ಸಾಹುಕಾರ್ ಸಿಡಿ ಯುವತಿಯ ಅಪಹರಣ – ಕುಟುಂಬಸ್ಥರಿಂದ ದೂರು ದಾಖಲು!

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದ್ದು, ಸಿಡಿ ಮಹಿಳೆಯನ್ನು ಅಪಹರಿಸಲಾಗಿದೆ ಎಂದು ಅವಳ ಕುಟುಂಬಸ್ಥರು ದೂರು ನೀಡಿದ್ದಾರೆ. ಮಾತ್ರವಲ್ಲದೇ ಅವಳು ಅಪಾಯದಲ್ಲಿದ್ದಾಳೆಂದು ದೂರಲಾಗಿದೆ.

ಸಿಡಿ ಹಗರಣದಲ್ಲಿ ಭಾಗಿಯಾಗಿರುವ ಮಹಿಳೆಯ ಪೋಷಕರು ಆಕೆಯನ್ನು ಅಪಹರಿಸಲಾಗಿದೆ ಮತ್ತು ಆಕೆಯ ಜೀವಕ್ಕೆ ಅಪಾಯವಿದೆ ಎಂದು ಮಂಗಳವಾರ ರಾತ್ರಿ ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಯುವತಿ ತಂದೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಐಪಿಸಿ ಸೆಕ್ಷನ್ 363, 368, 343, 346, 354 ಮತ್ತು 506 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಪೋಷಕರು ತಮ್ಮ ವಿಡಿಯೋವನ್ನು ಸಹ ಬಿಡುಗಡೆ ಮಾಡಿದ್ದಾರೆ, ಅದರಲ್ಲಿ ತಮ್ಮ ಮಗಳ ಜೀವಕ್ಕೆ ಅಪಾಯವಿದೆ ಮತ್ತು ಆಕೆಯನ್ನು ಪತ್ತೆಹಚ್ಚಲು ಅವರಿಗೆ ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ. ಬಾಲಕಿಯ ತಂದೆ ಬೆಳಗಾವಿಯ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಕುವೆಂಪು ನಗರದಲ್ಲಿ ನೆಲೆಸಿದ್ದಾರೆ.

ಮಗಳೊಂದಿಗಿನ ತನ್ನ ಸಂಭಾಷಣೆಯನ್ನು ನೆನಪಿಸಿಕೊಂಡ ತಾಯಿ, “ನಾನು ಟಿವಿಯಲ್ಲಿ [ಅವಳ] ವೀಡಿಯೊವನ್ನು ನೋಡಿ ನನ್ನ ಮಗಳಿಗೆ ಕರೆ ಮಾಡಿದೆ. ಅವಳು [ಹುಡುಗಿ] ‘ನನಗೆ ಯಾವ ವೀಡಿಯೋ ಗೊತ್ತಿಲ್ಲ ಮತ್ತು ಅದು ನಾನಲ್ಲ. ಇದು ನಕಲಿ ಎಂದು ಹೇಳಿದ್ದಾಳೆ. ನಾನು ಯಾವುದೇ ತಪ್ಪು ಮಾಡಿಲ್ಲ ‘ ಎಂದಿದ್ದಾಳೆ. ಹೀಗಾಗಿ ನಾನು ಅವಳು ಯಾವುದೇ ತಪ್ಪು ಮಾಡದಿದ್ದರೆ ಮನೆಗೆ ಬರಲು ಹೇಳಿದೆ. ನಾನು ಬರುವುದಿಲ್ಲ ಎಂದು ಅವಳು ಹೇಳಿದ್ದಾಳೆ. ಅವಳ ಜೀವಕ್ಕೆ ಅಪಾಯವಿದೆ” ಎಂದು ತಾಯಿ ಅಳಲು ತೋಡಿಕೊಂಡಿದ್ದಾರೆ.

“ಅವಳು ಸುರಕ್ಷಿತವಾಗಿರುವ ಬಗ್ಗೆ ನಮಗೆ ಸಂದೇಶ ಕಳುಹಿಸುತ್ತಿದ್ದಳು. ನಂತರ, ತನ್ನನ್ನು ಸಂಪರ್ಕಿಸಬಾರದೆಂದು ಅವಳು ನಮ್ಮನ್ನು ಕೇಳಿಕೊಂಡಳು. ಈಗ ಅವಳ ಫೋನ್ ಆಫ್ ಮಾಡಲಾಗಿದೆ. ಮತ್ತೆ, ನಾವು ಟಿವಿಯಲ್ಲಿ ವೀಡಿಯೊವನ್ನು ನೋಡಿದೆವು, ಅವಳು ಆತ್ಮಹತ್ಯೆಯಿಂದ ಸಾಯಬೇಕೆಂದು ಬಯಸಿದ್ದಾಳೆಂದು ಹೇಳಿದ್ದಾಳೆ. ಇದು ನಮಗೆ ಅನುಮಾನ ಸೃಷ್ಟಿಸಿದೆ. ನಮ್ಮ ಮಗಳು ಅಪಾಯದಲ್ಲಿದ್ದಾಳೆ ಎಂದು ಬೆಳಗಾಮ್ ಠಾಣೆಯಲ್ಲಿ ಮಗಳನ್ನು ಅಪಹರಿಸಲಾಗಿದೆ ಎಂದು ದೂರು ದಾಖಲಿಸಲಾಗಿದೆ “ಎಂದು ಮಹಿಳೆಯ ತಾಯಿ ಹೇಳಿದ್ದಾರೆ.

ಕಳೆದ ವಾರ, ಮಹಿಳೆ ಸರ್ಕಾರದಿಂದ ರಕ್ಷಣೆ ಕೋರಿ ವಿಡಿಯೋ ಹೇಳಿಕೆ ನೀಡಿದ್ದರು. ವೀಡಿಯೊದಲ್ಲಿ, ಅವಳು ತನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾಳೆ.

“ನನಗೆ ರಕ್ಷಣೆ ಇಲ್ಲ. ನಾನು ನಿಮ್ಮೆಲ್ಲರನ್ನೂ ಕೇಳುವುದು ನನಗೆ ರಕ್ಷಣೆ ನೀಡಿ” ಎಂದು ಅವರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದರು.

“ವೀಡಿಯೊ ಸಾರ್ವಜನಿಕವಾದ ನಂತರ ನನ್ನ ಘನತೆ ಕಳೆದುಹೋಗಿದೆ. ಜನರು ನನ್ನ ಬಗ್ಗೆ ವಿಚಾರಿಸುತ್ತಿದ್ದಾರೆ. ನನ್ನ ಪೋಷಕರು ಎರಡು ಬಾರಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದರು ಮತ್ತು ನಾನು ಕೂಡ ಕನಿಷ್ಠ ಮೂರು ನಾಲ್ಕು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದೆ” ಎಂದು ಅವರು ವೀಡಿಯೊ ಸಂದೇಶದಲ್ಲಿ ಯುವತಿ ತಿಳಿಸಿದ್ದಳು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights