FACT CHECK | ಅಲ್ಪಸಂಖ್ಯಾತರ ಮೇಲಿನ ದ್ವೇಷಕ್ಕೆ ಮಸೀದಿ ಧ್ವಂಸ ಮಾಡಲಾಗಿದೆ ಎಂಬುದು ಸುಳ್ಳು
ಬುಲ್ಡೋಜರ್ ಬಳಸಿ ಮನೆಗಳನ್ನು ಕೆಡವುತ್ತಿರುವ ವಿಡಿಯೋವೊಂದು ಪ್ರಸಾರವಾಗಿದ್ದು, ಇದು ಅಲ್ಪಸಂಖ್ಯಾತ ಸಮುದಾಯದ ಮೇಲಿನ ದ್ವೇಷವನ್ನು ಸೂಚಿಸುತ್ತದೆ ಎಂಬ ಪ್ರತಿಪಾದನೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಳ್ಳುತ್ತಿರುವ ಇಂಜಿನಿಯರ್ ರಾಜೇಶ್ ಸಿಂಗ್ ಎಂಬ ವ್ಯಕ್ತಿ, ‘ಮತ್ತೊಂದು ಅಕ್ರಮ ಮಸೀದಿ ನೆಲಸಮ ಆಗಿದೆ. ನಮಗೆ ದುಖಃವಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.
लिल्लाह !
.
एक और अवैध मस्जिद समतल…. !
.
हमको बहुत दुख हो रहा है
pic.twitter.com/8XjAtHLcKR— Er. Rajesh Singh (@Kumar1975Rajesh) February 27, 2025
Kreately ಹೆಸರಿನ X ಹ್ಯಾಂಡಲ್ ವೀಡಿಯೊವನ್ನು ಪೋಸ್ಟ್ ಮಾಡಿದ್ದು ‘ಮತ್ತೊಂದು ಮಸೀದಿಯನ್ನು ನೆಲಸಮಗೊಳಿಸಲಾಗಿದೆ’ ಎಂದು ಬರೆದುಕೊಂಡಿದ್ದಾರೆ.
एक और ढांचा समतल pic.twitter.com/zxv4x5gclg
— Kreately.in (@KreatelyMedia) February 27, 2025
ಇವರಲ್ಲದೆ, ಶ್ರೀಕಾಂತ್ ಉಪಾಧ್ಯಾಯ ಮತ್ತು ಅಮಿತಾಬ್ ಚೌಧರಿ ಎಂಬುವವರು ತಮ್ಮ ಎಕ್ಸ್ ಹ್ಯಾಂಡಲ್ ಮೂಲಕ ಇದೇ ವಿಡಿಯೋವನ್ನು ಮೇಲಿನ ಪ್ರತಿಪಾದನೆಯೊಂದಿಗೆ ಹಂಚಿಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಂಆಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋದ ಪೋಸ್ಟ್‌ಗಳಲ್ಲಿ ಮಾಡಲಾದ ಪ್ರತಿಪಾದನೆಯಂತೆ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಅವರ ಮನೆ ಮತ್ತು ಮಸೀದಿಗಳನ್ನು ನೆಲಸಮ ಮಾಡಲಾಗುತ್ತಿದೆಯೇ ಎಂದು ಪರಿಶೀಲಿಸಲು ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಕಟ್ಟಡ ತೆರವು ಕಾರ್ಯಾಚರಣೆ ಮಾಡುವ ಪ್ರದೇಶದಲ್ಲಿ ಅಂಗಡಿಯೊಂದು ಗೋಚರಿಸುತ್ತಿದೆ. ಈ ಅಂಗಡಿಯ ಮೇಲೆ ಮಾಶಲ್ಲಾ ಕಲ್ಯಾಣಿ ಬಿರಿಯಾನಿ ಎಂಬ ಬೋರ್ಡ್ ಇದೆ. ಈ ಹೆಸರನ್ನು ಗೂಗಲ್‌ನಲ್ಲಿ ಸರ್ಚ್ ಮಾಡಿದಾಗ, ಈ ಅಂಗಡಿಯು ತೆಲಂಗಾಣದ ಹೈದರಾಬಾದ್‌ನ ಚಂದ್ರಾಯನಗುಟ್ಟ ಪ್ರದೇಶದಲ್ಲಿದೆ ಎಂದು ತಿಳಿದು ಬಂದಿದೆ.
ಈ ಘಟನೆ ನಡೆದಿರುವುದು ಹೈದರಾಬಾದ್‌ನ ಚಂದ್ರಾಯನಗುಟ್ಟಾ ಪ್ರದೇಶದಲ್ಲಿ ಎಂಬ ಮಾಹಿತಿ ಲಭ್ಯವಾಗಿದ್ದು, ಮತ್ತಷ್ಟು ಮಾಹಿತಿಗಾಗಿ ಕೀವರ್ಡ್‌ಗಳನ್ನು ಬಳಸಿಕೊಂಡು ಗೂಗಲ್ ಸರ್ಚ್ ಮಾಡಿದಾಗ, ಸುದ್ದಿಯ ಲಿಂಕ್ ಲಭ್ಯವಾಗದ್ದು ಅದರ ಪ್ರಕಾರ, ಈ ಘಟನೆಯು ಸುಮಾರು ಒಂದು ತಿಂಗಳ ಹಳೆಯದು. ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್, ನಗರದಲ್ಲಿ ಅಕ್ರಮ ನಿರ್ಮಾಣದ ವಿರುದ್ಧ ಅಭಿಯಾನವನ್ನು ಪ್ರಾರಂಭಿಸಿತ್ತು, ಅದರ ಅಡಿಯಲ್ಲಿ ಫುಟ್‌ಪಾತ್‌ನಲ್ಲಿ ನಿರ್ಮಿಸಲಾದ ಈ ಅಕ್ರಮ ಮಸೀದಿಯನ್ನು ಕೆಡವಲಾಯಿತು ಎಂದು ವರದಿಯಾಗಿದೆ.

25 ಜನವರಿ 2025 ರ ದಿ ಸಿಯಾಸತ್ ಡೈಲಿ ಸುದ್ದಿ ಪ್ರಕಾರ, ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಶನ್ ಜನವರಿ 25 ಶನಿವಾರದಂದು ಹೈದರಾಬಾದ್‌ನ ಚಂದ್ರಾಯನಗುಟ್ಟಾ ಪ್ರದೇಶದಲ್ಲಿ ಅತಿಕ್ರಮಣ ವಿರೋಧಿ ಅಭಿಯಾನವನ್ನು ನಡೆಸಿತು. ಈ ಸಮಯದಲ್ಲಿ, ಹಶ್ಮಾಬಾದ್‌ನಲ್ಲಿರುವ ಮಸೀದಿ-ಎ-ಸಲೇಹಾದ ಹೊರಗೆ ನಿರ್ಮಿಸಲಾದ ವಝು ಖಾನಾವನ್ನು ಬುಲ್ಡೋಜರ್‌ನಿಂದ ಕೆಡವಲಾಯಿತು. ಇದಲ್ಲದೆ, ಹಷ್ಮಾಬಾದ್ ಮತ್ತು ಬಂಡ್ಲಗುಡಾದಲ್ಲಿ ರಸ್ತೆ ಬದಿಯ ಅಂಗಡಿಗಳು ಮತ್ತು ರೆಸ್ಟೋರೆಂಟ್‌ಗಳನ್ನು ಸಹ ನೆಲಸಮ ಮಾಡಲಾಗಿದೆ.
ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಆರೋಪಿಸಿರುವಂತೆ ಯಾವುದೇ ಮಸೀದಿಯನ್ನು ಕೆಡವುದಾಗಲಿ, ನೆಲಸಮವಾಗಲಿ ಮಾಡಲಾಗಿಲ್ಲ. ರಸ್ತೆ ಮತ್ತು ಫುಟ್‌ಪಾತ್‌ನಲ್ಲಿ ನಿರ್ಮಾಣ ಮಾಡಲಾಗಿದ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಹೈಕೋರ್ಟ್ ಆದೇಶದ ನಂತರ ಬಹ್ರೈಚ್ ಜಿಲ್ಲಾಡಳಿತ ಕೈಸರ್‌ಗಂಜ್‌ನ ಹಳ್ಳಿಯಲ್ಲಿ 23 ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡಿದೆ ಎಂದು ವರದಿಗಳಲ್ಲಿ ಉಲ್ಲೇಖಿಸಲಾಗಿದೆ. ಈ ಕಾರ್ಯಾಚರಣೆ ಯಾವುದೇ ಧಾರ್ಮಿಕ ಸಮುದಾಯದ ವಿರುದ್ದವಾಗಲಿ, ಕೋಮು ದ್ವೇಷದ ಹಿನ್ನಲೆಯಾಗಲಿ ಇಲ್ಲ. ನ್ಯಾಯಾಲಯದ ನಿರ್ದೇಶನದ ಅಡಿಯಲ್ಲಿ ತೆರವು ಕಾರ್ಯಚರಣೆ ನಡೆಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | RSS ಬಾಲ ಶಾಖೆಯ ಮುಖ್ಯ ಶಿಕ್ಷಕನಾಗಿ ಈ ಬಾಲಕನನ್ನು ಆಯ್ಕೆ ಮಾಡಲಾಗಿದೆ ಎಂಬುದು ಸುಳ್ಳು

