ಫ್ಯಾಕ್ಟ್‌ಚೆಕ್: ಪೊಲೀಸ್ ವೇಷದಲ್ಲಿ ಮನೆಗೆ ನುಗ್ಗಿದವರ CCTV ದೃಶ್ಯಗಳು ತಮಿಳುನಾಡಿನದಲ್ಲ!
ಪೊಲೀಸ್ ಸಮವಸ್ತ್ರ ಧರಿಸಿದ್ದ ವ್ಯಕ್ತಿಯೊಬ್ಬ ಮಹಿಳೆಯ ಮೇಲೆ ದಾಳಿ ಮಾಡಿ, ಬಲವಂತವಾಗಿ ಆಕೆಯ ಮನೆಗೆ ನುಗ್ಗಲು ಪ್ರಯತ್ನಿಸುತ್ತಿರುವ ಭಯಾನಕ CC TV ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಈ ಘಟನೆ ತಮಿಳುನಾಡಿನ ತಿರುಪುರ್ ನಗರದಲ್ಲಿ ನಡೆದಿದೆ ಎಂದು ಪ್ರತಿಪಾದಿಸಿ, ಯಾವುದೇ ಅಪರಿಚಿತರು ಮನೆ ಬಳಿ ಬಂದು ನೀರನ್ನು ಕೇಳಿದರೆ ಗೇಟ್‌ಗಳನ್ನು ತೆರೆಯಬೇಡಿ ಎಂದು ಜನರಿಗೆ ಎಚ್ಚರಿಕೆ ನೀಡುವಂತಹ ಹೇಳಿಕೆಗಳೊಂದಿಗೆ ಈ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. ಮಹಿಳೆಯೊಬ್ಬಳು ತನ್ನ ಮನೆಯ ಹೊರಗೆ ನಿಂತಿರುವ ವ್ಯಕ್ತಿಗೆ ಒಂದು ಲೋಟ ನೀರು ನೀಡುವುದರೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ. ಆ ವ್ಯಕ್ತಿ ಪೊಲೀಸ್ ಸಮವಸ್ತ್ರವನ್ನು ಧರಿಸಿರುವಂತೆ ತೋರುತ್ತಿದೆ.
https://twitter.com/ak_mdak/status/1576043409303044096
ಮಹಿಳೆಯೊಬ್ಬರು ಬಾಗಿಲು ತೆರೆದು ವ್ಯಕ್ತಿಯೊಬ್ಬನಿಂದ ನೀರಿನ ಲೋಟವನ್ನು ವಾಪಸ್ ತೆಗೆದುಕೊಳ್ಳುವ ಸಮಯದಲ್ಲಿ, ನೀರು ಕುಡಿದ ವ್ಯಕ್ತಿ ಇದ್ದಕ್ಕಿದ್ದಂತೆ ಮಹಿಳೆಯ ಮೇಲೆ ದಾಳಿ ಮಾಡಲು ಪ್ರಾರಂಭಿಸಿ, ಮಹಿಳೆಯನ್ನು ಮನೆಯೊಳಗೆ ಎಳೆದುಕೊಂಡು ಹೋಗುತ್ತಾನೆ. ತಕ್ಷಣ ಇನ್ನಿಬ್ಬರು ಮನೆಯೊಳಗೆ ನುಗ್ಗುತ್ತಾರೆ. ತಕ್ಷಣ ಮಹಿಳೆ ‘ಚೋರ್ ಚೋರ್’ (ಕಳ್ಳರು, ಕಳ್ಳರು) ಎಂದು ಜೋರಾಗಿ ಕೂಗಿಕೊಳ್ಳುತ್ತಾರೆ, ಆಗ ಕಳ್ಳರು ಮನೆಯಿಂದ ಓಡಿ ಹೋಗುವ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿವೆ.
Please don’t gv water to any unknown guy..see the video👇😱 pic.twitter.com/aBAhZbbmRe
— Divya Saxena Rastogi (@Divsbabs) October 3, 2022
ಈ ಘಟನೆ ತಮಿಳುನಾಡಿನಲ್ಲಿ ನಡೆದಿದೆ ಎಂದು ಪ್ರತಿಪಾದಿಸಿ ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ, ತಮಿಳು ಭಾಷಡಯಲ್ಲಿರುವ ಶೀರ್ಷಿಕೆಯನ್ನು ಭಾಷಾಂತರಿಸಿದ್ದು, “ದರೋಡೆಕೋರರು ನೀರು ಬೇಕು ಎಂದು ಹೇಳಿ ತಿರುಪುರ್ ಮಹಿಳೆಯ ಮೇಲೆ ದಾಳಿ ಮಾಡಿ ಹಲವಾರು ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ದೋಚಿದ್ದಾರೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.
ಫ್ಯಾಕ್ಟ್‌ಚೆಕ್ :
ಕೀವರ್ಡ್ ಸಹಾಯದಿಂದ ಗೂಗಲ್ ಸರ್ಚ್ ಮಾಡಿದಾಗ, ಈ ಘಟನೆ ಜೈಪುರದ ಕರ್ಧಾನಿ ಪ್ರದೇಶದಿಂದ ಬಂದಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿರುವುದು ಕಂಡುಬಂದಿದೆ. ವರದಿಗಳ ಪ್ರಕಾರ, ಈ ಘಟನೆ ಸೆಪ್ಟೆಂಬರ್ 13 ರಂದು ಕಾರ್ಧಾನಿಯಲ್ಲಿರುವ ಮಂಗಳಂ ಸಿಟಿ ಸೊಸೈಟಿಯಲ್ಲಿ ನಡೆದಿದೆ ಎಂದು ಇಂಡಿಯಾ ಟುಡೇ ಫ್ಯಾಕ್ಟ್‌ಚೆಕ್ ತಂಡ ವರದಿ ಮಾಡಿದೆ.
जयपुर में पुलिस बनकर आए चोरों ने घर में घुसने कि कोशिश की,
महिला ने बहादुरी दिखाकर भगाया।#Rajasthan #ViralVideo #Watch pic.twitter.com/kLUoda3Th8
— News24 (@news24tvchannel) September 14, 2022
ಈ ಘಟನೆಯಲ್ಲಿ ದಾಳಿಗೊಳಗಾದ ಮಹಿಳೆಯ ಬ್ರಿಜೇಶ್ ಕನ್ವರ್ ದೈನಿಕ್ ಭಾಸ್ಕರ್‌ಗೆ ಪ್ರತಿಕ್ರಿಯಿಸಿದ್ದು, ದರೋಡೆಕೋರರು ಪಿಸ್ತೂಲ್ ಬಳಸಿ ಹೆದರಿಸಲು ಪ್ರಯತ್ನಿಸಿದ್ದರು. ಆದರೆ ನಮ್ಮ ಮನೆಯ ನಾಯಿ ಮ್ಯಾಕಿ ಬೊಗಳಲು ಪ್ರಾರಂಭಿಸಿತು. ಅವರಲ್ಲಿ ಒಬ್ಬನ ಮೇಲೆ ದಾಳಿ ಮಾಡಿತು. ಅದರಿಂದ ಭಯ ಭೀತರಾದ ಅವರು ಏನನ್ನೂ ತೆಗೆದುಕೊಳ್ಳದೆ ಓಡಿಹೋದರು ಎಂದು ಬ್ರಿಜೇಶ್ ಕನ್ವರ್ ಹೇಳಿದ್ದಾರೆ.
ಈ ಘಟನೆ ಬಗ್ಗೆ ಬ್ರಿಜೇಶ್ ಪತಿ ಹೇಳಿದ್ದೇನು?
ಇಂಡಿಯಾ ಟುಡೇ ತನ್ನ ಜೈಪುರ ಮೂಲದ ಪತ್ರಕರ್ತ ರಾಮಗೋಪಾಲ್ ಜಾಟ್ ಅವರನ್ನು ಸಂಪರ್ಕಿಸಿದ್ದು, ಬ್ರಿಜೇಶ್ ಕನ್ವರ್ ಅವರ ಪತಿ ಭನ್ವರ್ ಸಿಂಗ್ ಅವರ ಪ್ರತಿಕ್ರಿಯೇ ಪಡೆದಿದ್ದು, ಅವರ ಪ್ರಕಾರ ವೈರಲ್ ವೀಡಿಯೊದಲ್ಲಿ ಕಾಣಿಸಿಕೊಂಡಿರುವ ಮಹಿಳೆ ನಿಜವಾಗಿಯೂ ಅವರ ಪತ್ನಿ ಬ್ರಿಜೇಶ್ ಕನ್ವರ್ ಎಂದು ಭನ್ವರ್ ಇಂಡಿಯಾ ಟುಡೇಗೆ ಖಚಿತಪಡಿಸಿದ್ದಾರೆ.
“ನಾವು ನಾಲ್ಕು ವರ್ಷಗಳ ಹಿಂದೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದೇವೆ. ನೈಜ ಘಟನೆ ನಡೆಯುವ ಕೆಲವು ದಿನಗಳ ಹಿಂದೆ ವಿಡಿಯೋದಲ್ಲಿರುವವರು ನನ್ನ ಮನೆಗೆ ಭೇಟಿ ನೀಡಿದ್ದರು ಎಂದು ದೃಶ್ಯಾವಳಿಗಳು ಬಹಿರಂಗಪಡಿಸಿವೆ. ಆಗ ಮನೆಯಲ್ಲಿ ಅಮ್ಮ ಮಾತ್ರ ಇದ್ದರು. ಅವರು ನನ್ನ ಬಗ್ಗೆ ವಿಚಾರಿಸಿ ಭೇಟಿ ನೀಡುವುದಾಗಿ ಹೇಳಿದ್ದರು ಎಂದು ಭನ್ವರ್ ಸಿಂಗ್ ಹೇಳಿದ್ದಾರೆ.
ಜೈಪುರ ಪೊಲೀಸರು ನೀಡಿರುವ ಈ ಪ್ರಕರಣಕ್ಕೆ ಸಂಬಂಧಿಸಿದ ಅಧಿಕೃತ ಪತ್ರಿಕಾ ಪ್ರಕಟಣೆಯನ್ನು ಭನ್ವರ್ ಸಿಂಗ್ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಇದನ್ನು ಇಲ್ಲಿ ನೋಡಬಹುದು.
ಜೈಪುರ ಪೊಲೀಸರು ಹೇಳಿದ್ದೇನು?
ವೀಡಿಯೊ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಇಂಡಿಯಾ ಟುಡೇ ಜೈಪುರದ ಹೆಚ್ಚುವರಿ ಪೊಲೀಸ್ ಆಯುಕ್ತ ಕೈಲಾಶ್ ಬಿಷ್ಣೋಯ್ ಅವರನ್ನು ಸಂಪರ್ಕಿಸಿದ್ದೇವೆ. ಈ ಘಟನೆ ನಿಜಕ್ಕೂ ಕರ್ಧಾನಿಯ ಮಂಗಳಂ ಸಿಟಿ ಸೊಸೈಟಿಯಲ್ಲಿ ನಡೆದಿದೆ ಎಂದು ದೃಢಪಡಿಸಿದ್ದು. “ಈ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ಆರು ಆರೋಪಿಗಳನ್ನು ಪೊಲೀಸರು ಬಂಧಿಸಲಾಗಿದೆ ” ಎಂದು ಹೇಳಿದ್ದಾರೆ.
The incident is from Jaipur. The accused were later arrested pic.twitter.com/CuSQzVJvkP
— Mohammed Zubair (@zoo_bear) October 3, 2022
ಮತ್ತೊಂದೆಡೆ, ತಮಿಳುನಾಡು ಪೊಲೀಸರು ಈ ಹೇಳಿಕೆಯನ್ನು ನಿರಾಕರಿಸಿದ್ದು, ಅದನ್ನು ‘ನಕಲಿ ಸುದ್ದಿ’ ಎಂದು ಕರೆದಿದ್ದಾರೆ. ತಮಿಳುನಾಡಿನಲ್ಲಿ ಮಹಿಳೆಯೊಬ್ಬರ ಮೇಲೆ ದಾಳಿ ಮಾಡಿದ ನಂತರ ದರೋಡೆಕೋರರು ಬಲವಂತವಾಗಿ ಮನೆಗೆ ನುಗ್ಗಿದ ಘಟನೆಯ ಕುರಿತು ನಮಗೆ ಯಾವುದೇ ಇತ್ತೀಚಿನ ವರದಿಗಳು ಕಂಡುಬಂದಿಲ್ಲ.
Don't Spread Fake News#வதந்தீ #DontSpreadFakeNews #KillFakeNews #BreakTheChain #DGPSylendrababuIPS #TNPolice pic.twitter.com/VmXhQQTjcL
— Tamil Nadu Police (@tnpoliceoffl) October 2, 2022
ಸ್ಪಷ್ಟವಾಗಿ, ಜೈಪುರದ ವೀಡಿಯೊವನ್ನು ತಮಿಳುನಾಡಿನ ತಿರುಪುರದಿಂದ ಬಂದಿದೆ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: Parle-G ಬಿಸ್ಕೆಟ್‌ನ ಕವರ್ ಫೋಟೋದಲ್ಲಿರುವ ಮಗು ಚಿತ್ರ ಸುಧಾಮೂರ್ತಿಯವರದ್ದೇ?

