FACT CHECK | ಜಿಮ್‌ನಲ್ಲಿ ಶೇಕ್ ತನ್ನ ಪತ್ನಿಯರ ಹಿಜಾಬ್ ತೆಗೆಸುತ್ತಿದ್ದಾರೆ ಎನ್ನುವ ವಿಡಿಯೋದ ಅಸಲೀಯತ್ತೇನು ಗೊತ್ತೇ?

ಜಿಮ್‌ನ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ  ವೈರಲ್ ಆಗುತ್ತಿದೆ. ಇದರಲ್ಲಿ ಶೇಖ್ ತನ್ನ ಇಬ್ಬರು ಪತ್ನಿಯರೊಂದಿಗೆ ಜಿಮ್‌ಗೆ ಆಗಮಿಸಿ ಇದ್ದಕ್ಕಿದ್ದಂತೆ ಇಬ್ಬರ ಹಿಜಾಬ್ ಅನ್ನು ತೆಗೆದುಹಾಕುತ್ತಾನೆ. ಈ ವಿಡಿಯೋವನ್ನು ಮೂಲ ಮುಸ್ಲಿಮರು ಆಧುನಿಕ ಜೀವನವನ್ನು ಅಳವಡಿಸಿಕೊಳ್ಳುತ್ತಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಮೂಲ ಮುಸ್ಲಿಮರು ಇಸ್ಲಾಂನ ಮೂಢನಂಬಿಕೆಗಳನ್ನು ತ್ಯಜಿಸುವ ಮೂಲಕ ಆಧುನಿಕ ಜೀವನವನ್ನು ಅಳವಡಿಸಿಕೊಳ್ಳುತ್ತಿದ್ದಾರೆ ಆದರೆ ಭಾರತದಲ್ಲಿ ನಕಲಿ ಮತಾಂತರಿಗಳು ಇನ್ನೂ ಮೂಢನಂಬಿಕೆಯನ್ನು ಹಿಡಿದಿಟ್ಟುಕೊಂಡಿದ್ದಾರೆ. ಎಂಬ ಬರಹದೊಂದಿಗೆ @TheBahubali_IND ಎಂಬ ಎಕ್ಸ್‌ ಬಳಕೆದಾರರು ಶೇಖ್ ಅವರ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ

ಇದೇ ವಿಡಿಯೋವನ್ನು ಏಪ್ರಿಲ್ 3 ರಂದು ಯೂಟ್ಯೂಬ್ ಚಾನೆಲ್‌ನಲ್ಲಿಯೂ ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ : 

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವಿಡಿಯೋದ ಕೀ ಫ್ರೇಮ್‌ಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಮಾರ್ಚ್ 18, 2024 ರಂದು ಅಪ್‌ಲೋಡ್ ಮಾಡಲಾದ ವೀಡಿಯೊ Sheiktocantinense ಎಂಬ ಫೇಸ್‌ಬುಕ್ ಪುಟದಲ್ಲಿಯೂ ಇದೇ ಕಂಡುಬಂದಿದ್ದು, ಈ ಅಕೌಂಟ್‌ನಲ್ಲಿ ಇದೇ ರೀತಿಯ ಬೇರೆ ಬೇರೆ ವಿಡಿಯೋಗಳನ್ನುಇಲ್ಲಿ ನೋಡಬಹುದು. ವೈರಲ್ ಆದ ಈ ವಿಡಿಯೋ ಕೂಡ ಇದರ ಒಂದು ಭಾಗವಾಗಿದೆ.

ವಾಸ್ತವವಾಗಿ ಈ ವಿಡಿಯೋಗಳನ್ನು ಸ್ಕ್ರಿಪ್ಟ್‌ ಮೂಲಕ ರಚಿಸಿ ತಮ್ಮ ಸಾಮಾಜಿಕ ಮಾಧ್ಯಮಗಳ ಖಾತೆಯಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋಗಳನ್ನು ರಿಯಲ್ ವಿಡಿಯೋಗಳು ಎಂಬಂತೆ ಇತರೆ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ತಪ್ಪು ಮಾಹಿತಿಯೊಂದಿಗೆ ಹಂಚಿಕೊಳ್ಳುತ್ತಿರುವುದು ತನಿಖೆಯಲ್ಲಿ ಕಂಡುಬಂದಿದೆ.

फेसबुक प्रोफाइल देखें

ಮಾರ್ಚ್ 18, 2024 ರಂದು ಅಪ್‌ಲೋಡ್ ಮಾಡಲಾದ ವಿಡಿಯೋ ಶೇಕ್ಟೋಕಾಂಟಿನೆನ್ಸ್ ಎಂಬ ಫೇಸ್‌ಬುಕ್ ಪುಟದಲ್ಲಿಯೂ ಲಭ್ಯವಾಗಿದೆ. ಅವರು ಫೇಸ್‌ಬುಕ್ ಪುಟಕ್ಕೆ ಭೇಟಿ ನೀಡಿ ಪ್ರೊಫೈಲ್‌ ಚೆಕ್ ಮಾಡಿದಾಗ, ಆ ಬಳಕೆದಾರರು ವಿಡಿಯೋ ಕಂಟೆಂಟ್ ಕ್ರಿಯೇಟರ್ ಎಂಬ ಮಾಹಿತಿ ಲಭ್ಯವಾಗಿದೆ.

The video was created by Brazilian content creator Sheik do Tocantis.

‘ಸ್ಕೈ ಫಿಟ್ ಅಕಾಡೆಮಿಯಾಸ್’ ಎಂಬುದು ಬ್ರೆಜಿಲ್‌ನಲ್ಲಿರುವ ಜಿಮ್‌ಗಳ ಸರಪಳಿಯ ಹೆಸರಾಗಿದೆ. ಬ್ರೆಜಿಲಿಯನ್ ಕಂಟೆಂಟ್ ಕ್ರಿಯೇಟರ್‌ ರಚಿಸಿರುವ ವಿಡಿಯೋಗಳನ್ನು ಶೇಖ್ ತನ್ನ ಪತ್ನಿಯರನ್ನು ಜಿಮ್‌ಗೆ ಕರೆದೊಯ್ಯುದು ಹಿಜಾಬ್ ತೆಗೆಸಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

The video was created by Brazilian content creator Sheik do Tocantis.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ದುಬೈ ಶೇಕ್  ಪತ್ನಿಯರು ತಮ್ಮ ಹಿಜಾಬ್ ತೆಗೆದು ಜಿಮ್ ಬಟ್ಟೆಯಲ್ಲಿ ವ್ಯಾಯಾಮ ಮಾಡುವ ವಿಡಿಯೋ ಮೂಲದಲ್ಲಿ ಸ್ಕ್ರಿಪ್ಟ್‌ ಮಾಡಲಾಗಿದೆ. ವೀಡಿಯೊದಲ್ಲಿ ಶೇಖ್ ಆಗಿ ನಟಿಸುತ್ತಿರುವ ವ್ಯಕ್ತಿಯೊಬ್ಬ ವಿಡಿಯೋ ಕಂಟೆಂಟ್ ಕ್ರಿಯೇಟರ್‌. ಆದರೆ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಭಾರತದ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಈ ವಿಡಿಯೋವನ್ನು ದಾರಿತಪ್ಪಿಸುವ ಹೇಳಿಕೆಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.

FACT CHECK | ದೇವಾಲಯದ ದೇಣಿಗೆ ಹಣ ಬಳಸಿಕೊಂಡು ಮೋಜು ಮಾಡುತ್ತಿದ್ದಾಗ ಸಿಕ್ಕಿಬಿದ್ದ ಅರ್ಚಕ ಎಂದು ನಕಲಿ ಪೋಸ್ಟ್‌ ಹಂಚಿಕೆ

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ದೇವಾಲಯದ ದೇಣಿಗೆ ಹಣ ಬಳಸಿಕೊಂಡು ಮೋಜು ಮಾಡುತ್ತಿದ್ದಾಗ ಸಿಕ್ಕಿಬಿದ್ದ ಅರ್ಚಕ ಎಂದು ನಕಲಿ ಪೋಸ್ಟ್‌ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights