Big Breaking: ಒಂದು ವರ್ಷದ ರೈತ ಹೋರಟಕ್ಕೆ ಜಯ; ಕೃಷಿ ಕಾಯ್ದೆ ವಾಪಸ್ ಪಡೆಯುತ್ತೇವೆ ಎಂದ ಮೋದಿ!

ದೆಹಲಿ ಗಡಿಗಳು ಸೇರಿದಂತೆ ದೇಶದಾದ್ಯಂತ ನಡೆಯುತ್ತಿರುವ ರೈತ ಹೋರಾಟ ಒಂದು ವರ್ಷ ಪೂರೈಸಲು ಇನ್ನೇನು ಒಂದುವಾರ ಇರುವಾಗ ಪ್ರಧಾನಿ ನರೇಂದ್ರ ಮೋದಿ 2020ರ ನವೆಂಬರ್‌ 26ರಂದು ಜಾರಿಗೆ ತಂದೆ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಘೋಷಿಸಿದ್ದಾರೆ.

ಶುಕ್ರವಾರ ಬೆಳಗ್ಗೆ 9 ಗಂಟೆಗೆ ದೇಶವನ್ನುದ್ದೇಶಿಸಿ ಮಾತನಾಡಿದ ಮೋದಿ ತಮ್ಮ ಸರ್ಕಾರ ರೈತರ ಹಿತಕ್ಕಾಗಿ ಏನೆಲ್ಲಾ ಯೋಜನೆಗಳನ್ನು ಜಾರಿಗೆ ತಂದಿದೆ, ರೈತ ಕಾರ್ಯಕ್ರಮಗಳ ಬಜೆಟ್‌ ಎಷ್ಟು ಹೆಚ್ಚಿಸಿದೆ ಎಂಬ ವಿವರಗಳ ಪೀಠಿಕೆಯೊಂದಿಗೆ ಕಾಯ್ದೆಗಳನ್ನು ಪ್ರಸ್ತಾಪಿಸಿದ ಮೋದಿ ಕಾಯ್ದೆಗಳನ್ನು ಹಿಂಪಡೆಯುವ ನಿರ್ಧಾರವನ್ನು ಪ್ರಕಟಿಸಿದರು.

ಪವಿತ್ರ ಶುದ್ಧ ಯೋಜನೆ ಎಂದು ಪ್ರತಿಪಾದಿಸಿದ ಮೋದಿ, ದೇಶದ ರೈತ ಸಮುದಾಯಕ್ಕೆ ಮನವರಿಕೆ ಮಾಡಿಕೊಡಲು ನಾವು ಸೋತಿದ್ದೇವೆ. ಹಾಗಾಗಿ ಕೇಂದ್ರ ಸರ್ಕಾರ ಈ ಕಾಯ್ದೆಯನ್ನು ಹಿಂಪಡೆಯುತ್ತಿದ್ದು, ನವೆಂಬರ್ 29ರಿಂದ ಆರಂಭವಾಗಲಿರುವ ಚಳಿಗಾಲದ ಅಧಿವೇಶನದಲ್ಲಿ ಈ ಕುರಿತು ಸಾಂವಿಧಾನಿಕ ಪ್ರಕ್ರಿಯೆ ನಡೆಸಲಾಗುವುದು ಎಂದಿದ್ದಾರೆ.

ಒಂದು ವರ್ಷದ ಹೋರಾಟ, 650ಕ್ಕೂ ಹೆಚ್ಚು ರೈತರ ಸಾವು, ಚಳಿ, ಮಳೆ, ಪೊಲೀಸರ ದೌರ್ಜನ್ಯಗಳನ್ನು ಎದುರಿಸಿದ ರೈತರು ಸರ್ಕಾರ ಸೋಲೊಪ್ಪಿಕೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ರೈತ ಸಂಘಟನೆಗಳು ಸ್ಪಂದಿಸಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights