ 83.97ಕ್ಕೆ, ಡೀಸೆಲ್ ಬೆಲೆ 74.12ಕ್ಕೆ ಏರಿಕೆ ಆಗಿದೆ.
ಇನ್ನು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ 28 ಪೈಸೆ ಹೆಚ್ಚಾಗಿದೆ.
ಲೀಟರ್ ಪೆಟ್ರೋಲ್ 86.79 ಏರಿಕೆಯಾಗಿದ್ದರೇ ಡೀಸೆಲ್ 78.59ಕ್ಕೆ ತಲುಪಿದೆ. 2018ರ ಅಕ್ಟೋಬರ್ 4ರಂದು ಪೆಟ್ರೋಲ್ ಬೆಲೆ 84 ಆಗಿತ್ತು. ಇದು ಸಾರ್ವಕಾಲಿಕ ದಾಖಲೆಯಾಗಿತ್ತು.
2020ರ ಮೇ ನಂತರ ಪ್ರತಿ ಲೀಟರ್ ಪೆಟ್ರೋಲ್ ಬೆಲೆಯಲ್ಲಿ 14.28ರಷ್ಟು, ಲೀಟರ್ ಡೀಸೆಲ್ ಬೆಲೆಯಲ್ಲಿ 11.83ರಷ್ಟು ಹೆಚ್ಚಳ ಆಗಿದೆ.