ಅಯ್ಯಯ್ಯೋ.. ಹುಟ್ಟುಹಬ್ಬಕ್ಕೆ ಕ್ಯಾಂಡಲ್ ಆರಿಸುವಾಗ ನಟಿಯ ಕೂದಲಿಗೆ ಹೊತ್ತುಕೊಂಡ ಬೆಂಕಿ!

ಅಮೇರಿಕಾದ ಫ್ಯಾಷನ್ ಡಿಸೈನರ್ ಹಾಗೂ ನಟಿಯಾಗಿರುವ ನಿಕೋಲ್ ರಿಚಿ ಅವರ 40ನೇ ವರ್ಷದ ಹುಟ್ಟುಹಬ್ಬದ ವೇಳೆ ದುರಂತವೊಂದು ಸಂಭವಿಸಿದ್ದು ನೋಡುಗರನ್ನ ಬೆಚ್ಚಿಬೀಳಿಸಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಇತ್ತೀಚೆಗೆ ತಮ್ಮ 40ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಸಿಂಪಲ್ ಲೈಫ್ ಸ್ಟಾರ್ ನಿಕೋಲ್ ರಿಚಿ ಅವರು ಬಾಲ್ಯದ ಫೋಟೋ ಇರುವ ಕೇಕ್ ಕಟ್ ಮಾಡುವ ವೇಳೆ ಈ ಘಟನೆ ನಡೆದಿದೆ. ರಿಚಿ ಕೇಕ್ ಮೇಲಿಟ್ಟ ಕ್ಯಾಂಡಲ್‌ಗಳನ್ನು ಆರಿಸುವಾಗ ಕೂದಲಿಗೆ ಬೆಂಕಿ ಹೊತ್ತುಕೊಂಡಿದೆ. ಘಟನೆಯ ವಿಡಿಯೋ ನೋಡಿದ ಜನ ನಿಜಕ್ಕೂ ಬೆಚ್ಚಿಬಿದ್ದಿದ್ದಾರೆ. ಬೆಂಕಿ ಹೊತ್ತುಕೊಂಡ ಕೂಡಲೆ ರಿಚಿ ಕಿರುಚಾಡಿದ್ದಾರೆ. ಬೆಂಕಿ ಆರಿಸಲು ಪ್ರಯತ್ನಿಸಿದ್ದಾರೆ. ಜೊತೆಗಿದ್ದ ಪತಿ ಜೋಯಲ್ ಮ್ಯಾಡೆನ್ ಕೂಡ ಬೆಂಕಿಯನ್ನು ನಂದಿಸುವ ಪ್ರಯತ್ನ ಮಾಡಿದ್ದಾರೆ. 

ನಿಕೋಲ್ ಕೂಡ ಘಟನೆಯ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು ಅದು ವೈರಲ್ ಆಗಿದೆ.

ಜೋಯಲ್ ಮ್ಯಾಡೆನ್ ಮತ್ತು ನಿಕೋಲ್ ರಿಚಿ 2010 ರಲ್ಲಿ ವಿವಾಹವಾದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ನಟಿ ನಿಕೋಲ್ ಬ್ರಾಂಡ್ ಹೌಸ್ ಆಫ್ ಹಾರ್ಲೋರ ಸ್ಥಾಪಕರಾಗಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights