Bigg Boss : ಕ್ಯಾಮರಾ ಮುಂದೆ ಮತ್ತೊಂದು ಬೇಡಿಕೆ ಇಟ್ಟ ಶುಭಾ ಪೂಂಜಾ..!
ಬಿಗ್ ಬಾಸ್ ಮನೆಯಲ್ಲಿ ಶುಭಾ ಪೂಂಜಾ ಅವರಷ್ಟು ವಸ್ತುಗಳಿಗಾಗಿ, ತಿಂಡಿಗಳಿಗಾಗಿ ಅತೀ ಹೆಚ್ಚು ಬೇಡಿಕೆ ಇಟ್ಟ ಸದಸ್ಯರು ಬಹುಶ: ಯಾವ ಸೀಸನಲ್ಲೂ ಇಲ್ಲ ಎನ್ನುವ ಮಾತನ್ನು ಸುದೀಪ್ ವೀಕೆಂಡ್ ನಲ್ಲಿ ಹೇಳುತ್ತಲೇ ಇರುತ್ತಾರೆ.
ಬಿಗ್ ಬಾಸ್ ಮನೆಯಲ್ಲಿ ಕ್ಯಾಮರಾ ಮುಂದೆ ಅತೀ ಹೆಚ್ಚು ತಿನಿಸುಗಳಿಗಾಗಿ ಬೇಡಿಕೆ ಇಡುವ ಸ್ಪರ್ಧಿ ಅಂದ್ರೆ ಅದು ಶುಭಾ ಪೂಂಜಾ. ಬಿಗ್ ಬಾಸ್ ಚಿಕನ್ ಕಳುಹಿಸಿ, ಚಿಪ್ಸ್ ಕೊಡಿ, ಬಿರಿಯಾನಿ ಕೊಡಿ ಅದ್ರ ಜೊತೆ ಮೊಟ್ಟೆ ಇರಲಿ, ಬಿಗ್ ಬಾಸ್ ಟ್ರಿಪ್ ಕರೆದುಕೊಂಡು ಹೋಗಿ, ಬಿಗ್ ಬಾಸ್ ಮಳೆಯಲ್ಲಿ ಆಟ ಆಡಲು ಬಿಡಿ ಹೀಗೆ ಒಂದಾ? ಎರಡಾ?. ಹೀಗಾಗಿ ಶುಭಾ ಪೂಂಜಾ ಅವರ ಬೇಡಿಕೆಗಳನ್ನು ರಾಜ್ಯದ 6 ಕೋಟಿ ಜನ ಬಂದರೂ ಈಡೇರಿಸಲು ಸಾಧ್ಯವೇ ಇಲ್ಲ ಎನ್ನುವ ಮಾತನ್ನ ಈ ಹಿಂದೆ ಸುದೀಪ್ ಹೇಳಿದುಂಟು.
ನಿನ್ನೆ ಮತ್ತೆ ಶುಭಾ ಪೂಂಜಾ ಬೇಡಿಕೆಯೊಂದನ್ನ ಇಟ್ಟಿದ್ದಾರೆ. ಕ್ಯಾಮರಾ ಮುಂದೆ ಮಾತನಾಡುತ್ತಾ, ” ತಮಗೆ ಐ ಲ್ಯಾಷಸ್ ಕಳಿಸಲು ಚಿನ್ನಿ ಬಾಂಬ್ ಗೆ ಹೇಳಿ” ಎಂದಿದ್ದಾರೆ. ತಮ್ಮ ಬಳಿ ಇರುವ ಐ ಲ್ಯಾಷಸ್ ಖಾಲಿಯಾಗಿದ್ದು, ನಾಲ್ಕು ಐ ಲ್ಯಾಷಸ್ ಕಳುಹಿಸಲು ಬಿಗ್ ಬಾಸ್ ಮುಂದೆ ಬೇಡಿಕೆ ಇಟ್ಟಿದ್ದಾರೆ.
ಒಟ್ಟಿನಲ್ಲಿ ಬಿಗ್ ಬಾಸ್ ಮನೆಯಲ್ಲಿ ಮಂಜು ಪಾವಗಡ ಅವರದ್ದು ಒಂದು ರೀತಿಯ ಕಾಮಿಡಿಯಾದರೆ ಶುಭಾ ಪೂಂಜಾ ಅವರದ್ದು ಇನ್ನೊಂದು ರೀತಿಯ ಕಾಮಿಡಿ.