FACT CHECK | IPLನಲ್ಲಿ ಪಂಜಾಪ್ ಕಿಂಗ್ಸ್‌ ಗೆಲುವನ್ನು ನಾಯಕ ಶ್ರೇಯಸ್ ಅಯ್ಯರ್ ಮತ್ತು ಪ್ರೀತಿ ಜಿಂಟಾ ಸಂಭ್ರಮಿಸಿದ್ದು ಹೀಗೆ ಎಂದು AI ಫೋಟೊ ಹಂಚಿಕೆ

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಹ ಮಾಲಕಿ ಪ್ರೀತಿ ಜಿಂಟಾ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (IPL)  ಸದಾ ಚೈತನ್ಯದ ಚಿಲುಮೆಯಾಗಿ ಕಾಣಿಸಿಕೊಂಡು ತಂಡವನ್ನು ಪ್ರೋತ್ಸಾಹಿಸುತ್ತಿರುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಅವರೊಬ್ಬ ಕ್ರಿಕೆಟ್ ಅಭಿಮಾನಿ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪಂಜಾಬ್ ಕಿಂಗ್ಸ್‌ ಉತ್ತಮ ಪ್ರದರ್ಶನ ನೀಡುತ್ತಿದೆ. ತಂಡವು ಇದುವರೆಗೆ ಆಡಿದ ನಾಲ್ಕು ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯವನ್ನು ಮಾತ್ರ ಕಳೆದುಕೊಂಡಿದ್ದು, ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

ಇಂತಹ ಗೆಲುವಿನ ಕ್ಷಣಗಳನ್ನು ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರೊಂದಿಗೆ ಪ್ರೀತಿ ಜಿಂಟಾ ಆಚರಿಸುತ್ತಿರುವ ಕೊಲಾಜ್‌ ಮಾಡಲಾದ ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

Cric lover ಎಂಬ ಫೇಸ್‌ಬುಕ್ ಬಳಕೆದಾರೊಬ್ಬರು ಕೊಲಾಜ್ ಮಾಡಲಾದ ಕೆಲವು ಫೋಟೊಗಳನ್ನು ಪೋಸ್ಟ್‌ ಮಾಡಿದ್ದು, ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಗೆಲುವನ್ನು ಎಂಜಾಯ್ ಮಾಡತಿದ್ದಾರೆ ಎಂದು ಮಾಲಕಿ ಪ್ರೀತಿ ಜಿಂಟಾರೊಂದಿಗೆ ಇರುವ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ಇದೇ ರೀತಿಯ ಹೇಳಿಕೆಗಳೊಂದಿಗೆ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಹಂಚಿಕೊಂಡ ಪೋಸ್ಟ್‌ಗಳನ್ನು ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಶ್ರೇಯಸ್ ಅಯ್ಯರ್ ಮತ್ತು ಪ್ರೀತಿ ಜಿಂಟಾ ಅವರ ಸೋಶಿಯಲ್ ಮೀಡಿಯಾಗಳನ್ನು ಸರ್ಚ್ ಮಾಡಿದಾಗ ವೈರಲ್ ಫೋಟೊಗೆ ಸಂಬಂಧಿಸಿದಂತೆ ಯಾವುದೇ ಫೋಟೊಗಳನ್ನು ಈ ಇನ್ನರು ಸೆಲೆಬ್ರಟಿಗಳು ಹಂಚಿಕೊಂಡಿರುವುದು ಕಂಡುಬಂದಿಲ್ಲ.

ಪೋಸ್ಟ್‌ನಲ್ಲಿರುವ ಮೂರು ಫೋಟೊಗಳ ಪೈಕಿ ಎರಡು ಚಿತ್ರಗಳು ಅಸಹಜ ಮುಖಭಾವಗಳನ್ನು ಹಂದಿದ್ದು, ವಿಶೇಷವಾಗಿ ಮುಖಗಳ ಸುತ್ತಲೂ ಮಂದ ಬೆಳಕು, ಹಿಂಭಾಗದಲ್ಲಿ ವಿಚಿತ್ರವಾದ ವಿನ್ಯಾಸ ಮಿಶ್ರಣ ಮತ್ತು ಕೆಲವು ವಿರೂಪಗಳನ್ನು ಹೊಂದಿರುವಂತೆ ತೋರುತ್ತದೆ. ಈ ಹಿನ್ನಲೆಯಲ್ಲಿ ಕೊಲಾಜ್‌ನ ಭಾಗವಾಗಿರುವ ಮೂರು ಚಿತ್ರಗಳಲ್ಲಿ ಎರಡನ್ನು ಡಿಜಿಟಲ್ ಆಗಿ ಮಾರ್ಪಡಿಸಲಾಗಿದೆ ಎಂಬ ಅನುಮಾನ ಮೂಡುವಂತೆ ಮಾಡುತ್ತದೆ.

ಚಿತ್ರಗಳಲ್ಲಿ ಒಂದರಲ್ಲಿ  ಕೆಳಗಿನ ಬಲಭಾಗದಲ್ಲಿರುವ ಗ್ರೋಕ್ ವಾಟರ್‌ಮಾರ್ಕ್ಇರುವುದನ್ನು ಕಾಣಬಹುದು.

ಹೈವ್ ಮಾಡರೇಶನ್ ಮತ್ತು ಸೈಟ್‌ಎಂಜಿನ್ – ಸುಧಾರಿತ AI-ಫೋಟೊ ರಚನೆ ಪತ್ತೆ ಸಾಧನ ಬಳಸಿಕೊಂಡು ರನ್ ಮಾಡಿದಾಗ ಫೋಟೊಗಳು AI-ರಚಿತವೆಂದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಶ್ರೇಯಸ್ ಅಯ್ಯರ್ ಅವರೊಂದಿಗೆ ಪ್ರೀತಿ ಜಿಂಟಾ ಗೆಲುವಿನ ಸಂಭ್ರಮವನ್ನು ಆಚರಿಸುತ್ತಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿರುವ ಚಿತ್ರಗಳು AI-ರಚಿತವಾಗಿವೆ ಎಂದು ಸ್ಪಷ್ಟವಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ತಲಂಗಾಣ ಸರ್ಕಾರ ಮಾಡುತ್ತಿರುವ ಅರಣ್ಯ ನಾಶದ ಪರಿಣಾಮ ಆನೆ ಗಾಯಗೊಂಡಿದ್ದು ನಿಜವೇ?*


ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights