ಫ್ಯಾಕ್ಟ್‌ಚೆಕ್ : ಟಾಯ್ಲೆಟ್ ಕ್ಲೀನರ್ ಬಳಸಿ ಗೋಲ್ಗಪ್ಪ ಪಾನಿ ತಯಾರಿಸಿದ ಮುಸ್ಲಿಂ ವ್ಯಾಪಾರಿ ಎಂಬುದು ಸುಳ್ಳು

ರುಚಿಯಾದ ಗೋಲ್ಗಪ್ಪವನ್ನು ತಯಾರಿಸಲು ಟಾಯ್ಲೆಟ್ ಕ್ಲೀನರ್ ಬಳಸಲಾಗುತ್ತಿದೆ ಎಂಬ ಹೇಳಿಕೆಯೊಂದಿಗೆ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ಜುಬೇರ್ ಎಂಬ ಮುಸ್ಲಿಂ ವ್ಯಾಪಾರಿಯು ಈ ರೀತಿ ಪಾನಿ ತಯಾರಿಸುತ್ತಿದ್ದಾನೆ ಎಂದು ವಿಡಿಯೊವನ್ನು ಹಂಚಿಕೊಂಡಿದ್ದು. “ಜುಬೇರ್ ಎಂಬ ಜಿಹಾದಿ ನೀರಿನಲ್ಲಿ ಹಾರ್ಪಿಕ್ (ಟಾಯ್ಲೆಟ್ ಕ್ಲೀನರ್) ಬೆರೆಸಿ ಜನರಿಗೆ ಆಹಾರ ನೀಡುತ್ತಿದ್ದಾನೆ. ನೀವು ಜಿಹಾದಿಗಳಿಂದ ಏನನ್ನಾದರೂ ಖರೀದಿಸಿದರೆ, ನಿಮ್ಮ ಪ್ರಾಣ ಕಳೆದುಕೊಳ್ಳುವ ಅಪಾಯವಿದೆ” ಎಂಬ ಒಕ್ಕಣೆಯೊಂದಿಗೆ ಟ್ವಿಟರ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ವ್ಯಕ್ತಿಯೊಬ್ಬ ಮುಖಕ್ಕೆ ಬಟ್ಟೆ ಸುತ್ತಿಕೊಂಡು ಗೋಲ್ಗಪ್ಪಾ ನೀರನ್ನು ಸಿದ್ಧಪಡಿಸುತ್ತಿರುವುದನ್ನು ಕಾಣಬಹುದು. ಗೋಲ್ಗಪ್ಪಾ ನೀರಿಗೆ ಹಸಿರು ಬಣ್ಣದ ಡಬ್ಬಿಯಿಂದ ಏನೊ ಹಾಕುತ್ತಾನೆ. ಈ ವೇಳೆ ಗೌಪ್ಯವಾಗಿ ವಿಡಿಯೋ ಮಾಡುತ್ತಿದ್ದವರು ದಾಳಿ ನಡೆಸಿ ಪ್ರಶ್ನಿಸಿದ್ದಾರೆ. ಈ ವೇಳೆ ಗೋಲ್ಗಪ್ಪಾ ಸಿದ್ಧಪಡಿಸುತ್ತಿರುವ ವ್ಯಕ್ತಿ ಅದನ್ನು ಸಮರ್ಥಿಸಿಕೊಳ್ಳುವುದನ್ನು ವಿಡಿಯೋದಲ್ಲಿ ನೋಡಬಹುದು. ಇದೀಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ವೈರಲ್ ವಿಡಿಯೊದ ಆರ್ಕೈವ್ ಲಿಂಕ್‌ಅನ್ನು ಇಲ್ಲಿ ನೋದಬಹುದು.

https://twitter.com/UmaShan27941413/status/1546779741436358656

ಹಾರ್ಪಿಕ್ ಟಾಯ್ಲೆಟ್ ಕ್ಲೀನರ್ ಬಳಸಿ ಗೋಲ್ಗಪ್ಪ ಪಾನಿ ಸಿದ್ದಪಡಿಸಿದ್ದಾರೆ ಎನ್ನಲಾದ ವಿಡಿಯೊದ ಸತ್ಯಾಸತ್ಯತೆ ಏನೆಂದು ಪರಿಶೀಲಿಸೋಣ.
ಏನ್‌ಸುದ್ದಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
100 ₹200 ₹500 ₹1000 Others

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೊ ಎರಡು ಭಾಗಗಳಿದ್ದು ಅದರ ಕೀಫ್ರೇಮ್‌ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್‌ ಸರ್ಚ್‌ ಮಾಡಿದಾಗ ವಿಡಿಯೋವನ್ನು ಗ್ಯಾನ್ ಭಂಡಾರ್ ಎಂಬ ಫೇಸ್‌ಬುಕ್ ಅಕೌಂಟ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಈ ವೀಡಿಯೊವನ್ನು ಜಾಗೃತಿ ಮೂಡಿಸವ ಉದ್ದೇಶದಿಂದ ಚಿತ್ರೀಕರಿಸಲಾಗಿದೆ ಎಂದು ಪ್ರತಿಪಾದಿಸಿ ಹಂಚಿಕೊಳ್ಳಲಾಗಿದೆ. ಅದು ಸ್ಕ್ರಿಪ್ಟೆಡ್ (ಅಭಿನಯಿಸಿದ ನಾಟಕೀಯ) ವಿಡಿಯೋ ಆಗಿದ್ದು, ಮನರಂಜನೆ ಉದ್ದೇಶಕ್ಕಾಗಿ ಮಾತ್ರ ಮಾಡಲಾಗಿದೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಇದು ಸ್ಕ್ರಿಪ್ಟ್‌ ವಿಡಿಯೊ ಎಂದು India Today ವರದಿ ಮಾಡಿದೆ.


“ಸ್ನೇಹಿತರೇ, ಟಾಯ್ಲೆಟ್ ಕ್ಲೀನರ್ ಅನ್ನು ಹೇಗೆ ಮಿಶ್ರಣ ಮಾಡಲಾಗುತ್ತಿದೆ ಎಂಬುದನ್ನು ನೋಡಿ. ಮಕ್ಕಳ ಆರೋಗ್ಯದ ಜೊತೆ ಆಟವಾಡುತ್ತಿದ್ದಾರೆ. ಗೋಲ್ಗಪ್ಪಾ ನೀರಿನ ರುಚಿಯನ್ನು ಹೆಚ್ಚಿಸಲು ಟಾಯ್ಲೆಟ್ ಕ್ಲೀನರ್ ಅನ್ನು ಸೇರಿಸಲಾಗುತ್ತಿದೆ” ಎಂದು ಬಯೋದಲ್ಲಿ ಹೇಳಲಾಗಿದೆ. ಅದಾಗ್ಯೂ “ದಯವಿಟ್ಟು ನೆನಪಿನಲ್ಲಿಡಿ ನಾನು ಜನರನ್ನು ವಂಚನೆಯಿಂದ ರಕ್ಷಿಸಲು ಮತ್ತು ಜನರಿಗೆ ಅರಿವು ಮೂಡಿಸಲು ಸ್ಕ್ರಿಪ್ಟ್ ಮಾಡಿದ ವಿಡಿಯೋ ಮಾಡುತ್ತಿದ್ದೇವೆ” ಎಂದು ಮೂಲ ಶೀರ್ಷಿಕೆಯಲ್ಲಿ ತಿಳಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ ಜ್ಞಾನ ಭಂಡಾರ್ ಎಂಬ ಫೇಸ್‌ಬುಕ್ ಅಕೌಂಟ್‌ನಿಂದ ಜನ ಜಾಗೃತಿಗಾಗಿ ಮಾಡಿದ ಸ್ಕ್ರಿಪ್ಟೆಡ್‌ ವಿಡಿಯೊವನ್ನು ತಿರುಚಿ ಮುಸ್ಲಿಂ ವ್ಯಕ್ತಿಯು ಕಲುಷಿತ ಆಹಾರ ನೀಡುವ ಮೂಲಕ ಜಿಹಾದ್ ನಡೆಸುತ್ತಿದ್ದಾನೆ ಎಂದು ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ಸುಳ್ಳು ಹೇಳಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಇಂತಹ ಕೃತ್ಯವನ್ನು ಯಾವುದೇ ಸಮುದಾಯ ಮಾಡಿದರೂ ಅದು ಅಕ್ಷಮ್ಯ, ಜನರ ಆರೋಗ್ಯದೊಂದಿಗೆ ಆಟವಾಡಬಾರದು. ವಾಸ್ತವವಾಗಿ ಹೊರಗಿನ ಆಹಾರ ಸೇವಿಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ, ಆದರಿಂದ ಹೊರಗಿನ ಆಹಾರ ಸೇವಿಸುವುದನ್ನು ಆದಷ್ಟು ಕಡಿಮೆ ಮಾಡಿದರೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.  ವೈರಲ್ ವಿಡಿಯೊದಲ್ಲಿ ಮಾಡಲಾದ ಪ್ರತಿಪಾದನೆ ಕೋಮು ದ್ವೇಷದ ಹಿನ್ನಲೆಯಲ್ಲಿದ್ದು ಇದು ಜನರನ್ನು ತಪ್ಪುದಾರಿಗೆಳೆಯುವಂತಿದೆ. ಇಂತಹ ಸುದ್ದಿಗಳನ್ನು ನಂಬುವ ಮುನ್ನ ಪರಿಶೀಲಿಸಿ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಚರಂಡಿಗೆ ಬಿದ್ದು ವ್ಯಕ್ತಿ ನಾಪತ್ತೆ! ಅಸಲೀಯತ್ತೇನು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights