ಕಾಶ್ಮೀರದ 3 ಸ್ಥಳಗಳಲ್ಲಿ ಭಯೋತ್ಪಾದಕರ ದಾಳಿ : ಸೈನಿಕರ ಮೇಲೆ ಗ್ರೆನೇಡ್ ಎಸೆತ!
ಕಾಶ್ಮೀರದಲ್ಲಿ ನಡೆದ 3 ಭಯೋತ್ಪಾದಕ ದಾಳಿಗಳಲ್ಲಿ ಸೈನಿಕರ ಮೇಲೆ ಗ್ರೆನೇಡ್ ಎಸೆಯಲಾಗಿದೆ.
ಕಾಶ್ಮೀರದಲ್ಲಿ ಶನಿವಾರ ಮೂರು ಪ್ರತ್ಯೇಕ ಭಯೋತ್ಪಾದಕ ದಾಳಿಗಳು ವರದಿಯಾಗಿದ್ದು, ಶ್ರೀನಗರ ನಗರದಲ್ಲಿ ಓರ್ವ ವ್ಯಕ್ತಿಯನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಇನ್ನೊಬ್ಬ ಗಾಯಗೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮೂರನೇ ದಾಳಿಯಲ್ಲಿ, ಅನಂತನಾಗ್ನ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) ಬಂಕರ್ ಮೇಲೆ ಗ್ರೆನೇಡ್ ಎಸೆಯಲಾಗಿದ್ದು ಸೇನೆ ಪ್ರಾಣಾಪಾಯದಿಂದ ಪಾರಾಗಿದೆ.
ಕಾರಾ ನಗರ ಪ್ರದೇಶದಲ್ಲಿ ಸಂಜೆ 5: 50 ರ ಸುಮಾರಿಗೆ ಭಯೋತ್ಪಾದಕರು ಮಜೀದ್ ಅಹ್ಮದ್ ಗೊಜ್ರಿ ಮೇಲೆ ಗುಂಡು ಹಾರಿಸಿದರು. ಈ ವೇಳೆ ಓರ್ವ ಭಯೋತ್ಪಾದಕ ತೀವ್ರವಾಗಿ ಗಾಯಗೊಂಡಿದ್ದನು. ಈತನನ್ನು ಆಸ್ಪತ್ರೆಗೆ ಕರೆದೊಯ್ಯುವ ಹೊತ್ತಿಗೆ ಮೃತಪಟ್ಟಿದ್ದಾನೆ.
ಘಟನೆ ನಡೆದ ತಕ್ಷಣ ಪೊಲೀಸರು ಮತ್ತು ಭದ್ರತೆ ಪ್ರದೇಶವನ್ನು ಸುತ್ತುವರಿದಿದ್ದು, ನಗರದ ಎಲ್ಲಾ ಪ್ರದೇಶಗಳಲ್ಲಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ ಮತ್ತು ವಿವಿಧ ಸ್ಥಳಗಳಲ್ಲಿ ತಪಾಸಣೆಯನ್ನು ತೀವ್ರಗೊಳಿಸಲಾಗಿದೆ.
ಆದರೂ ರಾತ್ರಿ ಸುಮಾರು 8 ಗಂಟೆಗೆ, ಇನ್ನೊಬ್ಬ ಮೊಹಮ್ಮದ್ ಶಾಫಿ ದಾರ್ ಎಂಬ ಭಯೋತ್ಪಾದಕ ಬ್ಯಾಟ್ಮಲೂ ನೆರೆಹೊರೆಯನ್ನು ಗುರಿಯಾಗಿಸಿದ್ದಾನೆ. ದಾರ್ ಗೆ ಗುಂಡೇಟಿನಿಂದ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ವರ್ಗಾಯಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎರಡೂ ಘಟನೆಗಳಲ್ಲಿ, ದಾಳಿಕೋರರನ್ನು ಪತ್ತೆ ಮಾಡಲು ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದರ ಜೊತೆಗೆ ಅನಂತನಾಗ್ನಲ್ಲಿ ದಕ್ಷಿಣ ಕಾಶ್ಮೀರ ಜಿಲ್ಲೆಯ ಕೆಪಿ ರಸ್ತೆಯಲ್ಲಿರುವ ಸಿಆರ್ಪಿಎಫ್ನ 40 ಬೆಟಾಲಿಯನ್ ಬಂಕರ್ ಮೇಲೆ ಭಯೋತ್ಪಾದಕರು ಗ್ರೆನೇಡ್ ಎಸೆದಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆದರೆ ಗ್ರೆನೇಡ್ ಗುರಿ ತಪ್ಪಿ ಯಾವುದೇ ಹಾನಿಯಾಗಿಲ್ಲ, ಸೇನೆ ನೆಲೆಯ ಹತ್ತಿರದಲ್ಲೇ ಗ್ರೆನೇಡ್ ಸ್ಫೋಟಗೊಂಡಿದೆ ಎಂದು ತಿಳೀದುಬಂದಿದೆ.