ಪಿಯುಸಿ ಫಲಿತಾಂಶ: ಮೊದಲು ರಿಜಿಸ್ಟರ್ ನಂಬರ್ ಪಡೆಯಿರಿ; ಫಲಿತಾಂಶ ಪಡೆಯಲು ಇಲ್ಲಿ ಕ್ಲಿಕ್ ಮಾಡಿ!

ದ್ವಿತೀಯ ಪಿಯುಸಿ ಫಲಿತಾಂಶ ಮಂಗಳವಾರ (ಇಂದು) ಸಂಜೆ 4 ಗಂಟೆಗೆ ಪ್ರಕಟವಾಗಿದೆ. ಫಲಿತಾಂಶಗಳು karresults.nic.in ಮತ್ತು pue.kar.nic.in ನಲ್ಲಿ ಲಭ್ಯವಿರುತ್ತದೆ. ಆದರೆ ಫಲಿತಾಂಶಗಳನ್ನು ಪರಿಶೀಲಿಸಲು ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆಯನ್ನು ಬಳಸಬೇಕಾಗುತ್ತದೆ.

ತಮ್ಮ ನೋಂದಾಯಿತ ಸಂಖ್ಯೆಗಳನ್ನು ತಿಳಿಯದ ವಿದ್ಯಾರ್ಥಿಗಳು ಪಿಯುಸಿ ವೆಬ್‌ಸೈಟ್‌ಗೆ ಭೇಟಿ ನೀಡಿ ‘ನನ್ನ ನೋಂದಣಿ ಸಂಖ್ಯೆ ತಿಳಿಯಿರಿ’ ಟ್ಯಾಬ್ ಕ್ಲಿಕ್ ಮಾಡಿ ಈಗಲೆ ತಿಳಿಯಬಹುದಾಗಿದೆ. ಸಂಜೆ ನಾಲ್ಕರ ನಂತರ ಈ ಸಂಖ್ಯೆಯನ್ನು ಬಳಸಿಕೊಂಡು ಫಲಿತಾಂಶವನ್ನು ಪಡೆಯಬಹುದಾಗಿದೆ.

ಪರ್ಯಾಯ ಮೌಲ್ಯಮಾಪನ ವಿಧಾನವನ್ನು ಬಳಸಿಕೊಂಡು ಫಲಿತಾಂಶಗಳನ್ನು ಸಿದ್ಧಪಡಿಸಲಾಗಿದೆ. ತಮಗೆ ಸಿಕ್ಕಂತಹ ಗ್ರೇಡಿಂಗ್‌ಗಳ ಬಗ್ಗೆ ವಿದ್ಯಾರ್ಥಿಗಳಿಗೆ ಆಕ್ಷೇಪಗಳಿದ್ದರೆ ನಂತರ ಅವರು ಪರೀಕ್ಷೆಗೆ ದೈಹಿಕವಾಗಿ ಹಾಜರಾಗಿ ಬರೆಯಬಹುದಾಗಿದೆ.

ದ್ವಿತೀಯ ಪಿಯಸಿಯ ಸಾಮಾನ್ಯ ವಿದ್ಯಾರ್ಥಿಗಳು ಮಾತ್ರವಲ್ಲದೆ, ರಿಪೀಟರ್‌‌‌ ವಿದ್ಯಾರ್ಥಿಗಳ ಫಲಿತಾಂಶವನ್ನೂ ಇಂದು ಘೋಷಿಸಲಾಗುವುದು.

ದ್ವಿತೀಯ ಪಿಯುಸಿ ಫಲಿತಾಂಶ-2021 ಅನ್ನು ಹೇಗೆ ಪರಿಶೀಲಿಸುವುದು?

  • ಫಲಿತಾಂಶ ತಿಳಿಯಲು ಮೊದಲಿಗೆ ರಿಜಿಸ್ಟರ್‌ ನಂಬರ್‌ ತಿಳಿದಿರಬೇಕು. ಅದಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ.
  • ಅಲ್ಲಿಂದ ನಿಮ್ಮ ಜಿಲ್ಲೆ ಮತ್ತು ನಿಮ್ಮ ಕಾಲೇಜ್‌ ಅನ್ನು ಆಯ್ಕೆ ಮಾಡಿಕೊಳ್ಳಬೇಕು.
  • ಕಾಲೇಜ್‌ ಮತ್ತು ಜಿಲ್ಲೆಯನ್ನು ಆಯ್ಕೆ ಮಾಡಿದಾಗ ನಿಮ್ಮ ರಿಜಿಸ್ಟರ್‌ ನಂಬರ್‌, ನಿಮ್ಮ ಹೆಸರು, ನಿಮ್ಮ ತಂದೆ ತಾಯಿಯ ಹೆಸರು, ಮತ್ತು ವಿದ್ಯಾರ್ಥಿ ನಂಬರ್‌ ಸಿಗುತ್ತದೆ.
  • ಅದರಲ್ಲಿ ನಿಮ್ಮ ರಿಜಿಸ್ಟರ್‌ ನಂಬರ್‌ ಅನ್ನು ಬರೆದಿಟ್ಟು ನಂತರ, ಫಲಿತಾಂಶದ ಟ್ಯಾಬ್‌ಗೆ ಪ್ರವೇಶಿಸಿ ಆ ಸಂಖ್ಯೆಯನ್ನು ಅಲ್ಲಿ ತುಂಬಬೇಕಾಗುತ್ತದೆ. ಅದಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ (ಇದನ್ನು ಫಲಿತಾಂಶ ಬಂದಾಗ ಅಪ್‌ಡೇಟ್ ಮಾಡಿ ಸುಲಭವಾಗಿ ನೀವು ಅಲ್ಲಿ ತಲುಪುವಂತೆ ಮಾಡುತ್ತೇವೆ)

ಮೇ 24 ಮತ್ತು ಜೂನ್ 16 ರ ನಡುವೆ ನಡೆಯಬೇಕಿದ್ದ ಕರ್ನಾಟಕ ಪಿಯುಸಿ ಪರೀಕ್ಷೆಗಳನ್ನು ಮೊದಲು ಮುಂದೂಡಲಾಯಿತಾದರೂ, ನಂತರ ಪರೀಕ್ಷೆಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಯಿತು.

Spread the love

Leave a Reply

Your email address will not be published. Required fields are marked *