FACT CHECK | ದೇವಾಲಯದ ದೇಣಿಗೆ ಹಣ ಬಳಸಿಕೊಂಡು ಮೋಜು ಮಾಡುತ್ತಿದ್ದಾಗ ಸಿಕ್ಕಿಬಿದ್ದ ಅರ್ಚಕ ಎಂದು ನಕಲಿ ಪೋಸ್ಟ್‌ ಹಂಚಿಕೆ

ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ವೊಂದು ವೈರಲ್ ಆಗಿದ್ದು, ದೇವಸ್ಥಾನದ ಅರ್ಚಕರೊಬ್ಬರು OYO ಹೋಟೆಲ್‌ನಲ್ಲಿ ದೇವಾಲಯದ ದೇಣಿಗೆ ಹಣವನ್ನು ಬಳಸಿಕೊಂಡು ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ ಎಂದು ಹೇಳಲಾಗಿದೆ. ಸಾರ್ವಜನಿಕರು ಅವರನ್ನು ತೀವ್ರವಾಗಿ ಥಳಿಸಿದ್ದಾರೆ ಎಂದು ಹಂಚಿಕೊಳ್ಳಲಾಗಿದೆ.

IND ಸ್ಟೋರಿ  ಎಂಬ ಎಕ್ಸ್‌ ಖಾತೆಯಿಂದ ಪೋಸ್ಟ್ ಅನ್ನು ಹಂಚಿಕೊಳ್ಳಲಾಗಿದ್ದು , “ಕಳ್ಳರು ಮತ್ತು ದರೋಡೆಕೋರರು ಸಂತರ ವೇಷದಲ್ಲಿ ತಿರುಗಾಡುತ್ತಿದ್ದಾರೆ. ಈಗ ಸಾಧುಗಳು ಸಹ ಪ್ಲೇಬಾಯ್‌ಗಳ ವೇಷದಲ್ಲಿ ತಿರುಗಾಡುತ್ತಿದ್ದಾರೆ” ಎಂದು ಬರೆದು, ಅರೆ ಬರೆ ಬಟ್ಟೆ ಧರಿಸಿದ ಯುವತಿಯೊಬ್ಬಳ ಫೋಟೊ ಮತ್ತು ದೇವಸ್ಥಾನದ ಚಿತ್ರವನ್ನು ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾಗಿದೆ.

ಇದೇ ರೀತಿಯ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದು ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಲು, ಪೋಸ್ಟ್‌ನಲ್ಲಿರುವ ಎರಡು ಚಿತ್ರಗಳನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ದೇವಸ್ಥಾನದ ಅರ್ಚಕರೊಂದಿಗೆ ಮಹಿಳೆ ಇರುವ ಇದೇ ರೀತಿಯ ಫೋಟೊವನ್ನು ಹೋಲುವ ಮತ್ತೊಂದು  ಚಿತ್ರ Pinterest ಮತ್ತು Instagram ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಲಭ್ಯವಾಗಿದೆ. ಆದರೆ ಈ ಫೋಟೊದಲ್ಲಿ ಅರ್ಚಕರ ಚಿತ್ರದ ಜಾಗದಲ್ಲಿ ಬೇರೆ ವ್ಯಕ್ತಿ ಇರುವುದನ್ನು ಕಾಣಬಹುದು.

Claim of Priest’s Debauchery at OYO Hotel Using Temple Donation Funds is False

Pinterest ಮತ್ತು Instagram ನಿಂದ ಎರಡೂ ಪೋಸ್ಟ್‌ಗಳಲ್ಲಿ ಮಹಿಳೆಯೊಂದಿಗೆ ಅರ್ಚಕತ ಚಿತ್ರ ವಿಭಿನ್ನವಾಗಿರುವುದನ್ನು ಕಾಣಬಹದು. ಆದಾಗ್ಯೂ, ಈ ವ್ಯಕ್ತಿಯ ಬಗ್ಗೆ Google ನಲ್ಲಿ ವ್ಯಾಪಕವಾಗಿ ಸರ್ಚ್ ಮಾಡಿದಾಗ, ನಮಗೆ ಯಾವುದೇ ವಿಶ್ವಾಸಾರ್ಹ ವರದಿಗಳು ಕಂಡುಬಂದಿಲ್ಲ. ಇದು ಚಿತ್ರವನ್ನು ಡಿಜಿಟಲ್ ಆಗಿ ಮಾರ್ಫ್ ಮಾಡಿರಬಹುದು ಎಂದು ನಮಗೆ ಅನುಮಾನ ಮೂಡಿಸಿತು.

Shree Gaondevi Mandir

ದೇವಾಲಯ ದೇಣಿಗೆ ನಿಧಿಯನ್ನು ಬಳಸಿಕೊಂಡು OYO ಹೋಟೆಲ್‌ನಲ್ಲಿ ದೇವಸ್ಥಾನದ ಅರ್ಚಕ ಸರಸ ಸಲ್ಲಾಪ ಮಾಡುತ್ತಿದ್ದಾರೆ ಎಂಬುದು ಸುಳ್ಳು. ಮತ್ತಷ್ಟು ಮಾಹಿತಿಗಾಗಿ, ವೈರಲ್ ಪೋಸ್ಟ್‌ನಲ್ಲಿ ತೋರಿಸಿರುವ ದೇವಾಲಯದ ಫೋಟೊವನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಜಸ್ಟ್ ಡಯಲ್ ವೆಬ್‌ಸೈಟ್‌ನಲ್ಲಿ ಅದೇ ಚಿತ್ರವನ್ನು ಕಂಡುಕೊಂಡಿದ್ದೇವೆ. ವೈರಲ್ ಪೋಸ್ಟ್‌ನಲ್ಲಿ ಕಂಡುಬರುವ ಅದೇ ಫ್ರೇಮ್ ಚಿತ್ರದಲ್ಲಿದೆ, ಇದರಲ್ಲಿ ಸ್ಕೂಟಿಯಲ್ಲಿದ್ದ ಇಬ್ಬರು ಯುವಕರು, ಒಬ್ಬ ಮಹಿಳೆ ಮತ್ತು ಟ್ರಕ್ ಅನ್ನು ನೋಡಬಹುದು.

Shree Gaondevi Mandir in Dombivli.

ಜಸ್ಟ್ ಡಯಲ್‌ನಲ್ಲಿ ದೊರೆತ ಮಾಹಿತಿಯ ಪ್ರಕಾರ, ಈ ಚಿತ್ರವು ಡೊಂಬಿವ್ಲಿಯ ಮನ್ಪಾದ ರಸ್ತೆಯಲ್ಲಿರುವ ‘ಶ್ರೀ ಗಾಂದೇವಿ ಮಂದಿರ’ದದ್ದಾಗಿದೆ. ಈ ಚಿತ್ರವು ಕಳೆದ 5 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ಲಭ್ಯವಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಜಸ್ಟ್ ಡಯಲ್ ವೆಬ್‌ಸೈಟ್‌ನಲ್ಲಿ ಈ ದೇವಾಲಯದ ಸಂಪರ್ಕ ಮಾಹಿತಿಯಲ್ಲಿ ಪಟ್ಟಿ ಮಾಡಲಾದ ಫೋನ್ ಸಂಖ್ಯೆಯನ್ನು ನಾವು ಕಂಡುಕೊಂಡಿದ್ದೇವೆ. ನಾವು ಈ ಸಂಖ್ಯೆಯನ್ನು ಸಂಪರ್ಕಿಸಲು ಪ್ರಯತ್ನಿಸಿದೆವು, ಆದರೆ ಅದು ಲಭ್ಯವಿರಲಿಲ್ಲ. ನಂತರ ನಾವು ಗೂಗಲ್ ಮ್ಯಾಪ್‌ನಲ್ಲಿ ಪರಿಶೀಲಿಸಿದಾಗ ಡೊಂಬಿವ್ಲಿಯ ‘ಶ್ರೀ ಗಾಂದೇವಿ ಮಂದಿರ’ದ ಸುತ್ತಲೂ ಹಲವಾರು ವಸತಿ ಮತ್ತು ವಾಣಿಜ್ಯ ಸಂಸ್ಥೆಗಳು ಇವೆ ಎಂದು ಕಂಡುಬಂದಿದೆ. ಇವುಗಳಲ್ಲಿ, ನಾವು ಆದಿತ್ಯ ಟ್ರಾವೆಲ್ಸ್ ಅನ್ನು ಸಂಪರ್ಕಿಸಿದ್ದೇವೆ. ಪ್ರಯಾಣ ಸಂಸ್ಥೆಯ ಮಾಲೀಕ ಆದಿತ್ಯ, ಈ ದೇವಾಲಯಕ್ಕೆ ಸಂಬಂಧಿಸಿದಂತೆ ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ನಮಗೆ ತಿಳಿಸಿದರು – ದೇವಾಲಯದ ಅರ್ಚಕರನ್ನು ಥಳಿಸಲಾಗಿಲ್ಲ, ಅಥವಾ ಅವರು ಎಂದಿಗೂ ಹೋಟೆಲ್‌ನಲ್ಲಿ ಸಿಕ್ಕಿಬಿದ್ದಿಲ್ಲ ಎಂದಿದ್ದಾರೆ.

ಮತ್ತಷ್ಟು ಮಾಹಿತಿಗಾಗಿ,  ಥಾಣೆ ಜಿಲ್ಲೆಯ ಡೊಂಬಿವ್ಲಿಯ ವಿಭಾಗ ಪ್ರದೇಶದ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಸುಹಾಸ್ ಹೆಮಾಡೆ ಅವರನ್ನು ಸಂಪರ್ಕಿಸಿ ಮಾತನಾಡಿದಾಗ, ಈ ಪೋಸ್ಟ್ ಸಂಪೂರ್ಣವಾಗಿ ನಕಲಿ ಎಂದು  ತಿಳಿಸಿದರು. ಶ್ರೀ ಗಾಂದೇವಿ ಮಂದಿರದ ಅರ್ಚಕರ ಮೇಲೆ ಯಾರೂ ಹಲ್ಲೆ ನಡೆಸಿಲ್ಲಎಂದರು.

ಒಟ್ಟಾರೆಯಾಗಿ ಹೇಳುವುದಾದರೆ, OYO ಹೋಟೆಲ್‌ನಲ್ಲಿ ದೇವಾಲಯದ ಅರ್ಚಕರೊಬ್ಬರು ದೇಣಿಗೆ ಹಣವನ್ನು ಬಳಸಿಕೊಂಡು ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ ಎಂದು ಹೇಳುವ ವೈರಲ್ ಪೋಸ್ಟ್ ಸಂಪೂರ್ಣವಾಗಿ ನಕಲಿ. ಪೋಸ್ಟ್‌ನೊಂದಿಗೆ ಹಂಚಿಕೊಳ್ಳಲಾಗುತ್ತಿರುವ ಮಹಿಳೆಯೊಂದಿಗೆ ಅರ್ಚಕರ ಚಿತ್ರವೂ ಡಿಜಿಟಲ್ ಆಗಿ ಮಾರ್ಫ್ ಮಾಡಲಾದಂತೆ ಕಾಣುತ್ತದೆ. ಹೆಚ್ಚುವರಿಯಾಗಿ, ಪೋಸ್ಟ್‌ನಲ್ಲಿ ತೋರಿಸಿರುವ ದೇವಾಲಯವು ಡೊಂಬಿವ್ಲಿಯ ಶ್ರೀ ಗಾಂದೇವಿ ಮಂದಿರವಾಗಿದ್ದು, ಅಲ್ಲಿ ಅಂತಹ ಯಾವುದೇ ಘಟನೆ ಸಂಭವಿಸಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.  ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ತಹವ್ವೂರ್ ರಾಣಾ ಬಗ್ಗೆ ಡಿಂಪಲ್ ಯಾದವ್ ಅವರ ಹೇಳಿಕೆ ಎಂದು ಸುಳ್ಳು ಪೋಸ್ಟ್‌ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights