ರಮೇಶ್, ಮುನಿಯಪ್ಪ, ಸಿದ್ದು, ಹೆಚ್ಡಿಕೆ, ಡಿಕೆಶಿ ಏಕಪತ್ನಿವ್ರತಸ್ಥರಾ? – ಡಾ. ಸುಧಾಕರ್ ಓಪನ್ ಚಾಲೆಂಜ್!

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣವನ್ನು ಸೆಕ್ಷನ್ 376 ಅಡಿಯಲ್ಲಿ ದಾಖಲಾಗಬೇಕು ಎಂದು ವಿಪಕ್ಷ ನಾಯಕರು ವಾದಿಸುತ್ತಿದ್ದಂತೆ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಓಪನ್ ಚಾಲೆಂಜ್ ಹಾಕಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಡಾ.ಕೆ ಸುಧಾಕರ್, ” ಸಿಡಿ ಪ್ರಕರಣದ ಬಗ್ಗೆ ಇಷ್ಟೆಲ್ಲಾ ಮಾತನಾಡುವ ಕಾಂಗ್ರೆಸ್ ನ ರಮೇಶ್ ಕುಮಾರ್, ಮುನಿಯಪ್ಪ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಜೆಡಿಎಸ್ ಕುಮರಾಣ್ಣವರು ಏಕಪತ್ನಿವ್ರತಸ್ಥರಾ? ಸತ್ಯಹರಿಶ್ಚಂದ್ರರಾ? ರಮೇಶ್ ಕುಮಾರ್, ಮುನಿಯಪ್ಪ, ಸಿದ್ದರಾಮಯ್ಯ, ಕುಮರಾಣ್ಣವರು, ಡಿಕೆಶಿ ಇಡೀ ಸಮಾಜಕ್ಕೆ ಮಾದರಿಯಾಗಿದ್ದಾರಾ? ಎಂದು ಸಿಡಿ ಕೇಸ್ ನಲ್ಲಿ ಸಿಡಿದೆದ್ದ ಸಚಿವ ಸುಧಾಕರ್ ಪ್ರಶ್ನಿಸಿದ್ದಾರೆ.

ಯಾರು ಸದನದಲ್ಲಿ ಮಾತನಾಡುತ್ತಾರೋ ಅವರಿಗೆಲ್ಲಾ ಒಂದು ಸವಾಲು ಹಾಕುತ್ತೇನೆ.  224 ಶಾಸಕರ ತನಿಖೆ ಆಗಲಿ.  ಯಾರ್ಯಾರು ಸಿಎಂ ಆಗಿದ್ದಾಗ ಏನೇನು ಮಾಡಿದ್ದಾರೆ? ಎಲ್ಲರ ಬಗ್ಗೆ ತನಿಖೆ ಆಗಲಿ. ಎಲ್ಲಾ ಪಕ್ಷದ ಮಾಜಿ ಹಾಗೂ ಹಾಲಿ ಸಚಿವರು ಮತ್ತು ಶಾಸಕರ ತನಿಖೆ ಆಗಲಿ.  ಆಗ ರಾಜ್ಯದ ಜನರಿಗೆ ತಿಳಿಯುತ್ತದೆ.  ಆಗ ಬಂಡವಾಳ ಬಯಲಾಗುತ್ತದೆ. ಅವರ ಜೀವನದಲ್ಲಿ ಏನ್ ಮಾಡಿದ್ದರು? ಅವರ ಚರಿತ್ರೆ ಹೇರಿದೆ? ಯಾರಿಗೆ ಅನೈತಿಕ ಸಂಬಂಧ ಇದೆ. ಯಾರೂ ಸತ್ಯಹರಿಶ್ಚಂದ್ರರು? ಯಾರೂ ಸತ್ಯಹರಿಶ್ಚಂದ್ರರಲ್ಲ ಅನ್ನೋದು ರಾಜ್ಯದ ಜನತೆಗೆ ಗೊತ್ತಾಗಲಿ. ಈ ತನಿಖೆಯಲ್ಲಿ ನಾನು ತಯಾರಿದ್ದೇನೆ ಎಂದು ಪ್ರತಿಪಕ್ಷ ಆರೋಪಕ್ಕೆ ಸಚಿವ ಸುಧಾಕರ್ ಸವಾಲು ಹಾಕಿದ್ದಾರೆ.

 

Spread the love

Leave a Reply

Your email address will not be published. Required fields are marked *