ರೈತ ಪ್ರತಿಭಟನೆಯನ್ನು ಮೋದಿ ಸರ್ಕಾರ ಮಣಿಸಲಾಗದು: 05 ಕಾರಣಗಳು

ಹೊಸ ಕೃಷಿ ಕಾನೂನುಗಳ ವಿರುದ್ಧ ಹೋರಾಟನಿರತ ರೈತರು ಮತ್ತು ಮೋದಿ ಸರ್ಕಾರ ನಡುವೆ ಐದು ಸುತ್ತಿನ ಮಾತುಕತೆ ನಡೆದಿದೆ. ಆದರೆ, ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ದೆಹಲಿಯ ಗಡಿಯಲ್ಲಿ ಹೋರಾಟ ನಡೆಸುತ್ತಿರುವ ರೈತರ ಆಕ್ರೋಶ ಇಮ್ಮಡಿಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು (ಡಿಸೆಂಬರ್ 08) ದೇಶಾದ್ಯಂತ ಭಾರತ್‌ ಬಂದ್‌ಗೆ ಮಾಡಲಾಗಿದೆ. ಕೇಂದ್ರದ ರೈತ ವಿರೋಧಿ ನೀತಿಗಳ ವಿರುದ್ಧದ ರೈತರ ದೃಢನಿಶ್ಚಯ, ರಾಜಿ ಇಲ್ಲದ ಹೋರಾಟಕ್ಕೆ ದೇಶಾದ್ಯಂತ ಭಾರೀ ಬೆಂಬಲ ದೊರೆಯುತ್ತಿದೆ.

ಸರ್ಕಾರದೊಂದಿಗೆ ರಾಜಿಗೆ ಒಳಗಾಗದೆ, ಹೊಸ ಕೃಷಿ ನೀತಿಗಳು ರದ್ದಾಗಲೇಬೇಕು, ಅಲ್ಲಿಯವರೆಗೂ ಪ್ರತಿಭಟನೆ ನಿಲ್ಲುವುದಿಲ್ಲ ಎಂದು ರೈತರು ಪಟ್ಟು ಹಿಡಿದ್ದಾರೆ. ಹೋರಾಟ ನಿರತ ರೈತರನ್ನು ನಿಭಾಯಿಸಲು ಮೋದಿ ಸರ್ಕಾರ ಕಷ್ಟಪಡುತ್ತಿದೆ. ಇದಕ್ಕೆ 05 ಪ್ರಮುಖ ಕಾರಣಗಳು ಹೀಗಿವೆ.

ಧೀರ್ಘಾವಧಿಗೆ ಅನುಕೂಲವಾಗುವ ಮಾರ್ಪಡಿಸಿದ ಟ್ರಾಲಿಗಳು

ಪ್ರತಿಭಟನೆಯಲ್ಲಿ ನಿರತರಾಗಿರುವ ರೈತರು ದೆಹಲಿ ಗಡಿಯಲ್ಲಿ ಹಲವಾರು ತಿಂಗಳುಗಳ ಕಾಲ ಉಳಿಯಲು ಸಿದ್ದರಾಗಿದ್ದಾರೆ. ರಾತ್ರಿ ಮಲಗಲು ಅವರಿಗೆ ಟ್ರಾಕ್ಟರ್‌ ಟ್ರಾಲಿಗಳು ನೆರವಾಗುತ್ತಿವೆ. ಟ್ರಾಲಿಗಳ ಪ್ರಯಾಣ ಪಂಜಾಬ್‌ ಜನರಿಗೆ ಹೊಸತೇನು ಅಲ್ಲ, ಟ್ರಾಲಿಗಳು ಅವರ ಜೀವನದ ಭಾಗವೇ ಆಗಿವೆ. ಅವರು ಆ ಟ್ರಾಲಿಗಳ ಜೊತೆಗೆ ದೆಹಲಿ ಗಡಿಯಲ್ಲಿ ಪ್ರತಿಭಟನಾ ಬೀಡು ಬಿಡಲು ಸಿದ್ದರಾಗಿದ್ದಾರೆ.

ಟ್ರಾಲಿಗಳ ಒಳಭಾಗಕ್ಕೆ ಮರದ ಹಲಗೆಗಳಿಂದ ಗೋಡೆಯಂತೆ ಕಟ್ಟಲಾಗಿದೆ. ಕೌದಿಗಳನ್ನು ಬಳಸಿ ಕುಳಿತುಕೊಳ್ಳುವ ಮತ್ತು ಮಲಗುವ ಪ್ರದೇಶವನ್ನು ಮೆತ್ತೆ ಮಾಡಲಾಗಿದೆ. ಹಾಗಾಗಿ ಕೊರೊಯುವ ಚಳಿಯಿಂದ ರೈತರು ಕೊಂಚ ತಪ್ಪಿಸಿಕೊಳ್ಳಬಹುದು ಎಂದು ಚುನ್ನಿ ಕಲಾನ್‌ನ ರೈತ ಗುರುದರ್ಶನ್ ಸಿಂಗ್ ಹೇಳಿದ್ದಾರೆ.

Farmer on way to Delhi killed as truck hits his tractor-trolley - Rediff.com India News

ರಾಜಕೀಯ ಪಕ್ಷಗಳಿಗೆ ಆಸ್ಪದವಿಲ್ಲ; ಕಟ್ಟುನಿಟ್ಟಿನ ನಿಯಂತ್ರಣ

ದೆಹಲಿಯ ಸಿಂಗು ಗಡಿಯಲ್ಲಿ ರೈತರು ಕಿಲೋಮೀಟರ್‌ಗಳ ಉದ್ದಕ್ಕೆ ಸಾಲುಗಟ್ಟಿದ್ದಾರೆ. ತಾತ್ಕಾಲಿಕವಾಗಿ ಆರಂಭಸಿದ ಪ್ರತಿಭಟನೆ ಆರಂಭಿಸಿದ ಸ್ಥಳವೇ ಹೋರಾಟದ ಕೇಂದ್ರವಾಗಿದೆ. ಎಲ್ಲಾ ರೈತರಿಗೂ ಕೇಳಿಸುವಷ್ಟು ಧ್ವನಿವರ್ಧಕಗಳನ್ನು ಅಳವಡಿಸಲಾಗಿದೆ.

ಸರ್ಕಾರದ ಜೊತೆಗೆ ನಡೆದ ಸಭೆಯ ವರದಿ ಮತ್ತು ಭವಿಷ್ಯದ ಕ್ರಮಗಳ ಬಗ್ಗೆ ಪ್ರಕಟಣೆಗಳನ್ನು ರೈತರಿಗೆ ಧ್ವನಿವರ್ಧಕಗಳ ಮೂಲಕ ತಿಳಿಸಲಾಗುತ್ತದೆ. ಪ್ರತಿಭಟನೆಯ ವೇದಿಕೆ ಮೇಲೆ ರೈತ ಮುಖಂಡರಲ್ಲದೆ, ಕಾರ್ಯಕರ್ತರು, ಗಾಯಕರು, ನಟರು ಮತ್ತು ಕ್ರೀಡಾಪಟುಗಳು ಕಳೆದ ಕೆಲವು ದಿನಗಳಿಂದ ಮಾತನಾಡಿದ್ದಾರೆ. ವೇದಿಕೆಯನ್ನು ಯಾರು ಪ್ರವೇಶಿಸುತ್ತಾರೆ, ಯಾರು ಮಾತನಾಡುತ್ತಾರೆ ಎಂಬುದನ್ನು ನಿಯಂತ್ರಿಸಲು 30 ಸ್ವಯಂಸೇವಕರನ್ನು ನಿಯೋಜಿಸಲಾಗಿದೆ.

ಇದನ್ನೂ ಓದಿ: ರೈತ ಹೋರಾಟಕ್ಕೆ ಬಾಲಿವುಡ್ ಗಾಯಕ ದಿಲ್ಜಿತ್ ದೋಸಂಜ್‌ ಬೆಂಬಲ; ಹೊದಿಕೆಗಾಗಿ 1 ಕೋಟಿ ರೂ ದೇಣಿಗೆ!

“ಯಾವುದೇ ರಾಜಕಾರಣಿಗಳಿಗೆ ಮಾತನಾಡಲು ಅವಕಾಶವಿಲ್ಲ. ಆಂದೋಲನವನ್ನು ಅಪಾಯಕ್ಕೆ ದೂಡುವ ಅಥವಾ ಅಪಾಯವನ್ನು ಉಂಟುಮಾಡುವವರನ್ನು ಸ್ವಾಗತಿಸುವುದಿಲ್ಲ” ಎಂದು ನಿರ್ಧರಿಸಲಾಗಿದೆ.

ಪ್ರತಿಭಟನೆಗೆ ಹಾನಿ ಮಾಡುವಂತಹ ಅನುಮಾನಾಸ್ಪದ ವ್ಯಕ್ತಿಗಳು ಮತ್ತು ತೊಂದರೆ ಉಂಟುಮಾಡುವವರನ್ನು ಗುರುತಿಸಲು ಹಾಗೂ ಪ್ರತಿಭಟನಾ ಸ್ಥಳದ ಪರಿಧಿಯನ್ನು ಕಾಪಾಡಲು ಕನಿಷ್ಠ 400 ಸ್ವಯಂಸೇವಕರನ್ನು ಸಹ ಇರಿಸಲಾಗಿದೆ.

ಒಮ್ಮತ ಮತ್ತು ಪ್ರಜಾತಂತ್ರಿಕ; ಏಕವ್ಯಕ್ತಿ ಕೇಂದ್ರಿತವಾಗಿಲ್ಲ

ಪ್ರತಿಭಟನಾ ನಿರತ ಪಂಜಾಬ್‌ ಮತ್ತು ವಿವಿಧ ರಾಜ್ಯಗಳಲ್ಲಿ ಹಲವಾರು ರೈತ ಸಂಘಟನೆಗಳಿವೆ. ಆದರೆ, ಅವರೆಲ್ಲೂ ಈ ಹೋರಾಟದಲ್ಲಿ ಏಕತೆಯಿಂದ ಒಟ್ಟಾಗಿದ್ದಾರೆ. ಜೂನ್‌ನಲ್ಲಿ 10 ಸಂಘಟನೆಗಳಿಂದ ಆರಂಭವಾದ ಆಂದೋಲನಕ್ಕೆ ಸೆಪ್ಟೆಂಬರ್ ವೇಳೆಗೆ 31 ಸಂಘಟನೆಗಳು ಜೊತೆದೂಡಿದವು.

ಅಂದಿನಿಂದ, ಈ ಸಂಘಟನೆಯು ಸಭೆಗಳನ್ನು ನಡೆಸುವ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವ ಪ್ರಜಾಪ್ರಭುತ್ವದ ಮಾರ್ಗವನ್ನು ಅನುಸರಿಸುತ್ತಿವೆ. ಪ್ರತಿ ಸಭೆಯಲ್ಲೂ ಈ 31 ಸಂಘಟನೆಗಳ ಮುಖ್ಯಸ್ಥರೂ ಭಾಗಿಯಾಗುತ್ತಾರೆ. ಎಲ್ಲರೂ ಜೊತೆಗೂಢಿ ನಿರ್ಧಾರವನ್ನು ಕೈಗೊಳ್ಳುತ್ತಾರೆ.

ಹಾಗಾಗಿ ಭಿನ್ನಾಭಿಪ್ರಾಯ ಸೃಷ್ಟಿಸಲು ಮತ್ತು ಪ್ರತಿಭಟನೆಯನ್ನು ಹೊಡೆಯಲು ಯತ್ನಿಸುವ ಶಕ್ತಿಗಳಿಗೆ ಅವಕಾಶವಿಲ್ಲದಂತಾಗಿದೆ.

ರಾಜಿಯಿಲ್ಲದ ಸಂಘರ್ಷ- ನೈತಿಕತೆಯ ಪ್ರದರ್ಶನ

ತಮ್ಮ ಹೋರಾಟ ಸತ್ಯಾಗ್ರಹ ಎಂದು ಹೇಳಿರುವ ರೈತ ಮುಖಂಡರು, ಸರ್ಕಾರದ ಸಚಿವರೊಂದಿಗೆ ನಡೆದ ಸಭೆಯಲ್ಲಿ ಸರ್ಕಾರದಿಂದ ಯಾವುದೇ ಆತಿಥ್ಯವನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ. ಬದಲಿಗೆ, ಅವರು ಪ್ರತಿಭಟನಾ ಸ್ಥಳದಿಂದ ಬುತ್ತಿ ತೆಗೆದುಕೊಂಡು ಹೋಗಿದ್ದರು ಮತ್ತು ನೆಲದ ಮೇಲೆ ಕುಳಿದು ಊಟ ಮಾಡಿದರು.

ಇದನ್ನೂ ಓದಿ: ನಮ್ಮ ಊಟ ನಾವೇ ತಂದಿದ್ದೇವೆ: ಸರ್ಕಾರ ವ್ಯವಸ್ಥೆ ಮಾಡಿದ್ದ ಊಟ ನಿರಾಕರಿಸಿದ ರೈತರು!

ಇದು ರೈತರ ಸಂಕಲ್ಪ ಅಚಲವಾಗಿದೆ ಎಂಬುದನ್ನು ಸರ್ಕಾರಕ್ಕೆ ತೋರಿಸಿದೆ. ನಾವು ಹೋರಾಟದಲ್ಲಿ ಗಂಭೀರವಾಗಿಲ್ಲ ಅಥವಾ ಸರ್ಕಾರದ ಚಹಾ ಮತ್ತು ಕಾಫಿ ಕುಡಿಯಲು ನಾವು ಸಭೆಗೆ ಹೋಗಿಲ್ಲ ಎಂಬ ಮಾಹಿತಿಯನ್ನು ಸರ್ಕಾರಕ್ಕೆ ರವಾನಿಸಿದ್ದೇವೆ. ಈ ಹೋರಾಟವು ನಮ್ಮ ಜೀವನದ ವಿಷಯ, ನಮ್ಮ ಅಳಿವು-ಉಳಿವಿನ ವಿಷಯ. ಅದನ್ನು ನಮ್ಮ ನಡವಳಿಕೆಗಳೂ ಪ್ರತಿಬಿಂಬಿಸಬೇಕು ಎಂದು ರೈತರು ಹೇಳಿದ್ದಾರೆ.

ಹೌದು ಅಥವಾ ಇಲ್ಲ – ಸರ್ಕಾರದ ಮೇಲೆ ನಿರ್ಣಾಯಕ ಒತ್ತಡ

ಮೂರು ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವ ವಿಚಾರದದಲ್ಲಿ ರೈತರ ಸರ್ಕಾರಕ್ಕೆ ಹೌದು ಅಥವಾ ಇಲ್ಲ ಎಂಬ ಆಯ್ಕೆಗಳನ್ನು ಇಟ್ಟಿದ್ದಾರೆ. ಶನಿವಾರ ನಡೆದ ಸಭೆಯಲ್ಲಿ ಈ ಎರಡು ಆಯ್ಕೆಗಳನ್ನು ಮುಂದಿಟ್ಟು, ಸಭೆಯ ಮಾತುಕತೆಗಳನ್ನು ಸ್ಥಗಿತಗೊಳಿಸಿದ್ದಾರೆ.

ಸರ್ಕಾರವು ಕಾನೂನುಗಳನ್ನು ತಿದ್ದುಪಡಿ ಮಾಡಲು ಮುಂದಾಗಿದೆ. ಆದರೆ, ಅದು ನಮಗೆ ಸ್ವೀಕಾರಾರ್ಹವಲ್ಲ. ಎಷ್ಟೇ ಸಭೆಗಳು ನಡೆದರೂ ಚರ್ಚೆಗಳು ಪುನಾರಾವರ್ತನೆಯಾಗುತ್ತವೆ. ಅದರಲ್ಲಿ ಹೊಸದೇನೂ ಇರುವುದಿಲ್ಲ. ಹಾಗಾಗಿ ನಾವು ಸರ್ಕಾರದಿಂದ ಒಂದು ಪದದ ಉತ್ತರವನ್ನು ಕೇಳುತ್ತಿದ್ದೇವೆ. “ಹೌದು ಅಥವಾ ಇಲ್ಲ” ಎಂಬದನ್ನು ಮಾತ್ರ ಎಂದು ರೈತ ಮುಖಂಡ ಜೋಗಿಂದರ್ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಹೀಗಾಗಿ ರೈತರ ಹೋರಾಟ ಅಚಲವಾಗಿದೆ. ಹೋರಾಟವನ್ನು ಹತ್ತಿಕ್ಕಲು ಅವಕಾಶ ಕೊಡದಿರಲು ರೈತರು ಎಚ್ಚರಿಕೆ ವಹಿಸಿದ್ದಾರೆ. ಸೂಕ್ಷ್ಮ ಹೆಜ್ಜೆಗಳನ್ನು ಇಡುತ್ತಿದ್ದಾರೆ. ಇದು ಮೋದಿ ಸರ್ಕಾರಕ್ಕೆ ಅರಗಿಸಿಕೊಳ್ಳಲಾರದ ತುತ್ತಾಗಿದೆ ಪರಿಣಮಿಸಿದೆ.


ಇದನ್ನೂ ಓದಿ: ಭಾರತದ ರೈತರ ಹೋರಾಟಕ್ಕೆ ಇಂಗ್ಲೆಂಡ್‌ನ 36 ಸಂಸದರ ಬೆಂಬಲ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights