ಆಮ್ ಆದ್ಮಿ ಪಕ್ಷವು ಜನಸಾಮಾನ್ಯರಿಗಾಗಿ ತಂದಿರುವ ವಾರ್ಡ್ ನಿರ್ವಹಣಾ ಕೈಪಿಡಿ ಮತ್ತು ವೆಬ್ ಸೈಟ್ ಬಿಡುಗಡೆ

ಬೆಂಗಳೂರಿನ ಜನರು ಬೆಂಗಳೂರನ್ನು ಮಾದರಿ ನಗರವನ್ನಾಗಿ ಮಾಡಲು ನಾನಾ ರೀತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇಂತಹ ಜನರಿಗೆ ನೆರವು ನೀಡಿ, ಅವರನ್ನು ಒಳಗೊಂಡು ಹೊಸ ಬೆಂಗಳೂರನ್ನು ಕಟ್ಟುವ ನಿಟ್ಟಿನಲ್ಲಿ ಆಮ್ ಆದ್ಮಿ ಪಕ್ಷವು ಸಕ್ರಿಯವಾಗಿದೆ. ಪ್ರತೀ ಬೆಂಗಳೂರಿಗರನ್ನೂ ನಾಗರಿಕ ಪ್ರಜ್ಞೆ ಜಾಗೃತಗೊಳಿಸುವ ಸಲುವಾಗಿ ಮತ್ತು ಬಿಬಿಎಂಪಿಯ ವ್ಯಾಪ್ತಿಯಲ್ಲಿರುವ ವಾರ್ಡ್ಗಳ ಕುರಿತಾದ ಸಮಗ್ರ ಮಾಹಿತಿಯನ್ನೊಳಗೊಂಡಿರುವ ಕೈಪಿಡಿಯನ್ನು ರೂಪಿಸಿದೆ.

ಕರ್ನಾಟಕದ ಪಾರಂಪಾರಿಕ ರಾಜಕೀಯ ಪಕ್ಷಗಳು ಅಧಿಕಾರದಾಹ ಮತ್ತು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದು, ಜನರನ್ನು ಅಧಿಕಾರದಿಂದ ದೂರವಿಟ್ಟು ಪ್ರಜಾಪ್ರಭುತ್ವಕ್ಕೆ ಅಪಚಾರಮಾಡಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಸರಿಯಾದ ವಾರ್ಡ್ ಸಮಿತಿ ರಚನೆಯಾಗದಂತೆ ಸಕಲ ಪ್ರಯತ್ನ ನಡೆಸಿದ್ದವು. ಆದರೆ ಆಮ್ ಆದ್ಮಿ ಪಕ್ಷವು ಜನಸಾಮಾನ್ಯರ ಬೆಂಬಲಕ್ಕೆ ನಿಂತಿದೆ. ಕಣ್ಣಿಗೆ ಬಟ್ಟೆಕಟ್ಟಿಕೊಂಡು ನಡೆಯುತ್ತಿರುವ ವಾರ್ಡ್ ಮಟ್ಟದ ಎಲ್ಲಾ ಕೆಲಸಗಳ ಪರದೆಯನ್ನು ಸರಿಸಿ ಪಾರದರ್ಶಕವಾಗುವಂತೆ ಮಾಡುವಲ್ಲಿ ಸಕ್ರಿಯವಾಗಿದೆ.

ಆಮ್ ಆದ್ಮಿ ಪಾರ್ಟಿಯ ನಡೆ ಕೇವಲ ಜನರ ನಾಗರಿಕ ಸಮಸ್ಯೆಗಳ ಪರಿಹಾರವಷ್ಟೇ ಅಲ್ಲ, ಬೆಂಗಳೂರು ನಗರವನ್ನು ವಿಶ್ವದರ್ಜೆಯ ನಗರವನ್ನಾಗಿ ಮಾಡುವ ಕನಸನ್ನೂ ಹೊಂದಿದೆ. ಇದಕ್ಕಾಗಿ ದೆಹಲಿ ಮಾದರಿಯಲ್ಲಿ ಸಮಗ್ರ ಮುನ್ನೋಟ ಮತ್ತು ನವೀನ ಚಿಂತನೆಯುಳ್ಳ ಕಾರ್ಯಕರ್ತರ ತಂಡವು ನಿವೃತ್ತ ಹಿರಿಯ ಐ.ಎ.ಎಸ್ ಅಧಿಕಾರಿ ಶ್ರೀಮತಿ ರೇಣುಕಾ ವಿಶ್ವನಾಥನ್ ಅವರ ಮಾರ್ಗದರ್ಶನದಲ್ಲಿ ಪ್ರತಿ ವಾರ್ಡ್ಗಳಗೂ ವಿಸ್ತೃತವಾದ ವಾರ್ಡ್ ನಿರ್ವಹಣಾ ಕೈಪಿಡಿ ಹೊರತಂದಿದೆ.

ಸುಮಾರು 120ಕ್ಕೂ ಹೆಚ್ಚು ವಾರ್ಡ್ ಗಳ ಜನರು ತಮ್ಮ ವಾರ್ಡ್ ನಿರ್ವಹಣಾ ಕೈಪಿಡಿಯನ್ನು ಕೇಳುತ್ತಿದ್ದಾರೆ. ಹಾಗಾಗಿ ಕೆಂಪೇಗೌಡ ನಗರ(1), ಚೌಡೇಶ್ವರಿ ನಗರ(2), ಯಲಹಂಕ ಉಪನಗರ(4), ರಾಧಾಕೃಷ್ಣ ದೇವಸ್ಥಾನ(18), ಸಂಜಯನಗರ(19), ಗಂಗಾನಗರ(20), ಜೆ.ಸಿ.ನಗರ(46), ದೊಡ್ಡನೆಕ್ಕುಂದಿ(85), ಶಾಂತಲಾನಗರ(111), ದೊಮ್ಮಲೂರು(112) ಮತ್ತು ಶಾಂತಿನಗರ(117) ವಾರ್ಡ್ಗೆಳಲ್ಲಿ ತಂಡವು ವಿವಿಧ ವಿಭಾಗಗಳ ಸಕಲ ಮಾಹಿತಿಯನ್ನು ಸಂಗ್ರಹಿಸಿ, ಅಲ್ಲಿಯ ಅಧಿಕಾರಿ ಹಾಗೂ ಜನಪ್ರತಿನಿಧಿಗಳಿಂದ ವಾರ್ಡಿನ ಸಮಗ್ರ ಅಭಿವೃಧಿಗೆ ಬೇಕಾದ ಕೆಲಸ ಮಾಡಿಸಲು, ಅವರನ್ನು ಜವಾಬ್ದಾರರನ್ನಾಗಿ ಮಾಡಲು, ಈ ಕೈಪಿಡಿ ಹೊರತಂದಿದೆ. ಈಗಾಗಲೇ ಸೆಪ್ಟಂಬರ್ ತಿಂಗಳಿನಲ್ಲಿ ದೊಡ್ಡಾನೆಕುಂದಿ ಮತ್ತು ಶಾಂತಲಾನಗರಗಳ ವಾರ್ಡ್ ಕೈಪಿಡಿಯನ್ನು ಬಿಡುಗಡೆ ಮಾಡಿದ್ದೇವೆ. ಮುಂಬರುವ ದಿನಗಳಲ್ಲಿ ಉಳಿದ ವಾರ್ಡುಗಳ ಮಾಹಿತಿ ಕೈಪಿಡಿಗಳನ್ನೂ ಹೊರತರಲಾಗುವುದು.

ವಾರ್ಡ್ ಕೈಪಿಡಿಗಳನ್ನು ಮತ್ತು ಅವುಗಳ ಮಾಹಿತಿಯನ್ನು ಸಾರ್ವಜನಿಕರು ನೇರವಾಗಿ ಪಡೆದುಕೊಳ್ಳುವಂತೆ ಮಾಡಲು http://citizenswardhandbook.in/ ವೆಬ್ ಸೈಟ್ ಅನ್ನು ರೂಪಿಸಿದ್ದೇವೆ. ಈ ವೆಬ್ ಸೈಟ್ ನಲ್ಲಿ ಪ್ರತಿ ವಾರ್ಡ್ಗೆ ಸಂಬಂಧಿಸಿದ ಮಾಹಿತಿಯನ್ನು ಜನರು ಪಡೆದುಕೊಳ್ಳಬಹುದು.

ವಾರ್ಡ್ ಕೈಪಿಡಿಯು ಜನಸಾಮಾನ್ಯರಿಗೆ ಬಿಬಿಎಂಪಿಯಿಂದ ತಮ್ಮ ತಮ್ಮ ವಾರ್ಡಿನ ಕೆಳಕಂಡ ಕೆಲಸ ಮಾಡಿಸಿಕೊಳ್ಳಲು ಅನುಕೂಲವಾಗುತ್ತದೆ.
• ವಾರ್ಡ್ ನಿರ್ವಹಣೆ
• ವಾರ್ಡಿನ ಮುಂಗಡ ಪತ್ರ ತಯಾರಿಕೆ
• ವಾರ್ಡಿನ ಸಮಗ್ರ ಅಭಿವೃದ್ಧಿಯ ನಕ್ಷೆ ತಯಾರಿಸುವುದು
• ವಾರ್ಡಿನ ಪೌರ ಸಮಸ್ಯೆಗಳನ್ನು ಸಮರ್ಪಕವಾಗಿ ಪರಿಹರಿಸುವುದು.

ಈ ಕೈಪಿಡಿಯಿಂದ ಆಡಳಿತದಲ್ಲಿ ಪಾರದರ್ಶಕತೆ, ಜವಾಬ್ದಾರಿ ಮತ್ತು ಜನರ ಸಹಭಾಗಿತ್ವಕ್ಕೆ ಅವಕಾಶ ಸಿಗುತ್ತದೆ. ಬಿಬಿಎಂಪಿಯ ಆಡಳಿತದಲ್ಲಿ ಜನರ ಸಹಭಾಗಿತ್ವಕ್ಕೆ ಈಗಿರುವ ಅಡೆ-ತಡೆಗಳನ್ನು ಹೋಗಲಾಡಿಸಲಾಗುವುದು. ಆಮ್ ಆದ್ಮಿ ಪಕ್ಷವು ನಾಗರಿಕರಿಗೆ ಈ ಕೈಪಿಡಿಯ ಬಳಸಿಕೊಂಡು ಬೆಂಗಳೂರಿನ ಆಡಳಿತದಲ್ಲಿ ಸಹಭಾಗಿಯಾಗಲು ಕರೆ ನೀಡುತ್ತಿದೆ. ತಮ್ಮ ಅಮೂಲ್ಯವಾದ ಅನಿಸಿಕೆಯನ್ನು ಅವರು ನಮ್ಮೊಂದಿಗೆ ಹಂಚಿಕೊಳ್ಳಬಹುದಾಗಿದೆ.

ಪತ್ರಿಕಾ ಗೋಷ್ಟಿಯಲ್ಲಿ ನಿವೃತ್ತ ಐಎಎಸ್ ಅಧಿಕಾರಿ ರೇಣುಕಾ ವಿಶ್ವನಾಥನ್ ಮತ್ತು ರಾಜ್ಯ ಜಂಟಿ ಕಾರ್ಯದರ್ಶಿ ದರ್ಶನ್ ಜೈನ್ ಇದ್ದರು.

ಮೋಹನ್ ದಾಸರಿ
ಅಧ್ಯಕ್ಷರು, ಆಮ್ ಆದ್ಮಿ ಪಕ್ಷ ಬೆಂಗಳೂರು
9900120071

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights