FACT CHECK | LPG ಸಿಲಿಂಡರ್ಗೆ ರಾಜ್ಯ ಸರ್ಕಾರವೇ ಹೆಚ್ಚಿನ ತೆರಿಗೆ ವಿಧಿಸುತ್ತದೆ ಎಂಬುದು ನಿಜವೇ
ಗೃಹ ಬಳಕೆದಾರರು ಅಡುಗೆಗೆ ಬಳಸುವ LPG ಸಿಲಿಂಡರ್ ಬೆಲೆಯನ್ನು ವಿವರಿಸುವ ಚಾರ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಕೇಂದ್ರ ಸರ್ಕಾರವು LPG ಸಿಲಿಂಡರ್ಗೆ 24.75 ರೂ. ತೆರಿಗೆ ವಿಧಿಸುತ್ತದೆ ಮತ್ತು ರಾಜ್ಯ ಸರ್ಕಾರಗಳು 291.36 ರೂ. ತೆರಿಗೆಯನ್ನು ಸೇರಿಸುತ್ತವೆ ಎಂದು ಬಿಲ್ ರೂಪದ ಪೋಸ್ಟರ್ನಲ್ಲಿ ಉಲ್ಲೇಖಿಸಲಾಗಿದೆ. ಬೆಲೆ ವಿವರಣೆಯಲ್ಲಿ ಡೀಲರ್ನ 5.50 ರೂ. ಕಮಿಷನ್ ಕೂಡ ಸೇರಿದೆ ಮತ್ತು ಕೊನೆಯಲ್ಲಿ “ಕೇಂದ್ರ ಸರ್ಕಾರ. ತೆರಿಗೆ 5%, ರಾಜ್ಯ ಸರ್ಕಾರದ ತೆರಿಗೆ 55% ಆದ್ದರಿಂದ ದಯವಿಟ್ಟು ಅಡುಗೆ ಅನಿಲ ಬೆಲೆಯನ್ನು ಹೆಚ್ಚಿಸಿದ್ದಕ್ಕೆ ಯಾವ ಸರ್ಕಾರ ತಪ್ಪಿತಸ್ಥ ಎಂದು ಕಂಡುಹಿಡಿಯಿರಿ ಎಂದು ಹಲವರು ಬರೆದುಕೊಳ್ಳುತ್ತಿದ್ದಾರೆ.

ದೇಶೀಯ ಎಲ್ಪಿಜಿ ಬೆಲೆ ಏರಿಕೆಗೆ ಮೋದಿ ಸರ್ಕಾರವನ್ನು ತೀವ್ರವಾಗಿ ಟೀಕಿಸಿದ ಹಿನ್ನೆಲೆಯಲ್ಲಿ ಈ ಪೋಸ್ಟರ್ ಕೂಡ ವೈರಲ್ ಆಗುತ್ತಿದೆ. ‘ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಕೇಂದ್ರ ಸರ್ಕಾರ ಏರಿಕೆ ಮಾಡುತ್ತಿದೆ ಎಂದು ಆರೋಪಿಸುತ್ತಿರುವವರು ಈ ಸಂಗತಿಯನ್ನು ಮರೆತಿದ್ದಾರೆ.

LPG ಸಿಲಿಂಡರ್ ಮೇಲೆ ಕೇಂದ್ರ ಸರ್ಕಾರವು ಶೇ 5ರಷ್ಟು ತೆರಿಗೆಯನ್ನಷ್ಟೇ ವಿಧಿಸುತ್ತದೆ. ಆದರೆ, ರಾಜ್ಯ ಸರ್ಕಾರಗಳು ಶೇ 55ರಷ್ಟು ತೆರಿಗೆ ವಿಧಿಸುತ್ತಿದೆ. ಇದರಿಂದಲೇ ಎಲ್ಪಿಜಿ ಬೆಲೆ ವಿಪರೀತ ಏರಿಕೆಯಾಗಿದೆ. LPG ಸಿಲಿಂಡರ್ಗಾಗಿ ನಾವು ಪಾವತಿಸುವ ಹಣದಲ್ಲಿ ಬಹುಪಾಲ ತೆರಿಗೆರೂಪದಲ್ಲಿ ರಾಜ್ಯ ಸರ್ಕಾರಕ್ಕೇ ಹೋಗುತ್ತದೆ’ ಎಂಬ ವಿವರ ಇರುವ ಪೋಸ್ಟರ್ ಮತ್ತು ಸಂದೇಶ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಹಾಗಿದ್ದರೆ ಪೋಸ್ಟ್ರ್ನಲ್ಲಿ ಹೇಳಲಾಗುತ್ತಿರುವ ವಿಷಯಗಳು ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲಿಸಲು ಕೆಲವೊಂದು ಕೀ ವರ್ಡ್ಗಳನ್ನು ಬಳಸಿಕೊಂಡು ಘೂಗಲ್ ಸರ್ಚ್ ಮಾಡಿದಾಗ, ಪ್ರಮುಖ ಮಾಹಿತಿಗಳು ಲಭ್ಯವಾಗಿದೆ. ಅದರ ಪ್ರಕಾರ ದೇಶೀಯ ಬಳಕೆಗಾಗಿ LPGಮೇಲೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) 5% ವಿಧಿಸಲಾಗುತ್ತದೆ. ಇದನ್ನು ಕೇಂದ್ರ ಮತ್ತು ರಾಜ್ಯಗಳ ನಡುವೆ ಸಮಾನವಾಗಿ ಹಂಚಿಕೊಳ್ಳಲಾಗುತ್ತದೆ – ತಲಾ 2.5%. ಕೇಂದ್ರ ಸರ್ಕಾರ 5% ತೆರಿಗೆ ವಿಧಿಸುತ್ತದೆ. ಈ ಮೂಲಕ ರಾಜ್ಯವು 55% ತೆರಿಗೆ ವಿಧಿಸುತ್ತದೆ ಎಂಬ ಹೇಳಿಕೆ ಸುಳ್ಳು ಎಂಬುದು ಸ್ಪಷ್ಟವಾಗಿದೆ. ಜಿಎಸ್ಟಿ ಸ್ಲ್ಯಾಬ್ ಅನ್ನು ಕೇಂದ್ರ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿಯ ವೆಬ್ಸೈಟ್ನಲ್ಲಿ ಪರಿಶೀಲಿಸಬಹುದಾಗಿದೆ.

ಎಲ್ಪಿಜಿ ಸಿಲಿಂಡರ್ ಮೇಲೆ ಕೇಂದ್ರ ಸರ್ಕಾರವು ಶೇ 5ರಷ್ಟು ಜಿಎಸ್ಟಿ ವಿಧಿಸುತ್ತದೆ. ಇದರಲ್ಲಿ ಕೇಂದ್ರ ಸರ್ಕಾರಕ್ಕೆ ಶೇ 2.50ರಷ್ಟು ಮತ್ತು ರಾಜ್ಯ ಸರ್ಕಾರಕ್ಕೆ ಶೇ 2.50ರಷ್ಟು ಹಂಚಿಕೆಯಾಗುತ್ತದೆ. ರಾಜ್ಯ ಸರ್ಕಾರವು ಯಾವದೇ ಹೆಚ್ಚಿನ ತೆರಿಗೆ ವಿಧಿಸುವುದಿಲ್ಲ. ಬದಲಿಗೆ ಕೇಂದ್ರ ಸರ್ಕಾರವೇ ಎಲ್ಪಿಜಿ ತಯಾರಿಕೆಯ ಕಚ್ಚಾವಸ್ತುವಾದ ನೈಸರ್ಗಿಕ ಅನಿಲದ (ಸಾಂದ್ರೀಕೃತ) ಮೇಲೆ ಶೇ 5ರಷ್ಟು ಆಮದು ಸುಂಕ, ಶೇ 14ರಷ್ಟು ಹೆಚ್ಚುವರಿ ಆಮದು ಸುಂಕ ಮತ್ತು ಶೇ 14ರಷ್ಟು ಎಕ್ಸೈಸ್ ಸುಂಕ ವಿಧಿಸುತ್ತದೆ. ನೈಸರ್ಗಿಕ ಅನಿಲದ ಮೇಲೆ ಶೇ 5ರಷ್ಟು ಆಮದು ಸುಂಕ ವಿಧಿಸುತ್ತದೆ. ಕಚ್ಚಾತೈಲ ಸಂಸ್ಕರಣೆ ಮೂಲಕವೂ ಎಲ್ಪಿಜಿ ತಯಾರಿಸಲಾಗುತ್ತದೆ. ಕಚ್ಚಾತೈಲದ ಮೇಲೆ ಕೇಂದ್ರ ಸರ್ಕಾರವು ₹51ರಷ್ಟು ಆಮದು ಸುಂಕ, ₹51ರಷ್ಟು ಎಕ್ಸೈಸ್ ಸುಂಕ ಮತ್ತು ಪ್ರತಿ ಟನ್ಗೆ ₹6,700ರಷ್ಟು ಹೆಚ್ಚುವರಿ ಎಕ್ಸೈಸ್ ಸುಂಕ ವಿಧಿಸುತ್ತದೆ. ಈ ಪ್ರಕಾರ LPG ಸಿಲಿಂಡರ್ ಮೇಲೆ ಕೇಂದ್ರ ಸರ್ಕಾರವು ಹೆಚ್ಚಿನ ತೆರಿಗೆ ವಿಧಿಸದೇ ಇದ್ದರೂ, LPG ತಯಾರಿಕೆಯಲ್ಲಿ ಬಳಸುವ ಕಚ್ಚಾತೈಲದ ಮೇಲೆ ಭಾರಿ ಪ್ರಮಾಣದ ತೆರಿಗೆ ವಿಧಿಸುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ, ದೇಶೀಯ LPG ಮೇಲೆ ಕೇಂದ್ರ (5%) ಗಿಂತ ರಾಜ್ಯಗಳು ಹೆಚ್ಚಿನ ತೆರಿಗೆ (55%) ವಿಧಿಸುತ್ತವೆ ಎಂಬ ವೈರಲ್ ಹೇಳಿಕೆ ಸುಳ್ಳು. ಇದಕ್ಕೆ 5% ಜಿಎಸ್ಟಿ ತೆರಿಗೆ ವಿಧಿಸಲಾಗುತ್ತದೆ, ಇದನ್ನು ಕೇಂದ್ರ ಮತ್ತು ರಾಜ್ಯಗಳ ನಡುವೆ ಸಮಾನವಾಗಿ ಹಂಚಿಕೊಳ್ಳಲಾಗುತ್ತದೆ. ದೇಶೀಯ ಎಲ್ಪಿಜಿ ಬೆಲೆ ಏರಿಕೆಗೆ ಟೀಕೆಗಳು ಕೇಳಿಬಂದಿವೆ, ಆದರೆ ಮೋದಿ ಸರ್ಕಾರವನ್ನು ಬೆಂಬಲಿಸಲು ಈ ಸುಳ್ಳು ಹೇಳಿಕೆಯನ್ನು ಪ್ರಚಾರ ಮಾಡಲಾಗಿದೆ. ಆದರೆ ವಾಸ್ತವವಾಗಿ ಕೇಂದ್ರ ಸರ್ಕಾರ ಅಡುಗೆ ಅನಿಲ ಸಿಲಿಂಡರ್ವೊಂದಕ್ಕೆ ಹೆಚ್ಚಿನ ತೆರಿಗೆ ವಿಧಿಸುತ್ತದೆ ಹೊರತು ರಾಜ್ಯ ಸರ್ಕಾರವಲ್ಲ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಜಿಮ್ನಲ್ಲಿ ಶೇಕ್ ತನ್ನ ಪತ್ನಿಯರ ಹಿಜಾಬ್ ತೆಗೆಸುತ್ತಿದ್ದಾರೆ ಎನ್ನುವ ವಿಡಿಯೋದ ಅಸಲೀಯತ್ತೇನು ಗೊತ್ತೇ?

