ಸಿಎಎ ವಿರೋಧಿ ಹೋರಾಟ ಕೈಬಿಟ್ಟರೆ ಸಚಿವ ಸ್ಥಾನ ನೀಡುವುದಾಗಿ BJP ಆಮಿಷ: ಅಖಿಲ್‌ ಗೊಗೊಯ್ ಆರೋಪ

ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರೋಧಿ ಹೋರಾವನ್ನು ಕೈಬಿಟ್ಟು, ಆರ್‌ಎಸ್‌ಎಸ್‌-ಬಿಜೆಪಿ ಸೇರಿದರೆ ತಮಗೆ ಅಸ್ಸಾಂನಲ್ಲಿ ಸಚಿವ ಸ್ಥಾನ ನೀಡುವುದಾಗಿ ಬಿಜೆಪಿ ನಾಯಕರು ಆಮಿಷ ಒಡ್ಡಿದ್ದರು ಎಂದು ಸಿಎಎ ವಿರೋಧಿ ಹೋರಾಟಗಾರ ಅಖಿಲ್‌ ಗೊಗೊಯ್‌ ಆರೋಪಿಸಿದ್ದಾರೆ.

ಅಸ್ಸಾಂನಲ್ಲಿ ಸಿಎಎ ವಿರೋಧಿ ಹೋರಾಟದ ನಾಯಕತ್ವ ವಹಿಸಿದ್ದ ಅಖಿಲ್‌ ಗೊಗೊಯ್‌ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಅವರು ಬಂಧನದಲ್ಲಿದ್ದುಕೊಂಡೇ ಅಸ್ಸಾಂ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಅಲ್ಲದೆ, ಅವರು ರಾಯ್‌ಜೋರ್‌ ದಳ್‌ ಎಂಬ ಪಕ್ಷವನ್ನು ಸ್ಥಾಪಿಸಿದ್ದು, 32 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ.

2019ರಲ್ಲಿ ನಡೆದ ಸಿಎಎ ವಿರೋಧಿ ಹೋರಾಟದ ಸಮಯದಲ್ಲಿ ಅವರನ್ನು ಬಂಧಿಸಲಾಗಿತ್ತು. ಈ ವೇಳೆ, ಡಿಸೆಂಬರ್‌ 17ರಂದು ಬಲವಂತವಾಗಿ ತಮ್ಮನ್ನು ದೆಹಲಿಗೆ ಕರೆದೊಯ್ಯಲಾಯಿತು. ಅವರಿಗೆ ತನಿಖಾಧಿಕಾರಿಗಳು ಚಿತ್ರಹಿಂಸೆ ನೀಡಿದ್ದಾರೆ. ಅಲ್ಲದೆ, ಸಿಎಎಯನ್ನು ವಿರೋಧಿಸುವುದು ಎಂದರೆ ಮುಸ್ಲಿಮರ ಜತೆ ಸೇರಿದಂತೆ. ಇದು ದೇಶದ್ರೋಹ. ಸಿಎಎ ಮತ್ತು ದೊಡ್ಡ ಅಣೆಕಟ್ಟೆಗಳ ವಿರುದ್ಧದ ಹೋರಾಟ ಕೈಬಿಡುವಂತೆ ಅವರು ಬೆದರಿಸಿದ್ದರು.

ಇದನ್ನೂ ಓದಿ: ಪ್ರತಿಭಟನೆ ಮತ್ತು ಚುನಾವಣೆಗಳ ಭಯದಿಂದ ಸಿಎಎ ಜಾರಿಗೆ ಹಿಂದೆ ಸರಿಯುತ್ತಿದೆಯೇ ಬಿಜೆಪಿ?

ಹೋರಾಟ ಕೈಬಿಟ್ಟು ಆರ್‌ಎಸ್‌ಎಸ್‌-ಬಿಜೆಪಿ ಸೇರಿದರೆ ಸಚಿವ ಸ್ಥಾನ ನೀಡುತ್ತೇವೆ ಎಂದು ಆಮಿಷ ವೊಡ್ಡಿದ್ದರು. ಆರ್‌ಎಸ್‌ಎಸ್‌ ಸೇರಿದರೆ ತಕ್ಷಣ ಜಾಮೀನು ನೀಡಲಾಗುವುದು. ಅಸ್ಸಾಂನಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರ ಆಗುತ್ತಿರುವುದನ್ನು ತಡೆಯಬೇಕು. ಆರ್‌ಎಸ್‌ಎಸ್‌ ಮತ್ತು ಬಿಜೆಪಿಯ ಮತಾಂಧ ಸಿದ್ಧಾಂತವನ್ನು ಒಪ್ಪಿಕೊಂಡು ಬಿಜೆಪಿ ಸೇರಿದರೆ, ಆಗ ಖಾಲಿ ಇದ್ದ ಒಂದು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡುತ್ತೇವೆ. ಸಚಿವನನ್ನಾಗಿ ಮಾಡುತ್ತೇವೆ ಎಂದು ಆಮಿಷ ವೊಡ್ಡಿದರು. ಆದರೆ, ಈ ಎಲ್ಲ ಕೊಡುಗೆಗಳನ್ನು ನಾನು ತಿರಸ್ಕರಿಸಿದೆ. ಜನವಿರೋಧಿ ಸಿಎಎ ಮತ್ತು ದೊಡ್ಡ ಅಣೆಕಟ್ಟೆಗಳ ವಿರುದ್ಧದ ಹೋರಾಟ ಮುಂದುವರಿಸುವುದಾಗಿ ಹೇಳಿದೆ’ ಎಂದು ಅಖಿಲ್‌ ಅವರು ಮಂಗಳವಾರ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.

ಇದನ್ನೂ ಓದಿ: ತಮಿಳುನಾಡು: ಸಿಎಎ ಪ್ರತಿಭಟನಾಕಾರರ ಮೇಲಿನ ಪ್ರಕರಣಗಳನ್ನು ಹಿಂತೆಗೆದುಕೊಂಡು AIADMK ಅಧಿಕಾರಕ್ಕೆ ಮರಳುತ್ತದೆಯೇ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights