FACT CHECK | ತಲಂಗಾಣ ಸರ್ಕಾರ ಮಾಡುತ್ತಿರುವ ಅರಣ್ಯ ನಾಶದ ಪರಿಣಾಮ ಆನೆ ಗಾಯಗೊಂಡಿದ್ದು ನಿಜವೇ?*
ಸಾಮಾಜಿಕ ಮಾಧ್ಯಮಗಳಲ್ಲಿ ಗಾಯಗೊಂಡ ಆನೆಯ ವಿಡಿಯೋವೊಂದು ವೈರಲ್ ಆಗಿದೆ. ಆನೆಯ ಸೊಂಡಿಲಿಗೆ ದೊಡ್ಡ ಗಾಯವಾಗಿರುವುದನ್ನು ಇದರಲ್ಲಿ ಕಾಣಬಹುದಾಗಿದೆ. ಈ ಆನೆ ತನ್ನ ಮನೆ (ಕಾಡನ್ನು) ಉಳಿಸಲು ಬುಲ್ಡೋಜರ್ನೊಂದಿಗೆ ಹೋರಾಡಿತು ಎಂದು ಸಾಮಾಜಿಕ ಜಾಲತಾಣಗಳ ಬಳಕೆದಾರರು ಹೇಳಿದ್ದಾರೆ. ಹೈದರಾಬಾದ್ನಲ್ಲಿ ಐಟಿ ಪಾರ್ಕ್ಗಾಗಿ ಕಾಡು ಕಡಿಯುತ್ತಿರುವ ವಿವಾದದ ನಡುವೆ ಈ ವಿಡಿಯೋ ವೈರಲ್ ಆಗಿದೆ.
तेलंगाना की कांग्रेस सरकार के पास अच्छा पशु चिकित्सक भी नहीं है जो इस जख्मी हाथी जो सरकारी JCB से जख्मी हुआ उसका इलाज कर सके @peta वालो तुम्हे कौनसा साफ सुंग गया है ??#SaveHCUBioDiversity #SaveHCU #SaveHCUBioDiversity pic.twitter.com/PGd25KCpJ9
— anuj Pal (मोदी का परिवार) (@anujPal50037043) April 7, 2025
ಅನುಜ್ ಪಾಲ್ ಎಂಬ ಎಕ್ಸ್ ಬಳಕೆದಾರರು ಆನೆಯ ವಿಡಿಯೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು. ‘ತೆಲಂಗಾಣದ ಕಾಂಗ್ರೆಸ್ ಸರ್ಕಾರದಲ್ಲಿ ಒಳ್ಳೆಯ ಪಶುವೈದ್ಯರಿಲ್ಲ. ಸರ್ಕಾರದ ಜೆಸಿಬಿಯಿಂದ ಗಾಯಗೊಂಡ ಈ ಆನೆಗೆ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ. ಪೇಟಾದವರು ಏನು ಮಾಡುತ್ತಿದ್ದೀರಿ?” ಎಂದು ಪ್ರಶ್ನಿಸಿದ್ದಾರೆ.
तेलंगाना की कांग्रेस सरकार के पास अच्छा पशु चिकित्सक भी नहीं है जो इस जख्मी हाथी जो सरकारी JCB से जख्मी हुआ उसका इलाज कर सके @peta वालो तुम्हे कौनसा साफ सुंग गया है ??#SaveHCUBioDiversity pic.twitter.com/HxLYlwRMZR
— एक भारतीय (@Vinay69455286) April 7, 2025
ಏಕ್ ಭಾರತೀಯ ಹೆಸರಿನ ಇನ್ನೋರ್ವ ಎಕ್ಸ್ ಬಳಕೆದಾರರು ಸೇರಿ, ಹಲವರು ಈ ವಿಡಿಯೋವನ್ನು ಹಂಚಿಕೊಂಡಿದ್ದು, ತೆಲಂಗಾಣ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಇದೇ ರೀತಿಯ ಹೇಳಿಕೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ವಿಡಿಯೋವನ್ನು ಹಂಚಿಕೊಂಡಿದ್ದು ಈ ವಿಡಿಯೋ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವೈರಲ್ ವಿಡಿಯೋದ ಕೀ ಫ್ರೇಮ್ಗಳ ಸ್ಕ್ರಿನ್ ಶಾಟ್ ತೆಗೆದು ಅದನ್ನು ಗೂಗಲ್ ಲೆನ್ಸ್ ಸಹಾಯದಿಂದ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, ಅನೇಕ ಎಕ್ಸ್ ಪೋಸ್ಟ್ಗಳು ಲಭ್ಯವಾಗಿವೆ. ಆದರೆ, ಅದರಲ್ಲೆಲ್ಲಾ, ‘ಇದು ಭಾರತದ್ದೇ ಆನೆ, ಹೈದರಾಬಾದ್ನಲ್ಲಿ ತೆಲಂಗಾಣ ಸರ್ಕಾರದ ಜೆಸಿಬಿ ದಾಳಿಗೆ ಗಾಯಗೊಂಡ ಆನೆ’ ಎಂದೇ ಹೇಳಲಾಗಿತ್ತು.
ನಂತರ ಗೂಗಲ್ ಲೆನ್ಸ್ ಮೂಲಕ ಮತ್ತೊಂದು ಆಂಗಲ್ನ ಚಿತ್ರವನ್ನು ಪರಿಶೀಲಿಸಿದಾಗ 2021ರಲ್ಲಿ ಪ್ರಕಟವಾದ ವರದಿಯೊಂದು ಪತ್ತೆಯಾಯಿತು. ಈ ವರದಿ ಸಿಕ್ಕ ನಂತರ, ಆನೆಯ ಹಣೆಯ ಮೇಲಿನ ಗಾಯಗಳು ಮೊದಲೇ ಇದ್ದವು; ಇದು ಭಾರತದ ಆನೆಯೇ ಅಲ್ಲ ಎಂದು ತಿಳಿದು ಬಂತು.

ಹೈದರಾಬಾದ್ನಲ್ಲಿನ ಬುಲ್ಡೋಜರ್ ಕಾರ್ಯಾಚರಣೆಗೂ ಈ ಆನೆಯ ಸೊಂಡಿಲಿಗೆ ಗಾಯವಾಗಿದ್ದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟವಾಯಿತು. ವೈರಲ್ ವಿಡಿಯೋದಲ್ಲಿರುವ ಆನೆಯ ಹೆಸರು ರಾಂಜೆಕಿಲೆ ಆಗಿದ್ದು, ಇದು ಆಫ್ರಿಕಾದ ಗ್ರೇಟರ್ ಕ್ರುಗರ್ ನ್ಯಾಷನಲ್ ಪಾರ್ಕ್ನಲ್ಲಿದೆ.
Rhandzekile, meaning ‘loved’ in Shangaan. Vets suspect that the large hole below her forehead is congenital and estimated that only 2% of her breathing is through her trunk – the rest is via that hole. #elephants #TwitterNatureCommunity #nature #wildlifephotography pic.twitter.com/MWKN2dxQyY
— MalaMala Game Reserve (@mala_mala) December 15, 2021
ಡಿಸೆಂಬರ್ 15, 2021 ರಂದು ದಕ್ಷಿಣ ಆಫ್ರಿಕಾ ಮೂಲದ ಎಕ್ಸ್ ಹ್ಯಾಂಡಲ್ ಮಾಲಾಮಾಲಾ ಗೇಮ್ ರಿಸರ್ವ್ ಹಂಚಿಕೊಂಡ ರಂಡ್ಜೆಕಿಲೆ ಎಂಬ ಆನೆಯ ಹಲವಾರು ಚಿತ್ರಗಳನ್ನು ಲಭ್ಯವಾಗಿವೆ. ಹಣೆಯ ಮೇಲೆ ರಂಧ್ರವಿರುವ ಆನೆಯು ಜನವರಿ 20, 2022 ರಂದು ಪರಿಶೀಲಿಸಿದ ಯೂಟ್ಯೂಬ್ ಚಾನೆಲ್ ಮಾಲಾಮಾಲಾ ಗೇಮ್ ರಿಸರ್ವ್ ಪ್ರಕಟಿಸಿದ ವನ್ಯಜೀವಿ ವೀಡಿಯೊ ಸಂಕಲನದಲ್ಲಿಯೂ ಕಾಣಿಸಿಕೊಂಡಿದೆ.
ಪೋಸ್ಟ್ ಮಾಹಿತಿ ಪ್ರಕಾರ ಶಾಂಗಾನ್ ಭಾಷೆಯಲ್ಲಿ ‘ಪ್ರೀತಿಪಾತ್ರ’ ಎಂಬ ಅರ್ಥವನ್ನು ನೀಡುವ ರಂಡ್ಜೆಕಿಲೆ. ಪಶುವೈದ್ಯರು ಆಕೆಯ ಹಣೆಯ ಕೆಳಗಿರುವ ದೊಡ್ಡ ರಂಧ್ರವು ಜನ್ಮಜಾತವಾಗಿದೆ ಎಂದು ಶಂಕಿಸಿದ್ದಾರೆ ಮತ್ತು ಆಕೆಯ ಉಸಿರಾಟ ಕೇವಲ 2% ಮಾತ್ರ ಆಕೆಯ ಸೊಂಡಿಲಿನ ಮೂಲಕ ನಡೆಯುತ್ತಿದೆ – ಉಳಿದಂತೆ ಆ ರಂಧ್ರದ ಮೂಲಕ ಆನೆ ಉಸಿರಾಡುತ್ತದೆ ಎಂದು ಅಂದಾಜಿಸಲಾಗಿದೆ.
ಒಟ್ಟಾರೆಯಾಗಿ ಹೆಳುವುದಾದರೆ, ಬುಲ್ಡೋಜರ್ಗೆ ಡಿಕ್ಕಿ ಹೊಡೆದು ಗಾಯಗೊಂಡ ಆನೆ ಎಂದು ವೈರಲ್ ಆಗುತ್ತಿರುವ ವಿಡಿಯೋ ಹೈದರಾಬಾದ್ನದ್ದಲ್ಲ. ಆನೆಯ ಹೆಸರು ರಾಂಜೆಕಿಲೆ ಆಗಿದ್ದು, ಇದು ಆಫ್ರಿಕಾದ ಗ್ರೇಟರ್ ಕ್ರುಗರ್ ನ್ಯಾಷನಲ್ ಪಾರ್ಕ್ನಲ್ಲಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | LPG ಸಿಲಿಂಡರ್ಗೆ ರಾಜ್ಯ ಸರ್ಕಾರವೇ ಹೆಚ್ಚಿನ ತೆರಿಗೆ ವಿಧಿಸುತ್ತದೆ ಎಂಬುದು ನಿಜವೇ

