PUC result: 600ಕ್ಕೆ 600 ಅಂಕ ಪಡೆದ 2,239 ವಿದ್ಯಾರ್ಥಿಗಳು; ಇದೇ ಮೊದಲು!

2020-21ನೇ ಸಾಲಿನ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ರಾಜ್ಯದ್ಯಂತ 6,66,497 ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗಿದ್ದು, ಈ ಪೈಕಿ 2,239 ವಿದ್ಯಾರ್ಥಿಗಳು  600 ಅಂಕಗಳಿಗೆ 600 ಅಂಕಗಳನ್ನು ಪಡೆದಿದ್ದಾರೆ. ಇದೇ ಮೊದಲ ಬಾರಿಗೆ ಇಷ್ಟು ವಿದ್ಯಾರ್ಥಿಗಳು ಔಟ್‌ ಆಫ್‌ ಔಟ್‌ ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ ಎಂದು ತಿಳಿದು ಬಂದಿದೆ.

ವಿದ್ಯಾರ್ಥಿಗಳಿಗೆ, ಎಸ್‌ಎಸ್‌ಎಲ್‌ಸಿ, ಪ್ರಥಮ ಪಿಯುಸಿ ಅಂಕಗಳ ಆಧಾರದ ಮೇಲೆ ದ್ವಿತೀಯ ಪಿಯುಸಿ ಅಂಗಳನ್ನು ನೀಡಲಾಗಿದೆ. ಒಟ್ಟು 6,66,497 ವಿದ್ಯಾರ್ಥಿಗಳ ಪೈಕಿ 3,35,138 ಬಾಲಕರು ಹಾಗೂ 3,31,359 ವಿದ್ಯಾರ್ಥಿನಿಯರಿದ್ದಾರೆ.

ಒಟ್ಟು 95,628 ವಿದ್ಯಾರ್ಥಿಗಳು ಡಿಸ್ಟಿಂಗ್ಶನ್ ಪಡೆದಿದ್ದಾರೆ, 3,55,078 ವಿದ್ಯಾರ್ಥಿಗಳು ಪ್ರಥಮ ದರ್ಜಿ, 1,47,055 ವಿದ್ಯಾರ್ಥಿಗಳು ದ್ವಿತೀಯ ದರ್ಜಿ ಹಾಗೂ 68,729 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಅಲ್ಲದೆ, 07 ವಿದ್ಯಾರ್ಥಿಗಳ ಫಲಿತಾಂಶವನ್ನು ತಡೆಹಿಡಿಯಲಾಗಿದೆ.

ಒಟ್ಟು 2,239 ವಿದ್ಯಾರ್ಥಿಗಳು 600 ಅಂಕಗಳಿಗೆ 600 ಅಂಕಗಳನ್ನು ಗಳಿಸಿದ್ದಾರೆ. ಈ ಪೈಕಿ ಕಲಾ ವಿಭಾಗದಲ್ಲಿ 18 ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದಲ್ಲಿ 292 ವಿದ್ಯಾರ್ಥಿಗಳು ಹಾಗೂ ವಿಜ್ಞಾನ ವಿಭಾಗದಲ್ಲಿ 1,929 ವಿದ್ಯಾರ್ಥಿಗಳು 600 ಅಂಕ ಗಳಿಸಿದ್ದಾರೆ.

ಈ ಫಲಿತಾಂಶ ಬೇಡ ಎನ್ನುವವರಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಪೂರಕ ಹಾಗೂ ಖಾಸಗಿ ವಿದ್ಯಾರ್ಥಿಗಳಿಗೂ ಪರೀಕ್ಷೆಗೆ ಅವಕಾಶ ನೀಡಲಾಗಿದೆ. ಆಗಸ್ಟ್ ತಿಂಗಳಲ್ಲಿ ಪರೀಕ್ಷೆ ನಡೆಯಲಿದೆ.

ಪರೀಕ್ಷಾ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- 31-07-21
ಕಚೇರಿಗೆ ಅರ್ಜಿ ಸಲ್ಲಿಕೆಯ ಅಂತಿಮ ದಿನಾಂಕ-02-08-21

ಪೂರಕ ತಾತ್ಕಾಲಿಕ ವಾರ್ಷಿಕ ವೇಳಾಪಟ್ಟಿ ಪ್ರಕಟಿಸಲಾಗಿದ್ದು, ಆಗಸ್ಟ್ 19ರಿಂದ ಸೆ.3 ರವರೆಗೆ ಪರೀಕ್ಷೆ ನಿಗದಿಪಡಿಸಲಾಗಿದೆ.

ಇದನ್ನೂ ಓದಿ: ಪಿಯುಸಿ ಫಲಿತಾಂಶ: ಮೊದಲು ರಿಜಿಸ್ಟರ್ ನಂಬರ್ ಪಡೆಯಿರಿ; ಫಲಿತಾಂಶ ಪಡೆಯಲು ಇಲ್ಲಿ ಕ್ಲಿಕ್ ಮಾಡಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights